ಅಂತರಾಷ್ಟ್ರೀಯ

ಹೆಂಡತಿಯ ಗೊರಕೆಯಿಂದ ತಪ್ಪಿಸಿಕೊಳ್ಳಲು ಮನೆಯಿಂದ ಪಬ್​ಗೆ ಸುರಂಗ ತೋಡಿದ ಪತಿರಾಯ !

Pinterest LinkedIn Tumblr

ಐರ್ಲೆಂಡ್: ಹೆಂಡತಿಯ ಪ್ರತಿನಿತ್ಯದ ಆ ಟಾರ್ಚರ್ ನಿಂದ ತಪ್ಪಿಸಿಕೊಳ್ಳುವ ಸಲುವಾಗಿ ಪತಿಯಾರನೊಬ್ಬ ನೇರವಾಗಿ ಪಬ್​ಗೆ ಸುರಂಗ ತೋಡಿರುವ ಘಟನೆ ವರದಿಯಾಗಿದೆ.

ದಿನಂಪ್ರತಿ ರಾತ್ರಿ ಮಲಗಿದಾಗ ಹೆಂಡತಿಯ ಗೊರಕೆ ಶಬ್ಧದಿಂದ ತಪ್ಪಿಸಿಕೊಳ್ಳುವ ಸಲುವಾಗಿ ಪತಿಯೊಬ್ಬ ಸುಮಾರು 800 ಮೀಟರ್ ಸುರಂಗವನ್ನು ಕೊರೆದಿದ್ದಾನೆ. ಇದಕ್ಕೆ ಆತ ತೆಗೆದುಕೊಂಡಿದ್ದು ಬರೋಬ್ಬರಿ 15 ವರ್ಷಗಳ ಕಾಲ. ಇನ್ನು ದಿ ಶಾವಂಶ್ವಾಂಕ್ ರಿಡೆಂಪ್ಶನ್ ಚಿತ್ರದಿಂದ ಸ್ಫೂರ್ತಿ ಪಡೆದು ಈ ಕೆಲಸ ಮಾಡಿರುವುದಾಗಿ ಆತ ಒಪ್ಪಿಕೊಂಡಿದ್ದಾನೆ.

ಹೆಂಡತಿಯ ಗೊರಕೆ ಶಬ್ಧ ಕಿವಿಗೆ ರಾಚುತ್ತಿದ್ದರಿಂದ ಬೇಸತ್ತ ಪ್ಯಾಟ್ಸಿ ಪಕ್ಕದ ಕೋಣೆಯಲ್ಲಿ ಮಲಗಲು ಶುರು ಮಾಡಿದ್ದಾನೆ. ಅಲ್ಲಿಯೂ ಆಕೆಯ ಗೊರಕೆ ಶಬ್ಧ ಕೇಳಿಸುತ್ತಿದ್ದರಿಂದ ಕೊನೆಗೆ ವಿಧಿ ಇಲ್ಲದೆ ತನ್ನ ಮನೆಯ ಪಕ್ಕದಲ್ಲೇ ಇದ್ದ ಪಬ್ ಗೆ ಸುರಂಗ ಕೊರೆದಿದ್ದಾನೆ.

ಅಲ್ಲದೆ ಕಳೆದ 5 ವರ್ಷಗಳಿಂದ ಪ್ಯಾಟ್ಸಿ ಪ್ರತಿ ರಾತ್ರಿ 11 ಗಂಟೆ ಸುಮಾರಿಗೆ ಸುರಂಗ ಮಾರ್ಗದಲ್ಲಿ ಪಬ್​ಗೆ ಹೋಗಿ ಮಧ್ಯರಾತ್ರಿ ಮನೆಗೆ ಹಿಂತಿರುಗುತ್ತಿದ್ದ. ಗಾಢ ನಿದ್ರೆಯಲ್ಲಿದ್ದ ಹೆಂಡತಿಗೆ ಇದು ಗೊತ್ತೆ ಆಗುತ್ತಿರಲಿಲ್ಲ ಎಂದು ಪ್ಯಾಟ್ಸಿ ಹೇಳಿದ್ದಾನೆ.

Comments are closed.