ಅಂತರಾಷ್ಟ್ರೀಯ

ಫಿಲಿಪೈನ್ಸ್ ನ ಕ್ಯಾಟ್ರಿಯಾನಾ ಎಲಿಸಾ ಗ್ರೇ ಭುವನ ಸುಂದರಿ-2018 ಪಟ್ಟ

Pinterest LinkedIn Tumblr

ಫಿಲಿಪೈನ್ಸ್ ನ ಕ್ಯಾಟ್ರಿಯಾನಾ ಎಲಿಸಾ ಗ್ರೇ ಭುವನ ಸುಂದರಿ ಪಟ್ಟ ಒಲಿದಿದ್ದು, ದಕ್ಷಿಣ ಆಫ್ರಿಕಾ ಹಾಗೂ ವೆನಿಜ್ಯುವೆಲ್ಲಾದ ಸುಂದರಿಯರು ನಂತರದ ಎರಡು ಸ್ಥಾನದಲ್ಲಿದ್ದಾರೆ.

ಭಾರತದಿಂದ ಆಯ್ಕೆಯಾಗಿದ್ದ ನೆಹಾಲ್ ಚುದಾಸಮಾ ಟಾಪ್ 20 ಪಟ್ಟಿಯಿಂದ ಹೊರಗುಳಿದಿದ್ದಾರೆ. 2017 ನೇ ಸಾಲಿನ ಭುವನ ಸುಂದರಿ ದಕ್ಷಿಣ ಆಫ್ರಿಕಾದ ಡೆಮಿ ಲೀ ನೆಲ್-ಪೀಟರ್ಸ್ ಫಿಲಿಪೈನ್ಸ್ ನ ಕ್ಯಾಟ್ರಿಯಾನಾ ಎಲಿಸಾ ಗ್ರೇ ಗೆ ಕಿರೀಟ ತೊಡಿಸಿದ್ದಾರೆ. ಘೋಷಣೆಗೂ ಮುನ್ನ ಗ್ರೇ ಅವರಿಗೆ ಅವರು ಜೀವನದಲ್ಲಿ ಕಲಿತ ಅತ್ಯಂತ ಮಹತ್ವದ ಪಾಠ ಯಾವುದು ಹಾಗೂ ಭುವನ ಸುಂದರಿಯಾಗಿ ಅದನ್ನು ಹೇಗೆ ಅಳವಡಿಸಿಕೊಳ್ಳುತ್ತೀರಿ ಎಂದು ಕೇಳಲಾಗಿತ್ತು.

ಪ್ರಶ್ನೆಗೆ ಗ್ರೇ ನೀಡಿದ ಉತ್ತರ ಹೀಗಿತ್ತ: ” ನಾನು ಮನಿಲಾದ ಸ್ಲಮ್ ಗಳಿಗಾಗಿ ಕೆಲಸ ಮಾಡುತ್ತೇನೆ, ಅಲ್ಲಿನ ಜೀವನ ಅತ್ಯಂತ ದುಃಖಕರವಾದದ್ದು, ನಾನು ಅಲ್ಲಿನ ಜನತೆಯಲ್ಲಿನ ಮುಖದಲ್ಲಿ ಸಂತೋಷ ನೋಡಲು ಇಚ್ಛಿಸುತ್ತೇನೆ. ಭುವನ ಸುಂದರಿಯಾಗಿ ನಾನು ಈ ಸಂದರ್ಭವನ್ನು ಅಲ್ಲಿನ ಜನತೆಗೆ ಸದುಪಯೋಗವಾಗುವಂಥಹದ್ದನ್ನು ನೀಡಲು ಬಯಸುತ್ತೇನೆ ಎಂದು ಹೇಳಿದ್ದಾರೆ. ಜನತೆಗೆ ಒಂದು ವೇಳೆ ನಾನು ಕೃತಜ್ಞರಾಗಿರುವುದನ್ನು ಹೇಳಿಕೊಡುವುದಿದ್ದರೆ ಅದರಿಂದ ಋಣಾತ್ಮಕತೆ ಇಲ್ಲದ ಜಗತ್ತಿನ್ನು ಹೊಂದಿರುತ್ತೇವೆ ಎಂದು ಹೇಳಿದ್ದಾರೆ.

ಫಿಲಿಪೈನ್ಸ್ ನ ಕ್ಯಾಟ್ರಿಯಾನ ಎಲಿಸಾ ಗ್ರೇ ಮ್ಯೂಸಿಗ್ ಥಿಯರಿಯಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದು, ಕಲಾ ಕ್ಷೇತ್ರದ ಕಡೆಗೆ ಹೆಚ್ಚು ಒಲವು ಹೊಂದಿದ್ದಾರೆ. ಇನ್ನು ಮೊದಲ ರನ್ನರ್ ಅಪ್ ಆಗಿರುವ ದಕ್ಷಿಣ ಆಫ್ರಿಕಾದ ತಮರಿನ್ ಗ್ರೀನ್ ಸಮಾರಂಭದಲ್ಲಿ ಮಹತ್ಮಾ ಗಾಂಧಿ ಅವರ ಜಗತ್ತಿನಲ್ಲಿ ನೋಡಬಯಸುವ ಬದಲಾವಣೆ ನೀನೇ ಆಗು ( Be the change you want to see in the world) ಹೇಳಿಕೆಯನ್ನು ಉಲ್ಲೇಖಿಸಿದ್ದು ವಿಶೇಷವಾಗಿತ್ತು.

Comments are closed.