ಅಂತರಾಷ್ಟ್ರೀಯ

ಅತಿ ಹೆಚ್ಚು ರೇಡಿಯೇಷನ್ ಹೊಂದಿರುವ ಫೋನ್ ಗಳ ಪಟ್ಟಿ!

Pinterest LinkedIn Tumblr


ಇಂದಿನ ದಿನಗಳಲ್ಲಿ ಸ್ಮಾರ್ಟ್ ಫೋನ್ ಅತ್ಯವಶ್ಯಕ ವಸ್ತುಗಳಲ್ಲಿ ಒಂದಾಗಿದೆ. ಇದರ ಸಹಾಯದಿಂದ ನಮ್ಮ ಹಲವಾರು ಕೆಲಸಗಳು ಸುಲಭವಾಗಿ ನಡೆಯುತ್ತವೆ. ಇನ್ನು ಪೋನ್ ಹಳೆಯದಾಯ್ತು ಎಂದು ಹೊಸ ಫೋನ್ ಖರೀದಿಸುವಾಗ ತಪ್ಪದೇ ಫೀಚರ್‌ಗಳನ್ನು ನೋಡುತ್ತೇವೆ. ಇದರಲ್ಲಿರುವ ಕ್ಯಾಮರಾ ಹೇಗಿದೆ? ಸೌಂಡ್ ಕ್ವಾಲಿಟಿ ಚೆನ್ನಗಿದೆಯಾ? ಇಂಟರ್ನೆಟ್ ಸ್ಪೀಡ್ ಎಷ್ಟಿದೆ? ಮೆಮೊರಿ ಎಷ್ಟು ನೀಡುತ್ತಾರೆ? ಇವೆಲ್ಲದರ ಮೇಲೆ ಹೆಚ್ಚಿನ ಗಮನ ನೀಡುತ್ತೇವೆ. ಆದರೀಗ ಇವೆಲ್ಲವನ್ನು ಹೊರತುಪಡಿಸಿ ಮತ್ತೊಂದು ವಿಚಾರವನ್ನೂ ಗಂಭೀರವಾಗಿ ಪರಿಗಣಿಸಬೇಕಿದೆ. ಸದ್ಯ ಪಟ್ಟಿಯೊಂದು ಬಿಡುಗಡೆಯಾಗಿದ್ದು, ಇದರಲ್ಲಿ ಯಾವ ಸ್ಮಾರ್ಟ್‌ಫೋನ್ ಅತಿ ಹೆಚ್ಚು ರೇಡಿಯೇಷನ್ ಬಿಡುಗಡೆ ಮಾಡುತ್ತದೆ ಎಂಬುವುದು ಬಹಿರಂಗಗೊಂಡಿದೆ.

ರೇಡಿಯೇಷನ್ ಎಂಬುವುದು ಸಾಮಾನ್ಯವಾಗಿ ಎಲ್ಲಾ ಸ್ಮಾರ್ಟ್‌ಫೋನ್ಗಳಲ್ಲಿ ಇರುತ್ತದೆ. ಆದರೀಗ ಜರ್ಮನ್ ಫೆಡರಲ್ ಆಫೀಸ್ ಆಫ್ ರೇಡಿಯೇಷನ್ ಪ್ರೊಟೆಕ್ಷನ್ ಸಂಸ್ಥೆಯು ಅತ್ಯಂತ ಹೆಚ್ಚು ರೇಡಿಯೇಷನ್ ಬಿಡುಗಡೆಗೊಳಿಸುವ ಸ್ಮಾರ್ಟ್‌ಫೋನ್ಗಳ ಪಟ್ಟಿ ಬಿಡುಗಡೆಗೊಳಿಸಿದೆ. ಈ ಪಟ್ಟಿಯಲ್ಲಿ ಕ್ಸಿಯೋಮಿ ಹಾಗೂ ವನ್ ಪ್ಲಸ್‌ನ ಸ್ಮಾರ್ಟ್‌ಫೋನ್ ಉಳಿದೆಲ್ಲ ಫೋನ್‌ಗಳಿಂಗಿಂತ ಮುಂಚೂಣಿಯಲ್ಲಿವೆ. ಒಟ್ಟು 16 ಫೋನ್‌ಗಳ ಪಟ್ಟಿ ಇಲ್ಲಿದೆ.

1. Xiaomi Mi A1
2. OnePlus 5T
3. Xiaomi Mi Max 3
4. OnePlus 6T
5. HTC U12 Life
6. Xiaomi Mi Mix 3
7. Google Pixel 3 XL
8. OnePlus 5
9. iPhone 7
10. Sony Xperia XZ1 Compact
11. HTC Desire 12/12+
12.Google Pixel 3
13. one Plus 6
14. iPhone 8
15. Xiaomi Redmi Note
16 ZTE AXON 7 mini

Comments are closed.