ಅಂತರಾಷ್ಟ್ರೀಯ

ಹಸಿವಿನಿಂದ ಅಳುತ್ತಿದ್ದ ಕಂದಮ್ಮನಿಗೆ ಹಾಲುಣಿಸಿ ಮಾತೃಪ್ರೇಮ ಮೆರೆದ ಗಗನಸಖಿ

Pinterest LinkedIn Tumblr

ಮನಿಲಾ: ಹಸಿವಿನಿಂದ ಅಳುತ್ತಿದ್ದ ಕಂದಮ್ಮನಿಗೆ ಗಗನಖಿಯೊಬ್ಬರು ಹಾಲುಣಿಸಿ ಮಾತೃಪ್ರೇಮ ಮೆರೆದ ಘಟನೆ ಫಿಲಿಫೈನ್ಸ್ ನಲ್ಲಿ ತಡವಾಗಿ ಬೆಳಕಿಗೆ ಬಂದಿದೆ.

ಕಳೆದ ಮಂಗಳವಾರ 24 ವರ್ಷದ ಪಟ್ರೀಷಾ ಒರ್ಗಾನೋ ಎನ್ನುವ ಗಗನಸಖಿ ಫ್ಲೈಟ್ ಟೇಕ್‍ಆಫ್ ಆದ ನಂತರ ವಿಮಾನದಲ್ಲಿ ಪ್ರಯಾಣಿಕರೊಬ್ಬರು ಮಗುವೊಂದು ಹಸಿವಿನಿಂದ ಅಳುತ್ತಿರುವುದನ್ನು ಗಮನಿಸಿದ್ದಾರೆ. ಕೂಡಲೇ ತಾಯಿಯ ಬಳಿ ಹೋಗಿ, ಮಗುವಿಗೆ ಹಾಲುಣಿಸಲೇ ಎಂದು ಕೇಳಿಕೊಂಡು, ಹಸಿವಿನಿಂದ ಬಳಲಿದ್ದ ಮಗುವಿಗೆ ಹಾಲುಣಿಸಿ ತಾಯಿ ವಾತ್ಸಲ್ಯವನ್ನು ಮರೆದಿದ್ದಾರೆ.

ಪ್ರಯಾಣಿಕರೊರ್ವರು ತಮ್ಮ ಪುಟ್ಟ ಕಂದಮ್ಮನ ಜೊತೆ ಸೋಮವಾರ ರಾತ್ರಿಯೇ ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದರು. ಈ ವೇಳೆ ಮನೆಯಿಂದ ತಂದಿದ್ದ ಫಾರ್ಮುಲಾ ಹಾಲು ನಿಲ್ದಾಣದಲ್ಲಿಯೇ ಖಾಲಿಯಾಗಿತ್ತು. ಮಂಗಳವಾರ ಬೆಳಗ್ಗೆ ವಿಮಾನ ಏರಿದಾಗ, ಮಗು ಹಸಿವಿನಿಂದ ಅಳತೊಡಗಿತ್ತು. ಆದರೆ ಮಗುವಿನ ಹಾಲುಣಿಸಲು ತಾಯಿಯ ಬಳಿ ಹಾಲಿರಲಿಲ್ಲ. ಇದನ್ನೂ ನೋಡಿದ ಪಟ್ರೀಷಾ ಕೂಡಲೇ ಮಗುವನ್ನು ಎತ್ತಿಕೊಂಡು ಎದೆಹಾಲು ನೀಡಿದ್ದಾರೆ.

ಈ ಕುರಿತು ಪ್ರತಿಕ್ರಿಯಿಸಿರುವ ಅವರು, ವಿಮಾನದಲ್ಲಿ ಮಗು ಅಳುವುದನ್ನ ಕೇಳಿಸಿಕೊಂಡು, ಆ ತಾಯಿಯ ಬಳಿ ಹೋದೆ. ಹಸಿದ ಮಗುವಿಗೆ ಹಾಲುಣಿಸಿಲು ಆಗದ ತಾಯಿಯ ವೇದನೆ ನನಗೆ ಅರಿವಾಗಿತ್ತು. ನಮ್ಮ ವಿಮಾನದಲ್ಲಿ ಫಾರ್ಮುಲಾ ಹಾಲು ಇರಲಿಲ್ಲ. ಹೀಗಾಗಿ ಮಗುವಿಗೆ ನಾನೇ ಹಾಲುಣಿಸಲು ಸಿದ್ಧಳಾದೆ. ಹಾಲು ಕುಡಿದ ಮಗು ತಣ್ಣನೆ ಮಲಗಿದನ್ನ ನೋಡಿ, ನನಗೆ ತುಂಬಾ ಸಂತಸವಾಯಿತೆಂದು ಹರ್ಷ ವ್ಯಕ್ತಪಡಿಸಿದ್ದಾರೆ.

ಮಗುವಿನ ಹಸಿವನ್ನ ನೀಗಿಸಿದ ಗಗನಸಖಿಗೆ, ತಾಯಿ ನಿಲ್ದಾಣವನ್ನು ತಲುಪಿದ್ದಂತೆ ಹೃತ್ಫೂರ್ವಕ ಧನ್ಯವಾದಗಳನ್ನು ಅರ್ಪಿಸಿದ್ದಾರೆ. ಅಲ್ಲದೇ ಫಿಲಿಫೈನ್ಸ್ ಏರ್‍ಲೈನ್ಸ್ ಗಗನಸಖಿಯ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿ, ಅವರಿಗೆ ಪ್ರಮೋಷನ್ ನೀಡಿ ವೇತನವನ್ನೂ ಹೆಚ್ಚಿಸಿದೆ.

Comments are closed.