ಅಂತರಾಷ್ಟ್ರೀಯ

ಭಾರತ – ಪಾಕಿಸ್ತಾನಕ್ಕೆ ಒಬ್ಬನೇ ಶತ್ರು; ಅದರ ವಿರುದ್ಧ ಹೋರಾಡೋಣ: ಕ್ರಿಕೆಟಿಗ ವಾಸಿಂ ಅಕ್ರಂ

Pinterest LinkedIn Tumblr

ಇಸ್ಲಾಮಾಬಾದ್: ಭಾರತೀಯ ವಾಯುಸೇನೆಯ ಏರ್ ಸ್ಟ್ರೈಕ್ ನಿಂದ ನಿಂದಾಗಿ ಪಾಕಿಸ್ತಾನ ಮತ್ತು ಭಾರತ ನಡುವೆ ಯುದ್ಧ ಭೀತಿ ಶುರುವಾಗಿದ್ದು ಈ ನಡುವೆ ಪಾಕ್ ಮಾಜಿ ಕ್ರಿಕೆಟಿಗ ವಾಸಿಂ ಅಕ್ರಂ ಭಾರತ ಮತ್ತು ಪಾಕಿಸ್ತಾನಕ್ಕೆ ಒಬ್ಬನೇ ಶತ್ರು ಎಂದು ಹೇಳಿದ್ದಾರೆ.

ಪಾಕಿಸ್ತಾನ ಮತ್ತು ಭಾರತ ನಡುವೆ ಉಂಟಾಗಿರುವ ಆತಂಕದ ವಾತಾವರಣವನ್ನ ಗಮನಿಸಿರುವ ವಾಸಿಂ ಅಕ್ರಂ ಟ್ವೀಟರ್ ನಲ್ಲಿ ನನ್ನ ಭಾರವಾದ ಹೃದಯದಿಂದ ನಾನು ನಿಮ್ಮಲ್ಲಿ ಮನವಿ ಮಾಡುತ್ತೇನೆ. ಭಾರತ, ಪಾಕಿಸ್ತಾನ ಶತ್ರು ಅಲ್ಲ. ನಮ್ಮಬ್ಬರ ಶತ್ರು ಭಯೋತ್ಪಾದನೆ, ಇದನ್ನು ತಿಳಿದುಕೊಳ್ಳುವ ಮೊದಲು ಎಷ್ಟೋ ರಕ್ತವನ್ನು ಚೆಲ್ಲಿರುತ್ತೇವೆ. ಇದೇ ಯುದ್ಧವನ್ನು ನಾವಿಬ್ಬರು ಸೇರಿಕೊಂಡು ಭಯೋತ್ಪಾದನೆ ವಿರುದ್ಧ ಮಾಡೋಣ ಎಂದಿದ್ದಾರೆ.

ಪಾಕಿಸ್ತಾನದ ಹಲವು ನಾಯಕರು ಮತ್ತು ಮಾಜಿ ಕ್ರಿಕೆಟ್ ಆಟಗಾರರು ಉದ್ಧಟತನದ ಹೇಳಿಕೆ ನೀಡಿ ಟೀಕೆಗೆ ಗುರಿಯಾಗುತ್ತಿದ್ದಾರೆ. ಆದರೆ ವಾಸಿಂ ಅಕ್ರಂ ಮಾತ್ರ ಶಾಂತಿಯ ಮಂತ್ರ ಜಪಿಸುತ್ತಿದ್ದಾರೆ.

Comments are closed.