ಅಂತರಾಷ್ಟ್ರೀಯ

ನಗ್ನ ಫೋಟೋ ನೀಡಿ ಸಾಲ ಪಡೆಯಿರಿ ! ಚೀನಾದಲ್ಲಿ ಹೊಸ ಸೇವೆ …ಸಾಲ ಹಿಂದಿರುಗಿಸದಿದ್ದರೆ ಹರಾಜಾಗಲಿದೆ ಮಾನ

Pinterest LinkedIn Tumblr

ಬೀಜಿಂಗ್‌: ಚೀನಾದಲ್ಲಿ ಮೋಜು- ಮಸ್ತಿಯ ಐಷರಾಮಿ ಜೀವನದ ಗೀಳಿಗೆ ಬೀಳುವ ಯುವಜನಾಂಗ, ವಿದ್ಯಾರ್ಥಿಗಳಿಗಾಗಿ ಕೈ ಸಾಲ ನೀಡುವ ಕೆಲವು ಸ್ಟಾರ್ಟ್‌ಅಪ್‌ ಕಂಪನಿಗಳು ‘ನೇಕೆಡ್‌ ಲೋನ್‌’ ಎಂಬ ಸೇವೆ ನೀಡಲಾರಂಭಿಸಿದ್ದು, ಸಾಲ ಬೇಕಾದವರು ನೇಕೆಡ್​ ಫೋಟೋ ನೀಡಿ ಲೋನ್​ ಪಡೆಯಬಹುದು.

ವಿದ್ಯಾರ್ಥಿನಿಯರನ್ನೇ ಮುಖ್ಯ ಗುರಿಯಾಗಿಸಿಕೊಂಡು ಚೀನಾದ ಸ್ಟಾರ್ಟ್​ಅಪ್​ಗಳು ಇಂತಹ ವಿಲಕ್ಷಣ ಲೋನ್​ ಸೇವೆ ಒದಗಿಸುತ್ತಿದೆ. ಸಾಮಾಜಿಕ ಜಾಲತಾಣದ ನೆಟ್ಟಿಗರಲ್ಲಿ ಈ ಬಗ್ಗೆ ಸಾಕಷ್ಟು, ಚರ್ಚೆ, ವಾಗ್ವಾದ ನಡೆಯುತ್ತಿದೆ.

ಇಲ್ಲಿ ಸಾಲ ಪಡೆಯುವವರು ತಮ್ಮ ಬೆತ್ತಲೆ ಫೋಟೋಗಳೊಂದಿಗೆ ಅರ್ಜಿ ಸಲ್ಲಿಸಿ ಸಾಲ ಪಡೆಯಬಹುದಾಗಿದೆ. ಆದರೆ, ನಿಗದಿತ ಸಮಯದಲ್ಲಿ ಸಾಲ ಹಿಂದಿರುಗಿಸದಿದ್ದಲ್ಲಿ ಅವರ ಬೆತ್ತಲೆ ಫೋಟೋಗಳನ್ನು ಸೋಷಿಯಲ್​ ಮೀಡಿಯಾದಲ್ಲಿ ಬಹಿರಂಗಗೊಳಿಸುವುದಾಗಿ. ಅಲ್ಲದೆ ನಗ್ನ ಸೆಲ್ಫಿಯನ್ನು ಕುಟುಂಬದವರಿಗೆ ಕಳುಹಿಸುವುದಾಗಿ ಬೆದರಿಸಿ ಸಾಲ ವಸೂಲಿ ಮಾಡಿಕೊಳ್ಳುತ್ತಾರೆ. ಈ ನಗ್ನ ಸೆಲ್ಫಿ ಸಾಲಕ್ಕೆ ಹೆಚ್ಚಿನ ಮೊತ್ತದ ಬಡ್ಡಿಯನ್ನು ವಿಧಿಸಲಾಗುತ್ತಿದ್ದು, ಅನೇಕರು ಈ ಸಾಲದ ಬಲಿಪಶುಗಳಾಗಿದ್ದಾರೆ ಎಂದು ಅಲ್ಲಿನ ಸ್ಥಳೀಯ ಪತ್ರಿಕೆಯೊಂದು ವರದಿ ಮಾಡಿದೆ.

ನಗ್ನ ಫೋಟೋಗಳೀಗೆ ಪ್ರತಿಯಾಗಿ ಇಂತಿಷ್ಟು ಸಾಲವನ್ನು ಕಂಪನಿ ನೀಡುತ್ತದೆ. ಇಲ್ಲಿ ಬಡ, ವಿದೇಶಿ ವಿದ್ಯಾರ್ಥಿಗಳಿಗೆ ಆದ್ಯತೆ ನೀಡಲಾಗಿದೆ. ಇದು ವಿದ್ಯಾಭ್ಯಾಸದ ಖರ್ಚು ವೆಚ್ಚಗಳನ್ನು ಭರಿಸಲು ನೆರವಾಗುತ್ತಿದೆ. ದಿನಕ್ಕೆ ಸರಾಸರಿ ಸುಮಾರು 116 ಯುವತಿಯರು ಸಾಲ ಪಡೆಯುತ್ತಿದ್ದು 10 ಜಿ.ಬಿ. ದತ್ತಾಂಶದಷ್ಟು ಬೆತ್ತಲೆ ಫೋಟೋಗಳು ಅರ್ಜಿಗಳೊಂದಿಗೆ ಬರುತ್ತಿವೆ ಎನ್ನಲಾಗಿದೆ.

ಚೀನಾದಲ್ಲಿ ನಗ್ನ ಸಾಲ ಸೇವೆಗಳ ಸಮಸ್ಯೆಯು ಹೆಚ್ಚಾಗಿದೆ. ಪರವಾನಗಿ ಇಲ್ಲದ ಸ್ಟಾರ್ಟ್​ಅಪ್​ ಕಂಪನಿ, ಆನ್​ಲೈನ್​ ಸಂಸ್ಥೆಗಳು ಕಾನೂನುಬಾಹಿರ ಸಾಲ ಸೌಲಭ್ಯ ನೀಡುತ್ತಿದೆ. ಇದು ಗೌಪ್ಯವಾಗಿ ನಡೆವುದರಿಂದ ಬಡ್ಡಿ ದರ , ಮರು ಪಾವತಿ, ಹಣದ ವ್ಯವಹಾರದ ಬಗ್ಗೆ ನಿಖರ ಮಾಹಿತಿ ಪಡೆಯಲಾಗುತ್ತಿಲ್ಲ. ದೇಶ ಆರ್ಥಿಕತೆ ಮೇಲೆ ಕೆಟ್ಟ ಪರಿಣಾಮ ಬೀರುತ್ತಿದೆ ಎಂದು ವರದಿಯೊಂದು ತಿಳಿಸಿದೆ.

Comments are closed.