ಅಂತರಾಷ್ಟ್ರೀಯ

ವ್ಯಕ್ತಿಯ ಮುಖ ಚಿತ್ರಿಸದ ಈ ಪೈಂಟಿಂಗ್​ ಬೆಲೆ 194 ಕೋಟಿ

Pinterest LinkedIn Tumblr


ತಲೆ ಬುಡವಿಲ್ಲದ ಈ ಪೈಂಟಿಂಗ್​ ಬೆಲೆ 194 ಕೋಟಿ ಒಂದು ಕ್ಷಣಕ್ಕೆ ಈ ಚಿತ್ರ ತಲೆ ಬುಡವಿಲ್ಲದ ಚಿತ್ರ ಎಂದು ಬಾಸವಾದರೂ ಇದರ ಒಳ ಅರ್ಥ ಒಬ್ಬ ಕಲೆಗಾರನಿಗೆ ಮಾತ್ರ ಅರ್ಥವಾಗುತ್ತದೆ.

ಕಲೆ ಬಗ್ಗೆ ಆಸಕ್ತಿಯನ್ನು ಹೊಂದಿರುವವರು ಆ ಕಲೆಗಾಗಿ ಎಷ್ಟು ಖರ್ಚು ಮಾಡಲು ಕೂಡ ತಯಾರಿರುತ್ತಾರೆ ಎಂಬುದಕ್ಕೆ ಈ ಚಿತ್ರಕಲೆ ಸಾಕ್ಷಿಯಾಗಿದೆ.

ಮಾರ್ಡನ್​ ಆರ್ಟ್​ ಎಂಬ ಹೆಸರಿನಲ್ಲಿ ತಮ್ಮ ಕಲ್ಪನೆಗೆ ತೋಚಿದ್ದನ್ನು ಬರೆಯುವ ಕಲಾವಿದರ ಪೈಂಟಿಂಗ್ ನ ಅರ್ಥವೇ ಅನೇಕರಿಗೆ ಅರ್ಥವಾಗುವುದಿಲ್ಲ. ಇಲ್ಲೊಂದು ಚಿತ್ರ ಕೂಡ ಹಾಗೇ ಇದೆ. ನೋಡಿದಾಕ್ಷಣ ತಲೆಬುಡವಿಲ್ಲದ ಚಿತ್ರ ಎಂದು ಅನಿಸಿದರು. ಇದರ ಒಳ ಅರ್ಥ ನೋಡುಗರಿಗೆ ಯೋಚನಾಲಹರಿಗೆ ಬಿಟ್ಟದ್ದು.

ವ್ಯಕ್ತಿಯೊಬ್ಬನ ಕುರ್ಚಿ ಮೇಲೆ ಕುಳಿತುಕೊಂಡು ಯಾವುದೋ ಗಹನ ವಿಚಾರ ಕುರಿತು ಆಲೋಚಿಸುವ ಈ ಚಿತ್ರದ ನೋಡಿದವರಿಗೆ ಒಂದು ಕ್ಷಣಕ್ಕೆ ವಿಚಿತ್ರ ಎಂಬಂದೇ ಕಾಣುತ್ತದೆ . ಕಾರಣ ಈ ಚಿತ್ರದಲ್ಲಿ ವ್ಯಕ್ತಿಯ ಮುಖವನ್ನು ಮಾತ್ರ ಎಲ್ಲಿಯೂ ಚಿತ್ರಿಸಿಲ್ಲ. ಮುಖದ ಜಾಗದಲ್ಲಿ ಬೆಳಕಿನ ಆಕೃತಿ ಕಾಣಸಿಗುತ್ತದೆ.

ಒಂದು ಕ್ಷಣಕ್ಕೆ ಈ ಚಿತ್ರ ತಲೆ ಬುಡವಿಲ್ಲದ ಚಿತ್ರ ಎಂದು ಬಾಸವಾದರೂ ಇದರ ಅರ್ಥ ಒಬ್ಬ ಕಲೆಗಾರನಿಗೆ ಮಾತ್ರ ಅರ್ಥವಾಗುತ್ತದೆ. ಅನೇಕ ಒಳ ಅರ್ಥಗಳನ್ನು ಹೊಂದಿರುವ ಈ ಚಿತ್ರ ನ್ಯೂಯಾರ್ಕ್​ನಲ್ಲಿ 26.8 ಮಿಲಿಯನ್ನು ಡಾಲರ್​ ಬೃಹತ್​ ಮೊತ್ತಕ್ಕೆ ಮಾರಾಟವಾಗಿದೆ,

ರೈನೆ ಮ್ಯಾಗ್ರಿಟೆ ಈ ಚಿತ್ರದ ಕಲಾವಿದರಾಗಿದ್ದು ‘ಪ್ಲೇಷರ್​ ಆಫ್​ ಪ್ರಿನ್ಸಿಪಲ್​’ ಶೀರ್ಷಿಕೆಯಡಿಯಲ್ಲಿ ಈ ಚಿತ್ರ ಪ್ರದರ್ಶಿಸಿದ್ದರು. ಅತ್ಯುತ್ತಮ ಕಲಾವಿದರಾಗಿರುವ ಮ್ಯಾಗ್ರಿಟೆ ಅನೇಕ ಚಿತ್ರಗಳು ಅನೇಕ ಬಿಲಿಯನ್​ ಗಳಿಗೆ ಮಾರಾಟವಾಗಿದೆ.

Comments are closed.