ಅಂತರಾಷ್ಟ್ರೀಯ

ಅಮೆರಿಕಾ: ಬೆಂಕಿಯ ಕೆನ್ನಾಲಿಗೆಗೆ ತೆಲಂಗಾಣ ಮೂಲದ 3 ಮಕ್ಕಳ ಬಲಿ!

Pinterest LinkedIn Tumblr


ನವದೆಹಲಿ: ಅಗ್ನಿ ದುರಂತವೊಂದರಲ್ಲಿ ಭಾರತ ಮೂಲದ 3 ಮಕ್ಕಳು ಸಾವನ್ನಪ್ಪಿರುವ ಘಟನೆ ಅಮೆರಿಕಾದಲ್ಲಿ ನಡೆದಿದೆ. ಅಮೆರಿಕದ ಟೆನ್ನೆಸ್ಸೀಯದ ಕೊಲ್ಲಿವಿಲ್ಲೆಯಲ್ಲಿನ ನಿವಾಸದಲ್ಲಿ ಸಂಭವಿಸಿದ ಭಾರೀ ಅಗ್ನಿ ಅವಘಡದಲ್ಲಿ ತೆಲಂಗಾಣ ಮೂಲದ ಮೂವರು ಒಡಹುಟ್ಟಿದವರು ಮೃತಪಟ್ಟಿದ್ದಾರೆ ಎನ್ನಲಾಗಿದೆ.

ಇಡೀ ಕುಟುಂಬ ಕ್ರಿಸ್ಮಸ್ ಸಂಭ್ರಮಾಚರಣೆಯಲ್ಲಿ ತೊಡಗಿತ್ತು. ಈ ವೇಳೆ ಮನೆಯಲ್ಲಿ ಅಗ್ನಿ ಅವಘಡ ಸಂಭವಿಸಿದೆ. ಈ ದುರಂತಕ್ಕೆ ಶರೋನ್ ನಾಯಕ್(14), ಜೋಯ್ ನಾಯಕ್(15) ಮತ್ತು ಅರೋನ್ ನಾಯಕ್(17) ಎಂಬ ಮೂವರು ಬಲಿಯಾಗಿದ್ದಾರೆ ಎಂದು ಗುರುತಿಸಲಾಗಿದೆ. ಅಲ್ಲದೇ ಮೃತರು ಮಿಷಿನರಿ ಕುಟುಂಬಕ್ಕೆ ಸೇರಿದ್ದು, ಪೋಷಕರು ತೆಲಂಗಾಣ ಮೂಲದ ನೆರೆಡುಗುಮ್ಮ ಮಂಡಲದ ಗುರಪ್ಪ ತಾಂಡದವರು ಎಂದು ತಿಳಿದು ಬಂದಿದೆ.

ಈ ಸಂಬಂಧ ಪೊಲೀಸ್​​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ಪ್ರಕರಣದ ತನಿಖೆಯನ್ನು ಮುಂದುವರೆಸಿದ್ದಾರೆ. ಜೊತೆಗೆ ವರದಿ ಪ್ರಕಾರ ಕ್ರಿಸ್ಮಸ್​​ಗೆ 2 ದಿನಗಳ ಮುನ್ನವೇ ಸಂಭವಿಸಿದ ಅಗ್ನಿ ಅವಘಡದಲ್ಲಿ ಮೂವರು ಸೇರಿ ಮೃತಪಟ್ಟಿದ್ದಾರೆ ಎಂದು ಹೇಳಲಾಗಿದೆ. ಆದರೆ, ಎಲ್ಲವೂ ತನಿಖೆ ನಂತರ ಸತ್ಯಾಸತ್ಯತೆಗಳು ಹೊರಬರಲಿದೆ ಎಂದು ಪೊಲೀಸರು ತಿಳಿಸಿದ್ಧಾರೆ.

Comments are closed.