ಅಂತರಾಷ್ಟ್ರೀಯ

Samsungನಿಂದ 3 ಹೊಸ ಸ್ಮಾರ್ಟ್‌ಫೋನ್ ಬಿಡುಗಡೆ; ಏನು ವಿಶೇಷ? ಬೆಲೆ ಎಷ್ಟು?

Pinterest LinkedIn Tumblr


Samsungನ ಬಹುನಿರೀಕ್ಷಿತ Galaxy A50, Galaxy A30, ಮತ್ತು Galaxy A10 ಮೊಬೈಲ್ ಫೋನ್‌ಗಳು ಭಾರತೀಯ ಮಾರುಕಟ್ಟೆಗೆ ಪದಾರ್ಪಣೆ ಮಾಡಿವೆ.

ಸ್ಯಾಮ್ಸಂಗ್ ಕಂಪನಿಯು Galaxy A ಎಂಬ ಹೊಸ ಶ್ರೇಣಿಯನ್ನು ಪರಿಚಯಿಸಿದ್ದು, ಸೂಪರ್ AMOLED ಪರದೆಯನ್ನು ಇದು ಹೊಂದಿದೆ. ಬಹು-ಕ್ಯಾಮೆರಾಗಳು ಮತ್ತು 4000mAh ಬ್ಯಾಟರಿ ಈ ಫೋನ್‌ಗಳ ವಿಶೇಷ.

ಬೆಲೆಗಳು:

Samsung Galaxy A50:
ಭಾರತದಲ್ಲಿ, 4GB RAM/ 64GB ಸ್ಟೋರೆಜ್ ಇರುವ Samsung Galaxy A50 ಬೆಲೆ ₹19990 ಆಗಿದ್ದರೆ, 6GB RAM/ 64GB ಸ್ಟೋರೆಜ್ ಇರುವ ಆವೃತ್ತಿಯ ಬೆಲೆ ₹22990 ಆಗಿದೆ. ನೀಲಿ, ಬಿಳಿ, ಮತ್ತು ಕಪ್ಪು ಬಣ್ಣಗಳಲ್ಲಿ ಈ ಫೋನ್ ಲಭ್ಯವಿದೆ.

Samsung Galaxy A30:

ಸ್ಯಾಮ್ಸಂಗ್ ಬಿಡುಗಡೆ ಮಾಡಿರುವ ಇನ್ನೊಂದು ಫೋನ್ Galaxy A30. ಮಾರುಕಟ್ಟೆಯಲ್ಲಿ ಇದರ ಬೆಲೆ ₹16990 ಆಗಿದೆ.

Samsung Galaxy A10:

ಮಾರುಕಟ್ಟೆಗೆ ಬಿಡುಗಡೆಯಾಗಿರುವ ಇನ್ನೊಂದು ಫೋನ್ Galaxy A10 ಬೆಲೆ ಬರೋಬ್ಬರಿ ₹8490 ಮಾತ್ರ! ಈ ಎರಡೂ ಫೋನ್ ಗಳು ಕೆಂಪು, ನೀಲಿ ಮತ್ತು ಕಪ್ಪು ಬಣ್ಣಗಳಲ್ಲಿ ಲಭ್ಯವಿದೆ.

ಮಾರಾಟ ಯಾವಾಗ?

Galaxy A50 ಮತ್ತು Galaxy A30 ಫೋನ್ ಗಳ ಮಾರಾಟ ಮಾ.02 ರಿಂದ ಆರಂಭವಾದರೆ, Galaxy A10 ಪೋನ್ ಮಾ.20 ರಿಂದ ಖರೀದಿಗೆ ಲಭ್ಯವಾಗಲಿದೆ.

ಸ್ಪೆಸಿಫಿಕೇಶನ್ಸ್:

Samsung Galaxy A50, Galaxy A30, ಮತ್ತು Galaxy A10 – ಈ ಎಲ್ಲಾ ಫೋನ್ ಗಳು Android Pie ಆಪರೇಟಿಂಗ್ ಸಿಸ್ಟಮ್ ಹೊಂದಿವೆ.

Samsung Galaxy A50:
Display: 6.40 ಇಂಚು
Resolution: 1080X2340 ಪಿಕ್ಸೆಲ್ಸ್
RAM: 4GB
ಮುಂಬದಿ ಕ್ಯಾಮೆರಾ: 25 MP
ಹಿಂಬದಿ ಕ್ಯಾಮೆರಾ: 25 MP +5 MP + 8 MP
OS: Android Pie
ಬ್ಯಾಟರಿ ಸಾಮರ್ಥ್ಯ: 4000 mAh
Storage: 64 GB

Samsung Galaxy A30:
Display: 6.40 ಇಂಚು
Resolution: 1080X2340 ಪಿಕ್ಸೆಲ್ಸ್
RAM: 4GB
ಮುಂಬದಿ ಕ್ಯಾಮೆರಾ: 16 MP
ಹಿಂಬದಿ ಕ್ಯಾಮೆರಾ: 16 MP+5 MP
OS: Android Pie
ಬ್ಯಾಟರಿ ಸಾಮರ್ಥ್ಯ: 4000 mAh
Storage: 64 GB

Samsung Galaxy A10:
Display: 6.20 ಇಂಚು
ಪ್ರೊಸೆಸರ್: Octa-core
ಮುಂಬದಿ ಕ್ಯಾಮೆರಾ: 5MP
ಹಿಂಬದಿ ಕ್ಯಾಮೆರಾ: 13 MP
OS: Android Pie
ಬ್ಯಾಟರಿ ಸಾಮರ್ಥ್ಯ: 3400 mAh

Comments are closed.