
ಚಿಕಾಗೋ: ಆತ ರಾತ್ರಿ ಮಲಗಿದ್ದೇ ಒಂದು ಕಡೆ, ಬೆಳಗ್ಗೆ ಕಣ್ಣು ತೆರೆದಾಗ ಇದ್ದದ್ದೇ ಒಂದು ಕಡೆ. ನಿದ್ದೆಗಣ್ಣಲ್ಲಿ ಒಂದು ರೂಮಿಂದ ಇನ್ನೊಂದು ರೂಮಿಗೆ ಹೋದ ಕಥೆಯಲ್ಲ ಇದು. ಆತ ಕಣ್ಣು ಬಿಟ್ಟಾಗ ಬರೋಬ್ಬರಿ 750 ಕಿಲೋಮೀಟರ್ ದೂರ ಸಾಗಿದ್ದ. ಏನಿದರ ರಹಸ್ಯ..? ಈ ಸುದ್ದಿ ಓದಿ.
ಆತ 23 ವರ್ಷದ ಕಾನ್ಸಾಸ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಸಿಬ್ಬಂದಿ. ಪ್ರಯಾಣಿಕರ ಬ್ಯಾಗ್ ತಪಾಸಣೆ ಮಾಡುವ ಕೆಲಸ ಮಾಡುತ್ತಿದ್ದ. ಕೆಲಸ ಮುಗಿಸಿದ ನಂತರ ಯುವಕ ಚೆನ್ನಾಗಿ ಮದ್ಯಪಾನ ಮಾಡಿದ್ದಾನೆ. ಆ ನಂತರ ತಾನು ಎಲ್ಲಿದ್ದೀನಿ ಎಂಬುದನ್ನೂ ಮರೆತು ಜಾಗ ಸಿಕ್ಕಲ್ಲಿ ಮಲಗಿದ್ದಾನೆ. ಬೆಳಗ್ಗೆ ಎಚ್ಚರವಾಗಿ ಕಣ್ಣು ಬಿಟ್ಟಾಗ ಚಿಕಾಗೋ ಏರ್ಪೋರ್ಟ್ನಲ್ಲಿದ್ದ.
ಅಮೇರಿಕಾ ಮೂಲದ ಈತ ಭಾರೀ ಪ್ರಮಾಣದ ಮಧ್ಯ ಸೇವಿಸಿದ್ದ ಎನ್ನಲಾಗಿದೆ. ಪ್ಲೇನ್ನ ಕಾರ್ಗೋದಲ್ಲಿ(ಟ್ರಕ್) ಕೆಲಸ ಮಾಡುತ್ತಿದ್ದ ಈತ ಕುಡಿದ ಮತ್ತಿನಲ್ಲಿ ನಿದ್ರೆಗೆ ಜಾರಿದ್ಧಾನೆ. 2 ಗಂಟೆಗಳ ಕಾಲ ಮೈಮೇಲೆ ಪ್ರಜ್ಞೆಯಿಲ್ಲದಂತೆ ಮಲಗಿದ್ದ. ಬಳಿಕ ಕಾನ್ಸಾಸ್ನಿಂದ ಹೊರಟ ಪ್ಲೇನ್ ಚಿಕಾಗೋಗೆ ಆಗಮಿಸಿದೆ. ಈ ವೇಳೆ ಯುವಕ ಎಚ್ಚರಗೊಂಡಿದ್ದಾನೆ. ತಕ್ಷಣ ವಿಮಾನದಿಂದ ಕೆಳಗಿಳಿದಾಗ ಪೊಲೀಸರಿಗೆ ಸಿಕ್ಕಿಬಿದ್ದಿದ್ದಾನೆ.
ನಂತರ ಪೊಲೀಸರ ವಿಚಾರಣೆ ವೇಳೆ ತಾನು ಸಂಪೂರ್ಣವಾಗಿ ಮೈಮೇಲೆ ಪ್ರಜ್ಞೆಯಿಲ್ಲದಂತೆ ಮಧ್ಯ ಸೇವಿಸಿದ್ದೆ ಎಂದು ಒಪ್ಪಿಕೊಂಡಿದ್ಧಾನೆ. ಅಲ್ಲದೇ ತಾನು ನಿದ್ರೆಗೆ ಜಾರಿ ಚಿಕಾಗೋಗೆ ಬಂದ ಬಳಿಕವೇ ಎಚ್ಚರಿವಾಗಿದೆ ಎಂದು ತಿಳಿಸಿದ್ದಾನೆ ಎಂದು ಹಿರಿಯ ಪೊಲೀಸ್ ಅಧಿಕಾರಿ ಆಂಥೋನಿ ಎಂಬುವರು ಮಾಹಿತಿ ನೀಡಿದ್ದಾರೆ.
ಈ ಸಂಬಂಧ ಪ್ರತಿಕ್ರಿಯೆ ನೀಡಿದ ವಿಮಾನ ನಿಲ್ದಾಣದ ಅಧಿಕಾರಿಗಳು, ಸಿಬ್ಬಂದಿಯನ್ನು ಅಮಾನತು ಮಾಡಿರುವುದಾಗಿ ಹೇಳಿದ್ದಾರೆ. ಅಲ್ಲದೇ ಅದೃಷ್ಟವಶಾತ್ ಪ್ರಾಣಪಾಯದಿಂದ ಪಾರಾಗಿದ್ದಾನೆ. ಆತ ಮಲಗಿದ್ದ ಟ್ರಕ್ ಸಂಪೂರ್ಣ ಉಷ್ಣಾಂದಿಂದ ಕೂಡಿತ್ತು. ಕನಿಷ್ಠ ಉಸಿರಾಡಲು ಗಾಳಿ ಬರುತ್ತಿರಲಿಲ್ಲ. ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಸಂಭಿವಿಸಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Comments are closed.