ಅಂತರಾಷ್ಟ್ರೀಯ

ಬೆಡ್ ರೂಮಿನಲ್ಲಿ ಪತ್ನಿಯ ಹಾವಿನ ರೂಪದ ವಿಚಿತ್ರ ಉಡುಪು ನೋಡಿ ಪತಿ ಮಾಡಿದ್ದೇನು ಗೊತ್ತಾ!

Pinterest LinkedIn Tumblr


ಕ್ಯಾನ್ಬೆರಾ: ಸಾಮಾನ್ಯವಾಗಿ ಪತ್ನಿಯರು ತಮ್ಮ ಪತಿಯನ್ನು ಆಕರ್ಷಿಸಲು ತುಂಬಾ಻ಷ ಚೆನ್ನಾಗಿರುವ ಅಥವಾ ಹಾಟ್ ಆಗಿರುವ ವಿವಿಧ ರೀತಿ ಉಡುಪುಗಳನ್ನು ಧರಿಸುತ್ತಾರೆ. ಆದರೆ ಇಲ್ಲೊಬ್ಬ ಮಹಿಳೆ ಪತಿಯನ್ನು ಆಕರ್ಷಿಸಲು ವಿಚಿತ್ರ ಉಡುಪು ಧರಿಸಿದ್ದು, ಇದರಿಂದ ಪತಿ ಹೆಂಡತಿಯನ್ನೇ ನೋಡಿ ದಂಗಾಗಿರುವ ಘಟನೆ ಆಸ್ಟ್ರೇಲಿಯಾದಲ್ಲಿ ನಡೆದಿದೆ.

ಇತ್ತೀಚಿಗೆ ಫ್ಯಾಷನ್ ಜಗತ್ತಿನಲ್ಲಿ ವಿಭಿನ್ನವಾದ ರೀತಿಯ ಉಡುಪುಗಳು ಅಂದರೆ ಪ್ರಾಣಿ, ಪಕ್ಷಿಗಳ ಚಿತ್ರವಿರುವ ಉಡುಪುಗಳು ಮಾರುಕಟ್ಟೆಗೆ ಬರುತ್ತಿದೆ. ಇಂತಹ ಉಡುಪುಗಳು ಮಹಿಳೆಯರನ್ನು ಬಹುಬೇಗ ಆಕರ್ಷಿಸುತ್ತವೆ. ಆದರೆ ಆಸ್ಟ್ರೇಲಿಯಾ ಮಹಿಳೆ ಇಂತಹ ವಿಚಿತ್ರ ಉಡುಪು ಧರಿಸಿ ಈಗ ಆಸ್ಪತ್ರೆಗೆ ದಾಖಲಾಗಿದ್ದಾಳೆ.

ಮಹಿಳೆ ಹಾವಿನ ರೂಪದ ಉದ್ದನೆಯ ಸ್ಟಾಕಿಂಗ್ಸ್ ತೊಟ್ಟು ಹಾಸಿಗೆ ಮೇಲೆ ಮಲಗಿದ್ದಾಳೆ. ಈ ವೇಳೆ ಆಕೆಯ ಪತಿ ಬೆಡ್ ರೂಂಗೆ ಬಂದಿದ್ದಾನೆ. ಆಗ ಹಾಸಿಗೆಯ ಮೇಲಿನ ಪತ್ನಿಯ ಕಾಲುಗಳನ್ನು ನೋಡಿ ನಿಜವಾದ ಎರಡು ಹಾವು ಬಂದಿದೆ ಎಂದು ತಿಳಿದು ಪತಿ ದಂಗಾಗಿದ್ದಾನೆ. ಬಳಿಕ ಮೆಲ್ಲಗೆ ಬಂದು ಬೇಸ್‍ಬಾಲ್ ಬ್ಯಾಟ್ ತೆಗೆದುಕೊಂಡು ಹಾವಿನ ತಲೆ ಎಂದುಕೊಂಡು ಪತ್ನಿಯ ಕಾಲಿಗೆ ಹೊಡೆದಿದ್ದಾನೆ. ಪರಿಣಾಮ ಪತ್ನಿಯ ಕಾಲಿಗೆ ಬಲವಾದ ಏಟು ಬಿದ್ದು ರಕ್ತ ಬಂದಿದೆ.

ನಂತರ ನಿಜಾಂಶ ತಿಳಿದುಕೊಂಡ ಪತಿ ತಕ್ಷಣ ಪತ್ನಿಯನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಮಹಿಳೆ ಧರಿಸಿದ್ದ ಹಾವಿನ ಚಿತ್ರದ ಸ್ಟಾಕಿಂಗ್ಸ್ ಮತ್ತು ಇನ್ನೊಂದು ಕಡೆ ಆಕೆಗೆ ಪೆಟ್ಟಾಗಿ ಬ್ಯಾಂಡೇಜ್ ಮಾಡಿರುವ ಫೋಟೋವನ್ನು ಆಸ್ಟ್ರೇಲಿಯಾದ ಫೇಸ್‍ಬುಕ್ ಪೇಜ್ ನಲ್ಲಿ ‘ಗಂಭೀರವಾದ ಪೋಸ್ಟ್’ ಎಂದು ಬರೆದು ನಡೆದ ಘಟನೆಯ ಬಗ್ಗೆ ವಿವರಿಸಿದೆ. ಅಷ್ಟೇ ಅಲ್ಲದೇ ಇನ್ನು ಮುಂದೆ ಮಹಿಳೆಯರು ಪ್ರಾಣಿ ಚಿತ್ರದ ಪ್ರಿಂಟ್ ಇರುವ ಸ್ಟಾಕಿಂಗ್ಸ್ ಉಡುಪನ್ನು ಖರೀದಿಸುವಾಗ ಮತ್ತು ಧರಿಸುವಾಗ ಎಚ್ಚರವಾಗಿರಿ ಎಂದು ತಿಳಿಸಿದೆ.

ಮಹಿಳೆ ಧರಿಸಿರುವ ಸಾಕ್ಸ್ ಫೋಟೋ ಸಾಮಾಜಿಕ ಜಾಲತಾಣಗಲ್ಲಿ ವೈರಲ್ ಆಗುತ್ತಿದ್ದು, ಈ ಪೋಸ್ಟನ್ನು ಸುಮಾರು 800ಕ್ಕೂ ಅಧಿಕ ಮಂದಿ ಶೇರ್ ಮಾಡಿದ್ದು, 300ಕ್ಕೂ ಅಧಿಕ ಜನರು ಕಮೆಂಟ್ ಮಾಡಿದ್ದಾರೆ.

Comments are closed.