
ಇಸ್ಲಾಮಾಬಾದ್ : ಪಾಕಿಸ್ತಾನ ಭಾರತದ ಮೇಲೆ ನಡೆಸಿರುವ ದಾಳಿಗೆ ಎಲ್ಲೆಡೆ ಖಂಡನೆ ವ್ಯಕ್ತವಾಗುತ್ತಿರುವ ಬೆನ್ನಲ್ಲೇ, ಮತ್ತೊಮ್ಮೆ ಪ್ರಧಾನಿ ಇಮ್ರಾನ್ ಖಾನ್ ಸಂಧಾನದ ಕುರಿತು ಮಾತನಾಡಿದ್ದಾರೆ. ಭಯೋತ್ಪಾದನೆ ಸೇರಿದಂತೆ ಎಲ್ಲ ವಿಷಯಗಳ ಜೊತೆ ಭಾರತದೊಂದಿಗೆ ನಾವು ಮಾತನಾಡಲು ಸಿದ್ಧ ಎಂದು ಮತ್ತೊಮ್ಮೆ ಪುನರುಚ್ಚಿಸಿದ್ದಾರೆ.
ಸಂಪುಟ ಸಭೆ ಬಳಿಕ ಮಾತನಾಡಿದ ಅವರು, ಎರಡು ಪ್ರಾದೇಶಿಕ ಪ್ರದೇಶದಲ್ಲಿ ಸ್ಥಿರತೆ ಹಾಗೂ ಶಾಂತಿ ಸ್ಥಾಪಿಸಲು ಇರುವ ಮಾರ್ಗ ಮಾತುಕತೆ ಎಂದಿದ್ದಾರೆ.
ಪುಲ್ವಾಮ ದಾಳಿ ಬಗ್ಗೆ ಪರಿಶೀಲನೆ ನಡೆಸಿ ಮಾಹಿತಿ ನೀಡುವಂತೆ ಭಾರತಕ್ಕೆ ಈಗಾಗಲೇ ತಿಳಿಸಿದ್ದೇನೆ. ಹಾಗೇ, ದ್ವಿಪಕ್ಷೀಯ ಸಂಬಂಧಗಳ ಕುರಿತು ಭಾರತದೊಂದಿಗೆ ಚರ್ಚಿಸಲು ಸಿದ್ಧ ಎಂದು ಕ್ಯಾಬಿನೆಟ್ ಸಭೆಯಲ್ಲಿ ತಿಳಿಸಿದರು ಎಂದು ಮೂಲಗಳು ತಿಳಿಸಿವೆ.
ಎರಡು ದೇಶಗಳ ನಡುವೆ ಉಂಟಾಗಿರುವ ಇಂತಹ ಸಂದಿಗ್ಧ ಸ್ಥಿತಿಯಲ್ಲಿ ಯಾವ ರೀತಿಯ ಕಾರ್ಯಾಚರಣೆ ನಡೆಸಬಹುದು ಎಂಬ ಕುರಿತು ಸಂಪುಟ ಸಭೆಯಲ್ಲಿ ಚರ್ಚೆ ನಡೆಸಲಾಯಿತು. ಪ್ರಸ್ತುತ ರಕ್ಷಣಾ ಪರಿಸ್ಥಿತಿ ಸೇರಿದಂತೆ 12 ಅಂಜೆಡಾಗಳ ಕುರಿತು ಕೂಡ ಖಾನ್ ಸಭೆ ನಡೆಸಿದರು. ಇದೇ ವೇಳೆ ಭಾರತದ ಆಕ್ರೋಶವನ್ನು ವಿದೇಶಾಂಗ ಸಚಿವಾಲಯ ಹಾಗೂ ರಕ್ಷಣಾ ಅಧಿಕಾರಿಗಳು ಸಂಪುಟ ಸಭೆಯಲ್ಲಿ ವಿವರಿಸಿದರು.
ದ್ವಿಪಕ್ಷಿಯ ಪ್ರಯತ್ನ ಹಾಗೂ ಅಂತರಾಷ್ಟ್ರೀಯ ಸಮುದಾಯದ ಮಾತುಕತೆ ಬೆಳವಣಿಗೆ ಕುರಿತು ಕೂಡ ಸಂಪುಟ ಸದಸ್ಯರಿಗೆ ವಿದೇಶಾಂಗ ಸಚಿವ ಶಾ ಮೆಹಮೂದ್ ಖುರೇಷಿ ತಿಳಿಸಿದರು.
ಪಾಕಿಸ್ತಾನದ ರಕ್ಷಣೆಗಾಗಿ ಇಡೀ ಪಾಕಿಸ್ತಾನ ಒಗ್ಗಟಾಗಿ ಸಿದ್ಧವಾಗಿದೆ ಎಂದು ಕ್ಯಾಬಿನೆಟ್ ಸಚಿವರು ಒಕ್ಕರಲಿನಿಂದ ತಿಳಿಸಿದರು ಎಂದು ಮೂಲಗಳು ತಿಳಿಸಿವೆ.
ಭಾರತದ ಆಕ್ರೋಶವನ್ನು ವಿಶ್ವಸಂಸ್ಥೆ, ಐಒಸಿ ಹಾಗೂ ಸ್ನೇಹಿತ ರಾಷ್ಟ್ರಗಳ ಮುಂದೆ ಪ್ರಸ್ತಾಪಿಸುವುದರ ಕುರಿತು ಕೂಡ ಕ್ಯಾಬಿನೆಟ್ ಒಪ್ಪಿಗೆ ಸೂಚಿಸಿದೆ.
ಇದನ್ನು ಮುನ್ನ ಜಿಯೋ ನ್ಯೂಸ್ನೊಂದಿಗೆ ಮಾತನಾಡಿದ ವಿದೇಶಾಂಗ ಸಚಿವ ಖರೇಶಿ, ನಮ್ಮ ವಶದಲ್ಲಿರುವ ಭಾರತದ ಪೈಲಟ್ನನ್ನು ನಾವು ಬಿಡುಗಡೆ ಮಾಡುತ್ತೇವೆ ಅಂದರೆ, ಎರಡು ರಾಷ್ಟ್ರಗಳ ನಡುವೆ ಉಂಟಾಗಿರುವ ಬಿಕ್ಕಟ್ಟನ್ನು ಶಮನಗೊಳಿಸಲು. ನರೇಂದ್ರ ಮೋದಿ ಅವರೊಂದಿಗೆ ದೂರವಾಣಿ ಮೂಲಕ ಮಾತನಾಡಲಿ ಪ್ರಧಾನಿ ಇಮ್ರಾನ್ ಖಾನ್ ಸಿದ್ದರಿದ್ದಾರೆ. ಆದರೆ ಮೋದಿ ಇದಕ್ಕೆ ಸಿದ್ದವಿದ್ದಾರೆಯೇ ಎಂದು ಪ್ರಶ್ನಿಸಿದರು.
Comments are closed.