
ಚುನಾವಣಾ ಪ್ರಚಾರದ ವೇಳೆ ಪ್ರಧಾನಿ ನರೇಂದ್ರ ಮೋದಿ ಕುರಿತು ಕಾವಲುಗಾರ ಕಳ್ಳ (ಚೋಕಿದಾರ್ ಚೋರ್ ಹೈ) ಎಂಬ ಪಂಜಾಬ್ ಸಚಿವ ನವಜೋತ್ ಸಿಂಗ್ ಸಿಧು ಟೀಕೆಗೆ ಕಾಂಗ್ರೆಸ್ ಧ್ವನಿಗೂಡಿಸಿದೆ.
ಸಿಧು ಟೀಕೆಯನ್ನು ಸಮರ್ಥಿಸಿಕೊಂಡಿರುವ ಕಾಂಗ್ರೆಸ್ ನ ಹಿರಿಯ ನಾಯಕ ಬಿಕೆ ಹರಿಪ್ರಸಾದ್, ” ಮೋದಿಯನ್ನು ಜನರು ಪ್ರಧಾನಿಯನ್ನಾಗಿ ಆಯ್ಕೆ ಮಾಡಿದರು, ಅದನ್ನು ಅರಗಿಸಿಕೊಳ್ಳಲು ಮೋದಿಗೆ ಸಾಧ್ಯವಾಗಲಿಲ್ಲ ಆ ನಂತರದಲ್ಲಿ ಮೋದಿ ತಮ್ಮನ್ನು ತಾವು ಪ್ರಧಾನ ಸೇವಕ ಎಂದರು, ಆ ನಂತರ ಪ್ರಧಾನ ಕಾವಲುಗಾರ ಎಂದು ಹೇಳಿಕೊಂಡರು. ಆದರೆ ಅವರ ಕಣ್ಣೆದುರೇ ಕಳ್ಳತನ ನಡೆದಿದೆ. ಈ ಹಿನ್ನೆಲೆಯಲ್ಲಿ ಸಿಧು ಹೇಳಿದ್ದರಲ್ಲಿ ತಪ್ಪೇನಿದೆ ಎಂದು ಪ್ರಶ್ನಿಸಿದ್ದಾರೆ.
ಅಲ್ವಾರ್ ಜಿಲ್ಲೆಯಲ್ಲಿ ನಡೆದ ಚುನಾವಣಾ ಪ್ರಚಾರದಲ್ಲಿ ಭಾಷಣ ಮಾಡಿದ್ದ ಪಂಜಾಬ್ ಸಚಿವ ಸಿಧು, ರಾಫೆಲ್ ಒಪ್ಪಂದದಲ್ಲಿ ಹಗರಣ ನಡೆದಿದೆ ಎಂದು ಆರೋಪಿಸಿದ್ದರು. ಅಷ್ಟೇ ಅಲ್ಲದೇ ದೇಶಾದ್ಯಂತ ಕಾವಲುಗಾರನೇ ಕಳ್ಳನಾಗಿದ್ದಾನೆ ಎಂಬ ಕೂಗು ಎದ್ದಿದೆ, ಕಾವಲುಗಾರನ ನಾಯಿಯೂ ಸಹ ಹಗರಣದಲ್ಲಿ ಶಾಮೀಲಾಗಿದೆ ಎಂದು ಹೇಳಿದ್ದರು.
ಸಿಧು ಹೇಳಿಕೆಗೆ ವ್ಯಾಪಕ ಟೀಕೆ ವ್ಯಕ್ತವಾಗಿದ್ದ ಹಿನ್ನೆಲೆಯಲ್ಲಿ ಸ್ಪಷ್ಟನೆ ನೀಡಿರುವ ಕಾಂಗ್ರೆಸ್, ಸಿಧು ಹೇಳಿಕೆಯಲ್ಲಿ ತಪ್ಪೇನು ಇಲ್ಲ ಎಂದು ಸಮರ್ಥಿಸಿಕೊಂಡಿದೆ.
Comments are closed.