ರಾಷ್ಟ್ರೀಯ

ಲೋಕಸಭಾ ಚುನಾವಣೆ: ಬಿಜೆಪಿಯಿಂದ 17 ರಾಜ್ಯಗಳಿಗೆ ಚುನಾವಣೆ ಉಸ್ತುವಾರಿ ನೇಮಕ!

Pinterest LinkedIn Tumblr
Lucknow: BJP President Amit Shah 

ನವದೆಹಲಿ: ಲೋಕಸಭಾ ಚುನಾವಣೆ ಸಮೀಪಿಸುತ್ತಿದೆ. ದೇಶದೆಲ್ಲೆಡೆ ಬಿಜೆಪಿ ಭರ್ಜರಿ ತಯಾರಿ ನಡೆಸಿಕೊಳ್ಳುತ್ತಿದೆ. ಪಂಚರಾಜ್ಯ ಚುನಾವಣೆಯ ಸಂದರ್ಭದಲ್ಲಿ ಬಿಜೆಪಿ ಕೇಂದ್ರ ನಾಯಕರ ಕಣ್ಣು ತೆಲಂಗಾಣದ ಮೇಲೆ ನೆಟ್ಟಿತ್ತು. ಹೇಗಾದರೂ ಮಾಡಿ ಅಲ್ಲಿ ಬಿಜೆಪಿ ತನ್ನ ಖಾತೆ ತೆರೆಯಬೇಕೆಂದು ನಿರ್ಧರಿಸಿತ್ತು. ಹೀಗಾಗಿಯೇ ಈಗಿನಿಂದಲೇ ಸಿದ್ದತೆ ನಡೆಸಿಕೊಳ್ಳುತ್ತಿದ್ದು, ತೆಲಂಗಾಣ ರಾಜ್ಯ ಚುನಾವಣಾ ಉಸ್ತುವಾರಿ ನೇಮಿಸಲಾಗಿದೆ. ಮಹದೇವಪುರ ಶಾಸಕ, ಬಿಜೆಪಿ ಹಿರಿಯ ಮುಖಂಡ ಅರವಿಂದ ಲಿಂಬಾವಳಿಗೆ ಲೋಕಸಭೆ ಮಹತ್ವದ ಜವಾಬ್ದಾರಿ ನೀಡಿದ್ದಾರೆ. ಬಿಜೆಪಿ ಹೈಕಮಾಂಡ್​​ ಅಮಿತ್​​ ಶಾ ಅವರೇ ಖುದ್ದು, ತೆಲಂಗಾಣ ಚುನಾವಣಾ ಉಸ್ತುವಾರಿಯಾಗಿ ಅರವಿಂದ್​​ ಲಂಬಾವಳಿ ಅವರನ್ನು ನೇಮಿಸಿದ್ದಾರೆ ಎನ್ನಲಾಗಿದೆ.

ಮುಂಬರುವ ಲೋಕಸಭಾ ಚುನಾವಣೆಯಲ್ಲಿ ತೆಲಂಗಾಣದಲ್ಲಿ ಬಿಜೆಪಿ ಪ್ರತ್ಯೇಕವಾಗಿ ಸ್ಪರ್ಧಿಸಲಿದೆ. ‘ನಾವು ಯಾರೊಂದಿಗೂ ಮೈತ್ರಿ ಮಾಡಿಕೊಳ್ಳುವುದಿಲ್ಲ. ಬಿಜೆಪಿ ಪಕ್ಷವೂ ಏಕಾಂಗಿಯಾಗಿ ಹೋರಾಡಲಿದೆ. ನಾವು ಇಲ್ಲಿ ಸಾಧ್ಯವಾದಷ್ಟು ಲೋಕಸಭಾ ಸೀಟುಗಳನ್ನು ಗೆಲ್ಲಲು ಪ್ರಯತ್ನಿಸುತ್ತೇವೆ. ರಾಜ್ಯದ ಜನರ ಭರವಸೆಯನ್ನು ಈಡೇರಿಸುವಲ್ಲಿ ಟಿಆರ್​ಎಸ್​​ ವಿಫಲವಾಗಿದೆ. ಜನ ಈ ಬಾರಿ ನಮಗೆ ಮತ ಹಾಕಲಿದ್ಧಾರೆ ಎಂದು ಈ ಹಿಂದೆಯೇ ಬಿಜೆಪಿ ನಾಯಕ ಕೆ. ಲಕ್ಷ್ಮಣ್ ತಿಳಿಸಿದ್ದಾರೆ.

ಇನ್ನು ಆಡಳಿತರೂಢ ಟಿಆರ್​ಎಸ್ ಲೋಕಸಭಾ ಚುನಾವಣೆಯಲ್ಲಿ​​ ಬಿಜೆಪಿ ಜೊತೆಗೆ ಮೈತ್ರಿ ಮಾಡಿಕೊಳ್ಳಿದೆ ಎಂಬ ಮಾತುಗಳು ಕೇಳಿ ಬಂದಿದ್ದವು. ಇದಕ್ಕೆ ಪ್ರತಿಕ್ರಿಯಿಸಿರುವ ಸಿಎಂ ಕೆಸಿಆರ್​​ ಪುತ್ರ ಕೆಟಿ ರಾಮರಾವ್, ಯಾವುದೇ ಕಾರಣಕ್ಕೂ ಟಿಆರ್​​ಎಸ್ ಬಿಜೆಪಿ ಜೊತೆ ಮೈತ್ರಿ ಮಾಡಿಕೊಳ್ಳುವುದಿಲ್ಲ. ಬಿಜೆಪಿಯನ್ನು ನಾವು ಬೆಂಬಲಿಸುವುದೂ ಇಲ್ಲ. ಟಿಆರ್​​ಎಸ್ ಪ್ರಾದೇಶಿಕ ಹಾಗೂ ಜಾತ್ಯತೀತ ಪಕ್ಷವಾಗಿದ್ದು, ಪ್ರಜೆಗಳನ್ನು ಸಮಾಜಮುಖಿ ದಾರಿಯಲ್ಲಿ ಕೊಂಡೊಯ್ಯಲು ಪ್ರಯತ್ನಿಸುವ ಪಕ್ಷದೊಂದಿಗೆ ಮೈತ್ರಿಗೆ ಹೋಗುತ್ತೇವೆಂದು ಹೇಳಿದ್ದರು.

ತೆಲಂಗಾಣ ಮಾದರಿಯಲ್ಲೇ ದೇಶದ 17 ರಾಜ್ಯಗಳಿಗೆ ಬಿಜೆಪಿ ಹೈಕಮಾಂಡ್​​​ ಅಮಿತ್​​ ಶಾ ಅವರು,​​ ಚುನಾವಣೆ ಉಸ್ತುವಾರಿಗಳನ್ನು ನೇಮಿಸಿದ್ಧಾರೆ.

ಹೀಗಿದೆ ಪಟ್ಟಿ…

ಆಂದ್ರಪ್ರದೇಶ- ವಿ.ಮುರುಳೀಧರನ್, ಸಹ ಉಸ್ತುವಾರಿ- ಸುನೀಲ್ ದೇವಧರ್​
ತೆಲಂಗಾಣ- ಅರವಿಂದ ಲಿಂಬಾವಳಿ
ಆಸ್ಸಾಂ – ಮಹೇಂದ್ರ ಸಿಂಗ್
ಬಿಹಾರ- ಭೂಪೇಂದ್ರ ಯಾದವ್
ಛತ್ತಿಸ್​ಗಢ- ಡಾ.ಅನಿಲ ಜೈನ್
ಗುಜರಾತ್ – ಓಂ ಪ್ರಕಾಶ್ ಮಯೂರ
ರಾಜಸ್ಥಾನ – ಪ್ರಕಾಶ್ ಜಾವಡೇಕರ್, ಸಹ ಉಸ್ತುವಾರಿ- ಸುದಾಂಶು ತ್ರಿವೇದಿ
ಸಿಕ್ಕಿಂ – ನಿತಿನ್​ ನವೀನ್​
ಉತ್ತರಾಖಂಡ -ತಾವರ್​ಚೆಂದ್​ ಗೆಹ್ಲೋಟ್​
ಉತ್ತರಪ್ರದೇಶ – ಗೋವರ್ಧನ್​ ಜದಾಪಿಯ, ಸಹ ಉಸ್ತುವಾರಿ- ದುಶ್ಯಂತ್​ ಗೌತಮ್​, ನರೋತ್ತಮ್​ ಮಿಶ್ರಾ
ಚಂಡೀಗಢ- ಕ್ಯಾಪ್ಟನ್​ ಅಭಿಮನ್ಯು

Comments are closed.