ಅಂತರಾಷ್ಟ್ರೀಯ

ಈ 5 ವರ್ಷದ ಬಾಲಕನಿಗೆ ಸಿಕ್ಕಿತು 26 ಲಕ್ಷದ ಮರ್ಸಿಡೀಸ್ ಕಾರು ಗಿಫ್ಟ್ !

Pinterest LinkedIn Tumblr

5 ವರ್ಷದ ಹುಡುಗನೊಬ್ಬ ಮಾಡಿರುವ ಸಾಧನೆ ನೋಡಿದರೆ ನಿಜಕ್ಕೂ ನೀವು ಅಚ್ಚರಿಗೊಳಗಾಗುತ್ತೀರಿ. ಅಷ್ಟಕ್ಕೂ ಆ ಬಾಲಕ ಮಾಡಿದ್ದೇನು ಅಂತೀರಾ ಇಲ್ಲಿದೆ ವಿವರ.

ಇತ್ತೀಚೆಗೆ ಬಹುತೇಕ ಯುವಕರು ವ್ಯಾಯಾಮವನ್ನು ತೊರೆದಿದ್ದು, ಅಹಾರವನ್ನು ಮಿತವಾಗಿ ತಿನ್ನಲಾರಂಭಿಸಿದ್ದಾರೆ. ವ್ಯಾಯಾಮದಿಂದ ದೂರ ಉಳಿಯಲು ಕೆಲಸದ ನೆಪ ನೀಡುವುದು ಸಾಮಾನ್ಯವಾಗಿದೆ. ಆದರೀಗ 5 ವರ್ಷದ ಹುಡುಗನೊಬ್ಬ ಮಾಡಿರುವ ಸಾಧನೆ ನೋಡಿದರೆ ನಿಜಕ್ಕೂ ನೀವು ಅಚ್ಚರಿಗೊಳಗಾಗುತ್ತೀರಿ. ಅಷ್ಟಕ್ಕೂ ಆ ಬಾಲಕ ಮಾಡಿದ್ದೇನು ಅಂತೀರಾ ಇಲ್ಲಿದೆ ವಿವರ.

ಈ 5 ವರ್ಷದ ಪೋರ ಬರೋಬ್ಬರಿ 4,105 ಪುಶ್ ಅಪ್ಸ್ ಮಾಡಿದ್ದಾನೆ. ಅದು ಕೂಡಾ ಭರ್ತಿ 2 ಗಂಟೆ 25 ನಿಮಿಷ. ಇದರಿಂದ ಖುಷಿಯಾಗಿರುವ ರಷ್ಯಾ ಸೇನೆಯ ಲೆಫ್ಟಿನೆಂಟ್ ಬಾಲಕನಿಗೆ 26 ಲಕ್ಷ ರೂಪಾಯಿ ಮೌಲ್ಯದ ಮರ್ಸಿಡೀಸ್ ಕಾರನ್ನು ಗಿಫ್ಟ್ ಆಗಿ ನೀಡಿದ್ದಾರೆ. ರಾಖೀಮ್ ಕುರಯಂ ಹೆಸರಿನ ಈ ಪೋರ ಬಾಲ್ಯದಿಂದಲೇ ವ್ಯಾಯಾಮ ಮಾಡುತ್ತಾನಂತೆ.

ಕಾರ್ ಗಿಫ್ಟ್ ಮಾಡಿರುವ ಲೆಫ್ಟಿನೆಂಟ್ ಬಾಲಕನಿಗೆ ‘ನೀನು ಈ ಕಾರನ್ನು ನಿನ್ನ ತಂದೆಗೆ ಚಲಾಯಿಸಲು ತಿಳಿಸು ಹಾಗೂ ನೀನು ಆರಾಮಾಗಿ ಕುಳಿತುಕೋ. ನೀನು ಮಾಡಿದ್ದು ಮೆಚ್ಚುಗೆಗೆ ಪಾತ್ರವಾಗಿದ್ದು, ಹೀಗಾಗಿ ಈ ಐಷಾರಾಮಿ ಕಾರು ಪಡೆಯಲು ನಿನಗೆ ಹಕ್ಕಿದೆ. ಇನ್ಮುಂದೆ ನಾವಿಬ್ಬರೂ ನನ್ನ ಫಿಟ್ನೆಸ್ ಸೆಂಟರ್‌ನಲ್ಲಿ ಸಿಗೋಣ ಹಾಗೂ ಒಟ್ಟಾಗಿ ವ್ಯಾಯಾಮ ಮಾಡೋಣ’ ಎಂದಿದ್ದಾರೆ.

ಲೆಫ್ಟಿನೆಂಟ್ ಮಾತಿಗೆ ಪ್ರತಿಕ್ರಿಯಿಸಿರುವ ಬಾಲಕ ‘ಇನ್ಮುಂದೆ ಈ ಕಾರನ್ನು ನನ್ನ ತಂದೆ ಚಲಾಯಿಸುತ್ತಾರೆ. ನನ್ನನ್ನು ಫಿಟ್ನೆಸ್ ಸೆಂಟರ್‌ಗೆ ಬಿಡಲು ಅವರಿನ್ನು ಟ್ಯಾಕ್ಸಿಯಲ್ಲಿ ಬರಬೇಕೆಂದಿಲ್ಲ’ ಎಂದಿದ್ದಾನೆ.

ಈ ಬಾಲಕ 4,105 ಪುಶ್ ಅಪ್ಸ್ ಮಾಡಿ ವಿಶ್ವ ದಾಖಲೆ ನಿರ್ಮಿಸಿದ್ದಾನೆ. ಆದರೆ ವಿಡಿಯೋ ಕ್ಲಾರಿಟಿ ಕಳಪೆಯಾಗಿದ್ದ ಕಾರಣ ರೆಕಾರ್ಡಿಂಗ್ ರಿಜೆಕ್ಟ್ ಆಗಿದೆ ಅಲ್ಲದೇ ರಿಜಿಸ್ಟರ್ ಆಗಿಲ್ಲ. ಆದರೀಗ ಕಾರು ಸಿಕ್ಕಿರುವುದರಿಂದ ಹುಡುಗ ಬಹಳ ಖುಷಿ ಪಟ್ಟಿದ್ದಾನೆ.

Comments are closed.