ಅಂತರಾಷ್ಟ್ರೀಯ

“ಪ್ರೇಮಿಗಳನ್ನು ಹುಡುಕಿಕೊಳ್ಳಿ” ಎಂದು ಮಹಿಳಾ ಉದ್ಯೋಗಿಗಳಿಗೆ ರಜೆ ಕೊಟ್ಟ ಎರಡು ಕಂಪನಿಗಳು

Pinterest LinkedIn Tumblr

ಬೀಜಿಂಗ್, ಜನವರಿ 25: ಒಂದೇ ಒಂದು ದಿನ ರಜಾ ಬೇಕು ಎಂದರೂ ಬಾಸ್ ಮುಂದೆ ಹೋಗಿ ಗೋಗರೆಯಬೇಕಾದ ಕಾಲದಲ್ಲಿ ‘ಪ್ರೇಮಿಗಳನ್ನು ಹುಡುಕಿಕೊಳ್ಳಿ’ ಎಂದು ಕಂಪನಿಯೇ ರಜೆ ನೀಡುವ ಬಗ್ಗೆ ಕೇಳಿದ್ದೀರಾ?

ಯವ್ವಿ ಯವ್ವಿ… ಹೀಗೂ ಉಂಟೆ? ಅಂತಿದ್ದೀರಾ? ಹೌದು, ಗರ್ಭಿಣಿಯರಿಗೆ ತಾಯ್ತನದ ರಜೆ ನೀಡುವುದಕ್ಕೂ ಜಿಪುಣತನ ತೋರುವ ಕಂಪನಿಗಳಿರುವಾಗ ಚೀನಾದ ಎರಡು ಕಂಪನಿಗಳು ತಮ್ಮಲ್ಲಿ ಕೆಲಸ ಮಾಡುವ ಮಹಿಳಾ ಉದ್ಯೋಗಿಗಳಿಗೆ ಸಂಗಾತಿಯನ್ನು ಹುಡುಕಿಕೊಳ್ಳುವುದಕ್ಕೆ ರಜೆ ನೀಡುತ್ತದೆಯಂತೆ.

ಹಂಗಜೌ ಸೊಂಗ್ಚೆಂಗ್ ಪರ್ಫಾರ್ಮೆನ್ಸ್ ಮತ್ತು ಹಂಗಜೌ ಸಾಂಗ್ಚೆಂಡ್ ಟೂರಿಸಂ ಮ್ಯಾನೇಜ್ಮೆಂಟ್ ಎಂಬ ಎರಡು ಕಂಪನಿಗಳು ಪ್ರೇಮಿಗಳಿಲ್ಲದ ಮಹಿಳಾ ಉದ್ಯೋಗಿಗಳಿಗೆ ಎಂಟು ದಿನಗಳ ಕಾಲ ರಜೆ ನೀಡಿ, ಸಂಗಾತಿಗಳನ್ನು ಹುಡುಕಿಕೊಳ್ಳಲು ಹೇಳುತ್ತದೆಯಂತೆ.

ಆದರೆ ಹೀಗೆ ರಜೆ ಪಡೆಯುವುದಕ್ಕೆ ಮಹಿಳೆಯರಿಗೆ 30 ವರ್ಷ ವಯಸ್ಸು ಮೀರಿರಬೇಕು. ಅಂದರೆ 30 ವರ್ಷ ವಯಸ್ಸಾದರೂ ಸಂಗಾತಿಗಳಿಲ್ಲದೆ ಖಿನ್ನತೆ ಅನುಭವಿಸುತ್ತಿರುವ, ಒಂಟಿನತದಿಂದ ಬಳಲುತ್ತಿರುವ ಮಹಿಳೆಯರಿಗೆ ಈ ರಜೆಯ ಸೌಲಭ್ಯ ಸಿಗಲಿದೆ.

ಹಂಗಜೌನ ಜಿಜಿಯಾಂಜ್ ನಲ್ಲಿರುವ ಹೈಸ್ಕೂಲ್ ವೊಂದರಲ್ಲಿಯೂ ಒಂಟಿಯಾಗಿರುವ ಶಿಕ್ಷಕರಿಗೆ ಪ್ರತಿ ತಿಂಗಳು ಎರಡು ದಿನ ಹೆಚ್ಚುವರಿ ರಜೆ ನೀಡುವ ಪರಿಪಾಠವನ್ನೂ ಇಕಟ್ಟುಕೊಳ್ಳಲಾಗಿದೆ!

Comments are closed.