ಅಂತರಾಷ್ಟ್ರೀಯ

ಗನ್ ತೋರಿಸಿ ಬಾಂಗ್ಲಾ ದೇಶದ ಬಿಮಾನ್ ವಿಮಾನ ಹೈಜಾಕ್ ಮಾಡಲು ಯತ್ನ!

Pinterest LinkedIn Tumblr


ಢಾಕಾ: ಡಾಕಾ ಇಂಟರ್​ ​ನ್ಯಾಷನಲ್​ ವಿಮಾನ ನಿಲ್ದಾಣದಿಂದ ದುಬೈಗೆಸಂಚರಿಸುತ್ತಿದ್ದ ಬಿಮನ್​ ಬಿಜಿ 147 ವಿಮಾನವನ್ನ ಹೈಜಾಕ್​ ಮಾಡಲು ಖದೀಮರು ಯತ್ನಿಸಿದ್ದಾರೆ.

ವಿಮಾನದಲ್ಲಿದ್ದ ಒಬ್ಬ ಗನ್​ಮ್ಯಾನ್​, ವಿಮಾನವನ್ನು ನಿಯಂತ್ರಣಕ್ಕೆ ತೆಗೆದುಕೊಳ್ಳಲು ಪ್ರಯತ್ನಿಸಿದ ಕಾರಣ ಚಿತ್ತಗಾಂಗ್​ನ ಶಾ ಅಮಾನತ್​ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ತುರ್ತು ಲ್ಯಾಂಡ್​ ಮಾಡಲಾಗಿದೆ ಎಂದು ಬಾಂಗ್ಲಾದೇಶದ ಮಾಧ್ಯಮಗಳು ವರದಿ ಮಾಡಿವೆ.

ವಿಮಾನ ನಿಲ್ದಾಣದಲ್ಲಿ ಲ್ಯಾಂಡ್​ ಆಗುತ್ತಿದ್ದಂತೆ ಅಧಿಕಾರಿಗಳು ಅದನ್ನು ವಶಕ್ಕೆ ತೆಗೆದುಕೊಂಡಿದ್ದಾರೆ. ಅದರಲ್ಲಿದ್ದ ಎಲ್ಲ ಪ್ರಯಾಣಿಕರನ್ನೂ ಸುರಕ್ಷಿತವಾಗಿ ಇಳಿಸಲಾಗಿದೆ. ಆದರೆ ಆ ಗನ್​ಮ್ಯಾನ್​ ಏರ್ಪೋರ್ಟ್ ಆಧಿಕಾರಿಗಳು ವಶಕ್ಕೆ ಪಡೆದಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

Comments are closed.