ಅಂತರಾಷ್ಟ್ರೀಯ

48 ಮೆಗಾ ಪಿಕ್ಸೆಲ್ ಕ್ಯಾಮೆರಾ ಇರುವ ರೆಡ್‍ಮೀ ನೋಟ್7 ಚೀನಾ ಮಾರುಕಟ್ಟೆಗೆ ಬಿಡುಗಡೆ!

Pinterest LinkedIn Tumblr


ಬೀಜಿಂಗ್: 48 ಮೆಗಾ ಪಿಕ್ಸೆಲ್ ಕ್ಯಾಮೆರಾ ಇರುವ ರೆಡ್‍ಮೀ ನೋಟ್7 ಚೀನಾ ಮಾರುಕಟ್ಟೆಗೆ ಬಿಡುಗಡೆಯಾಗಿದೆ. 48 ಎಂಪಿ ಹೊಂದಿರುವ ಮೊದಲ ಕ್ಸಿಯೋಮಿ ಫೋನ್ ಇದಾಗಿದ್ದು, ಮೂರು ಮಾದರಿಯಲ್ಲಿ ಫೋನ್ ಬಿಡುಗಡೆಯಾಗಿದೆ.

3ಜಿಬಿ ರ‍್ಯಾಮ್, 32 ಜಿಬಿ ಆಂತರಿಕ ಮಮೊರಿಯ ಫೋನಿಗೆ 999 ಯುವಾನ್(ಅಂದಾಜು 10,300 ರೂ.), 4ಜಿಬಿ ರ‍್ಯಾಮ್, 64 ಜಿಬಿ ಆಂತರಿಕ ಮೆಮೊರಿಯ ಫೋನಿಗೆ 1,199 ಯುವಾನ್(ಅಂದಾಜು 12,400 ರೂ.) ನಿಗದಿಯಾಗಿದ್ದರೆ 6ಜಿಬಿ ರ‍್ಯಾಮ್ 64 ಜಿಬಿ ಆಂತರಿಕ ಮೆಮೊರಿಯ ಫೋನಿಗೆ 1,399 ಯುವಾನ್(ಅಂದಾಜು 14,500 ರೂ.) ನಿಗದಿಯಾಗಿದೆ.

ಹಿಂದುಗಡೆ 48 ಮೆಗಾ ಪಿಕ್ಸೆಲ್ ಸ್ಯಾಮ್‍ಸಂಗ್ ಜಿಎಂ1 ಸೆನ್ಸರ್, f/1.8 ಅಪಾರ್ಚರ್, 5 ಎಂಪಿ ಮತ್ತೊಂದು ಸೆನ್ಸರ್ ಅನ್ನು ಈ ಫೋನ್ ಹೊಂದಿದೆ. ಸ್ಯಾಮ್‍ಸಂಗ್ ಐಎಸ್‍ಓಸಿಎಲ್‍ಎಲ್ ಜಿಎಂ1 ಸೆನ್ಸರ್ ಅನ್ನು ಕಳೆದ ವರ್ಷದ ಅಕ್ಟೋಬರ್ ನಲ್ಲಿ ಬಿಡುಗಡೆ ಮಾಡಿತ್ತು.

ಜನವರಿ 15 ರಿಂದ ಈ ಫೋನಿನ ಮಾರಾಟ ಚೀನಾದಲ್ಲಿ ಆರಂಭವಾಗಲಿದೆ. ಚಿನ್ನ, ನೀಲಿ, ಕಪ್ಪು ಬಣ್ಣದಲ್ಲಿ ಈ ಫೋನ್ ಲಭ್ಯವಿರಲಿದೆ. ಭಾರತಕ್ಕೆ ಈ ಫೋನ್ ಯಾವಾಗ ಬಿಡುಗಡೆಯಾಗಲಿದೆ ಎನ್ನುವುದನ್ನು ಕ್ಸಿಯೋಮಿ ತಿಳಿಸಿಲ್ಲ. ಆದರೆ ಮಾಧ್ಯಮಗಳಿಗೆ ಸಿಕ್ಕಿರುವ ಮೂಲಗಳ ಮಾಹಿತಿ ಪ್ರಕಾರ ಫೆಬ್ರವರಿ ಮೊದಲ ವಾರದಲ್ಲಿ ಈ ಫೋನ್ ಭಾರತದಲ್ಲಿ ಬಿಡುಗಡೆಯಾಗುವ ಸಾಧ್ಯತೆಯಿದೆ.

ನೋಟ್ 7 ಗುಣವೈಶಿಷ್ಟ್ಯ:
159.2*75.2*8.1 ಮಿಲಿ ಮೀಟರ್ ಗಾತ್ರ, 186 ಗ್ರಾಂ ತೂಕ, ಹೈಬ್ರಿಡ್ ಡ್ಯುಯಲ್ ಸಿಮ್ ಸ್ಲಾಟ್, 6.3 ಇಂಚಿನ ಕೆಪಾಸಿಟೆಟಿವ್ ಐಪಿಎಸ್ ಎಲ್‍ಸಿಡಿ ಸ್ಕ್ರೀನ್ (1080*2340 ಪಿಕ್ಸೆಲ್, 409 ಪಿಪಿಐ) ಕಾರ್ನಿಂಗ್ ಗ್ಲಾಸ್ 5.

ಆಪರೇಟಿಂಗ್ ಸಿಸ್ಟಂ ಮತ್ತು ಮೆಮೊರಿ
ಆಂಡ್ರಾಯ್ಡ್ ಪೈ 9.0 ಓಎಸ್, ಕ್ವಾಲಕಂ ಸ್ನಾಪ್‍ಡ್ರಾಗನ್ 660 ಆಕ್ಟಾಕೋರ್ ಪ್ರೊಸೆಸರ್, ಆಡ್ರಿನೋ 512 ಗ್ರಾಫಿಕ್ಸ್ ಪ್ರೊಸೆಸರ್, 2ನೇ ಸಿಮ್ ಸ್ಲಾಟ್ ಬಳಕೆ ಮಾಡಿ ಗರಿಷ್ಟ 256 ಜಿಬಿವರೆಗಿನ ಮೆಮೊರಿ ಕಾರ್ಡ್ ಹಾಕಬಹುದು. 3ಜಿಬಿ ರ‍್ಯಾಮ್ 32 ಜಿಬಿ ಆಂತರಿಕ ಮೆಮೊರಿ/ 4 ಜಿಬಿ ರ‍್ಯಾಮ್ 32 ಜಿಬಿ ಆಂತರಿಕ ಮಮೊರಿ/ 6 ಜಿಬಿ ರ‍್ಯಾಮ್ 64 ಜಿಬಿ ಆಂತರಿಕ ಮೆಮೊರಿ.

ಕ್ಯಾಮೆರಾ, ಇತರೇ:
ಹಿಂದುಗಡೆ 48 ಎಂಪಿ ಮತ್ತು 5 ಎಂಪಿ ಇರುವ ಡ್ಯುಯಲ್ ಕ್ಯಾಮೆರಾ, ಡ್ಯುಯಲ್ ಎಲ್‍ಇಡಿ ಫ್ಲ್ಯಾಶ್, ಮುಂದುಗಡೆ 13 ಎಂಪಿ ಕ್ಯಾಮೆರಾ, ಫಿಂಗರ್ ಪ್ರಿಂಟ್ ಸೆನ್ಸರ್, ತೆಗೆಯಲು ಅಸಾಧ್ಯವಾದ ಲಿಪೋ 4000 ಎಂಎಎಚ್ ಬ್ಯಾಟರಿ, ಫಾಸ್ಟ್ ಬ್ಯಾಟರಿ ಚಾರ್ಜಿಂಗ್ ಕ್ವಿಕ್ ಚಾರ್ಜ್ 3, ಟೈಪಿ ಸಿ ಯುಎಸ್‍ಬಿ ಪೋರ್ಟ್

Comments are closed.