
ಜಗತ್ತಿನಲ್ಲಿ ಕೆಲವು ಕಾರಾಗೃಹಗಳಿವೆ. ಇಲ್ಲಿ ಒಬ್ಬರು ಖೈದಿಯಾಗಿ ಒಳ ಹೋದರೆ ಮರಳಿ ಜೀವಂತ ಹೊರ ಬರುತ್ತಾರೆ ಎಂಬ ಯಾವುದೇ ನಂಬಿಕೆಯಿಲ್ಲ. ಇಲ್ಲಿ ಖೈದಿಗಳೇ ಆರೋಪಿಗಳಿಗೆ ಕ್ರೂರ ಶಿಕ್ಷೆಗಳನ್ನು ನೀಡಿ ಕೊಲ್ಲುತ್ತಾರೆ. ಪ್ರಸ್ತುತ ಪ್ರಪಂಚದಲ್ಲಿ ಮರಣ ಮೃದಂಗವಾಡುತ್ತಿರುವ 7 ಅಪಾಯಕಾರಿ ಜೈಲುಗಳ ಬಗ್ಗೆ ಇಲ್ಲಿ ತಿಳಿಸಲಾಗಿದೆ. ಜಗತ್ತಿನಲ್ಲಿ ಕೆಲವು ಕಾರಾಗೃಹಗಳಿವೆ. ಇಲ್ಲಿ ಒಬ್ಬರು ಖೈದಿಯಾಗಿ ಒಳ ಹೋದರೆ ಮರಳಿ ಜೀವಂತ ಹೊರ ಬರುತ್ತಾರೆ ಎಂಬ ಯಾವುದೇ ನಂಬಿಕೆಯಿಲ್ಲ. ಇಲ್ಲಿ ಖೈದಿಗಳೇ ಆರೋಪಿಗಳಿಗೆ ಕ್ರೂರ ಶಿಕ್ಷೆಗಳನ್ನು ನೀಡಿ ಕೊಲ್ಲುತ್ತಾರೆ. ಪ್ರಸ್ತುತ ಪ್ರಪಂಚದಲ್ಲಿ ಮರಣ ಮೃದಂಗವಾಡುತ್ತಿರುವ 7 ಅಪಾಯಕಾರಿ ಜೈಲುಗಳ ಬಗ್ಗೆ ಇಲ್ಲಿ ತಿಳಿಸಲಾಗಿದೆ.
ಕ್ಯಾಂಪ್ 22, ಉತ್ತರ ಕೊರಿಯಾ: ಉತ್ತರ ಕೊರಿಯಾದ ಸರ್ವಾಧಿಕಾರಿ ನಾಯಕ ಕಿಮ್ ಜಾಂಗ್ ಉನ್ ಬಗ್ಗೆ ಎಲ್ಲರಿಗೂ ತಿಳಿದಿದೆ. ಆದರೆ ಉ.ಕೊರಿಯಾದಲ್ಲಿ ಕಿಮ್ ಜಾಂಗ್ ಹೆಸರಿನ ಮತ್ತೊಬ್ಬ ನಾಯಕರಿದ್ದರು. ಅವರೇ ಕ್ಯಾಂಪ್ 22 ಎಂಬ ಜೈಲನ್ನು 1965 ರಲ್ಲಿ ನಿರ್ಮಿಸಿದ್ದರು. ಈ ಜೈಲಿನಲ್ಲಿ ಸುಮಾರು 50 ಸಾವಿರ ಖೈದಿಗಳಿದ್ದಾರೆ. ಖೈದಿಗಳ ಸಂಖ್ಯೆಯಿಂದ ಇಕ್ಕಟ್ಟಾಗಿರುವ ಈ ಜೈಲಿನಲ್ಲಿ ಸ್ಥಳಕ್ಕಾಗಿಯೇ ಕೊಲೆಗಳು ನಡೆಯುತ್ತವೆಯಂತೆ. ಅಲ್ಲದೆ ಕೆಲ ವೆಬ್ಸೈಟ್ಗಳ ವರದಿ ಪ್ರಕಾರ ಇಲ್ಲಿ ರಸಾಯನಿಕ ಬಳಸಿ ಖೈದಿಗಳನ್ನು ಹತ್ಯೆ ಮಾಡಲಾಗುತ್ತದೆ ಎಂದು ತಿಳಿಸಿದೆ. ಕ್ಯಾಂಪ್ 22, ಉತ್ತರ ಕೊರಿಯಾ: ಉತ್ತರ ಕೊರಿಯಾದ ಸರ್ವಾಧಿಕಾರಿ ನಾಯಕ ಕಿಮ್ ಜಾಂಗ್ ಉನ್ ಬಗ್ಗೆ ಎಲ್ಲರಿಗೂ ತಿಳಿದಿದೆ. ಆದರೆ ಉ.ಕೊರಿಯಾದಲ್ಲಿ ಕಿಮ್ ಜಾಂಗ್ ಹೆಸರಿನ ಮತ್ತೊಬ್ಬ ನಾಯಕರಿದ್ದರು. ಅವರೇ ಕ್ಯಾಂಪ್ 22 ಎಂಬ ಜೈಲನ್ನು 1965 ರಲ್ಲಿ ನಿರ್ಮಿಸಿದ್ದರು. ಈ ಜೈಲಿನಲ್ಲಿ ಸುಮಾರು 50 ಸಾವಿರ ಖೈದಿಗಳಿದ್ದಾರೆ. ಖೈದಿಗಳ ಸಂಖ್ಯೆಯಿಂದ ಇಕ್ಕಟ್ಟಾಗಿರುವ ಈ ಜೈಲಿನಲ್ಲಿ ಸ್ಥಳಕ್ಕಾಗಿಯೇ ಕೊಲೆಗಳು ನಡೆಯುತ್ತವೆಯಂತೆ. ಅಲ್ಲದೆ ಕೆಲ ವೆಬ್ಸೈಟ್ಗಳ ವರದಿ ಪ್ರಕಾರ ಇಲ್ಲಿ ರಸಾಯನಿಕ ಬಳಸಿ ಖೈದಿಗಳನ್ನು ಹತ್ಯೆ ಮಾಡಲಾಗುತ್ತದೆ ಎಂದು ತಿಳಿಸಿದೆ.
ಗೀತ್ರಾಮ ಸೆಂಟ್ರಲ್ ಜೈಲ್, ರುವಾಂಡಾ: ಈ ಜೈಲನ್ನು ಪ್ರಪಂಚದ ಅತ್ಯಂತ ಕ್ರೂರ ಜೈಲು ಎಂದು ಕರೆಯುತ್ತಾರೆ. ಈ ಜೈಲಿನಲ್ಲಿ 600 ಖೈದಿಗಳು ಮಾತ್ರ ನೆಲೆಸಬಹುದಾಗಿದ್ದು, ಆದರೆ ಇಲ್ಲಿ ಈಗಾಗಲೇ 6 ಸಾವಿರಕ್ಕಿಂತ ಹೆಚ್ಚು ಖೈದಿಗಳನ್ನು ಬಂಧಿಸಲಾಗಿದೆ. ಹಾಗೆಯೇ ಆಹಾರದ ಕೊರತೆಯಿಂದ ಇಲ್ಲಿನ ಖೈದಿಗಳು ಪರಸ್ಪರ ಹೊಡೆದಾಡುತ್ತಾರೆ. ಹಾಗೆ ಸತ್ತ ಖೈದಿಯನ್ನು ಇಲ್ಲಿನ ಖೈದಿಗಳು ತಿನ್ನುತ್ತಾರೆ ಎನ್ನಲಾಗಿದೆ. ಈ ಕಾರಣದಿಂದಲೇ ಗೀತ್ರಾಮ ಸೆಂಟ್ರಲ್ ಜೈಲ್ ಸದಾ ಉದ್ವಿಗ್ನತೆಯಿಂದ ಕೂಡಿರುತ್ತದೆ. ಗೀತ್ರಾಮ ಸೆಂಟ್ರಲ್ ಜೈಲ್, ರುವಾಂಡಾ: ಈ ಜೈಲನ್ನು ಪ್ರಪಂಚದ ಅತ್ಯಂತ ಕ್ರೂರ ಜೈಲು ಎಂದು ಕರೆಯುತ್ತಾರೆ. ಈ ಜೈಲಿನಲ್ಲಿ 600 ಖೈದಿಗಳು ಮಾತ್ರ ನೆಲೆಸಬಹುದಾಗಿದ್ದು, ಆದರೆ ಇಲ್ಲಿ ಈಗಾಗಲೇ 6 ಸಾವಿರಕ್ಕಿಂತ ಹೆಚ್ಚು ಖೈದಿಗಳನ್ನು ಬಂಧಿಸಲಾಗಿದೆ. ಹಾಗೆಯೇ ಆಹಾರದ ಕೊರತೆಯಿಂದ ಇಲ್ಲಿನ ಖೈದಿಗಳು ಪರಸ್ಪರ ಹೊಡೆದಾಡುತ್ತಾರೆ. ಹಾಗೆ ಸತ್ತ ಖೈದಿಯನ್ನು ಇಲ್ಲಿನ ಖೈದಿಗಳು ತಿನ್ನುತ್ತಾರೆ ಎನ್ನಲಾಗಿದೆ. ಈ ಕಾರಣದಿಂದಲೇ ಗೀತ್ರಾಮ ಸೆಂಟ್ರಲ್ ಜೈಲ್ ಸದಾ ಉದ್ವಿಗ್ನತೆಯಿಂದ ಕೂಡಿರುತ್ತದೆ.
ಅಲ್ ಹಯರ್ ಜೈಲ್, ಸೌದಿ ಅರೇಬಿಯಾ – ವಿಶ್ವದ ಅಪಾಯಕಾರಿ ಕಾರಾಗೃಹದಲ್ಲಿ ಇದೂ ಕೂಡ ಒಂದು. ಇಲ್ಲಿನ ಖೈದಿಗಳನ್ನು ಚಿತ್ರಹಿಂಸೆ ನೀಡಿ ಶಿಕ್ಷಿಸಲಾಗುತ್ತದೆ. 2002 ರಲ್ಲಿ ಇಲ್ಲಿನ ಜೈಲು ಅಧಿಕಾರಿ ಜೈಲುಗಳಿಗೆ ಬೆಂಕಿ ಹಚ್ಚಿದ್ದರು. ಇದರಿಂದ 200ಕ್ಕೂ ಹೆಚ್ಚು ಖೈದಿಗಳನ್ನು ಸಾವನ್ನಪ್ಪಿದ್ದರು ಎಂದು ವರದಿವೊಂದು ತಿಳಿಸಿದೆ. ಕಠಿಣ ಕಾನೂನು ಹೊಂದಿರುವ ಸೌದಿಯ ಈ ಜೈಲು ಕೂಡ ಅಪಾಯಕಾರಿ ಎಂದು ಪರಿಗಣಿಸಲಾಗಿದೆ. ಅಲ್ ಹಯರ್ ಜೈಲ್, ಸೌದಿ ಅರೇಬಿಯಾ – ವಿಶ್ವದ ಅಪಾಯಕಾರಿ ಕಾರಾಗೃಹದಲ್ಲಿ ಇದೂ ಕೂಡ ಒಂದು. ಇಲ್ಲಿನ ಖೈದಿಗಳನ್ನು ಚಿತ್ರಹಿಂಸೆ ನೀಡಿ ಶಿಕ್ಷಿಸಲಾಗುತ್ತದೆ. 2002 ರಲ್ಲಿ ಇಲ್ಲಿನ ಜೈಲು ಅಧಿಕಾರಿ ಜೈಲುಗಳಿಗೆ ಬೆಂಕಿ ಹಚ್ಚಿದ್ದರು. ಇದರಿಂದ 200ಕ್ಕೂ ಹೆಚ್ಚು ಖೈದಿಗಳನ್ನು ಸಾವನ್ನಪ್ಪಿದ್ದರು ಎಂದು ವರದಿವೊಂದು ತಿಳಿಸಿದೆ. ಕಠಿಣ ಕಾನೂನು ಹೊಂದಿರುವ ಸೌದಿಯ ಈ ಜೈಲು ಕೂಡ ಅಪಾಯಕಾರಿ ಎಂದು ಪರಿಗಣಿಸಲಾಗಿದೆ.
ಬೆಂಗ್ವಾಂಗ್ ಜೈಲು, ಥಾಯ್ಲೆಂಡ್: ಈ ಸೆರೆಮನೆ ಕೂಡ ಪ್ರಪಂಚದ ಅಪಾಯಕಾರಿ ಕಾರಾಗೃಹ ಎಂದು ಹೇಳಲಾಗಿದೆ. ಇಲ್ಲಿನ ಖೈದಿಗಳನ್ನು ರಾಸಾಯನಿಕ ಬಳಸಿ ಶಿಕ್ಷಿಸಲಾಗುತ್ತದೆ. ಮರಣದಂಡನೆಯ ಶಿಕ್ಷೆಗೆ ಗುರಿಯಾದವರನ್ನು ಇಲ್ಲಿ ಕಬ್ಬಿಣದ ಸರಪಳಿಗಳಲ್ಲಿ ಬಂಧಿಸಿಟ್ಟಿರುತ್ತಾರೆ. ಇದಕ್ಕೂ ಮೊದಲು ಮರಣದಂಡನೆ ಗುರಿಯಾದ ಖೈದಿಗಳ ತಲೆ ಕತ್ತರಿಸಲಾಗುತ್ತಿತ್ತು. ಬೆಂಗ್ವಾಂಗ್ ಜೈಲು, ಥಾಯ್ಲೆಂಡ್: ಈ ಸೆರೆಮನೆ ಕೂಡ ಪ್ರಪಂಚದ ಅಪಾಯಕಾರಿ ಕಾರಾಗೃಹ ಎಂದು ಹೇಳಲಾಗಿದೆ. ಇಲ್ಲಿನ ಖೈದಿಗಳನ್ನು ರಾಸಾಯನಿಕ ಬಳಸಿ ಶಿಕ್ಷಿಸಲಾಗುತ್ತದೆ. ಮರಣದಂಡನೆಯ ಶಿಕ್ಷೆಗೆ ಗುರಿಯಾದವರನ್ನು ಇಲ್ಲಿ ಕಬ್ಬಿಣದ ಸರಪಳಿಗಳಲ್ಲಿ ಬಂಧಿಸಿಟ್ಟಿರುತ್ತಾರೆ. ಇದಕ್ಕೂ ಮೊದಲು ಮರಣದಂಡನೆ ಗುರಿಯಾದ ಖೈದಿಗಳ ತಲೆ ಕತ್ತರಿಸಲಾಗುತ್ತಿತ್ತು.
ಲಾ ಸಾಂಟೆ, ಫ್ರಾನ್ಸ್: ರಾಜಧಾನಿ ಪ್ಯಾರಿಸ್ನಿಂದ ಅಣತಿಯಷ್ಟು ದೂರದಲ್ಲಿರುವ ಲಾ ಸಾಂಟೆ ಜೈಲನ್ನು ಆತ್ಮಹತ್ಯಾ ಜೈಲು ಎಂದು ಕೂಡ ಕರೆಯುತ್ತಾರೆ. ಇಲ್ಲಿನ ಹೆಚ್ಚಿನ ಖೈದಿಗಳು ಆತ್ಮಹತ್ಯೆ ಮಾಡಿಕೊಂಡಿರುವುದರಿಂದ ಈ ಹೆಸರು ಬಂದಿದೆ . ಈ ಜೈಲಿನ ಅಧಿಕಾರಿಗಳು ಖೈದಿಗಳಿಗೆ ಚಿತ್ರಹಿಂಸೆ ನೀಡುತ್ತಾರೆ ಎಂಬ ಆರೋಪಗಳು ಕೇಳಿ ಬರುತ್ತಿರುತ್ತದೆ. ಇದಕ್ಕೆ ಸಾಕ್ಷಿ ಎಂಬಂತೆ 1990 ರಲ್ಲಿ 100 ಕ್ಕೂ ಹೆಚ್ಚಿನ ಖೈದಿಗಳು ಜೈಲಿನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಇದಲ್ಲದೆ ಇಲ್ಲಿ ದೆವ್ವದ ಕಾಟವಿದೆ ಎಂದು ಕೂಡ ಹೇಳಲಾಗುತ್ತದೆ. ಲಾ ಸಾಂಟೆ, ಫ್ರಾನ್ಸ್: ರಾಜಧಾನಿ ಪ್ಯಾರಿಸ್ನಿಂದ ಅಣತಿಯಷ್ಟು ದೂರದಲ್ಲಿರುವ ಲಾ ಸಾಂಟೆ ಜೈಲನ್ನು ಆತ್ಮಹತ್ಯಾ ಜೈಲು ಎಂದು ಕೂಡ ಕರೆಯುತ್ತಾರೆ. ಇಲ್ಲಿನ ಹೆಚ್ಚಿನ ಖೈದಿಗಳು ಆತ್ಮಹತ್ಯೆ ಮಾಡಿಕೊಂಡಿರುವುದರಿಂದ ಈ ಹೆಸರು ಬಂದಿದೆ . ಈ ಜೈಲಿನ ಅಧಿಕಾರಿಗಳು ಖೈದಿಗಳಿಗೆ ಚಿತ್ರಹಿಂಸೆ ನೀಡುತ್ತಾರೆ ಎಂಬ ಆರೋಪಗಳು ಕೇಳಿ ಬರುತ್ತಿರುತ್ತದೆ. ಇದಕ್ಕೆ ಸಾಕ್ಷಿ ಎಂಬಂತೆ 1990 ರಲ್ಲಿ 100 ಕ್ಕೂ ಹೆಚ್ಚಿನ ಖೈದಿಗಳು ಜೈಲಿನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಇದಲ್ಲದೆ ಇಲ್ಲಿ ದೆವ್ವದ ಕಾಟವಿದೆ ಎಂದು ಕೂಡ ಹೇಳಲಾಗುತ್ತದೆ.
ಲಾ ಸಬನೆಟಾ, ವೆನೆಜುವೆಲಾ: ಈ ಜೈಲು ಘೋರ ಶಿಕ್ಷೆ ಮತ್ತು ಕ್ರೂರ ಖೈದಿಗಳಿಂದ ವಿಶ್ವ ಪ್ರಸಿದ್ಧವಾಗಿದೆ. ಈ ಜೈಲಿನಲ್ಲಿ ಖೈದಿಗಳೇ ಒಂದೊಂದು ಗ್ಯಾಂಗ್ ಕಟ್ಟಿಕೊಂಡು ಕಾರಾಗೃಹದಲ್ಲಿ ಆಳ್ವಿಕೆ ನಡೆಸುತ್ತಾರೆ. 1994 ರಲ್ಲಿ ನಡೆದ ಒಂದು ಗ್ಯಾಂಗ್ ವಾರ್ನಲ್ಲಿ ಲಾ ಸಬನೆಟಾ ಜೈಲಿನಲ್ಲಿ 100 ಕ್ಕೂ ಹೆಚ್ಚಿನ ಖೈದಿಗಳು ಸಾವನ್ನಪ್ಪಿದ್ದರು ಎಂದರೆ ಇಲ್ಲಿನ ಭೀಕರತೆ ಊಹಿಸಬಹುದು. ಲಾ ಸಬನೆಟಾ, ವೆನೆಜುವೆಲಾ: ಈ ಜೈಲು ಘೋರ ಶಿಕ್ಷೆ ಮತ್ತು ಕ್ರೂರ ಖೈದಿಗಳಿಂದ ವಿಶ್ವ ಪ್ರಸಿದ್ಧವಾಗಿದೆ. ಈ ಜೈಲಿನಲ್ಲಿ ಖೈದಿಗಳೇ ಒಂದೊಂದು ಗ್ಯಾಂಗ್ ಕಟ್ಟಿಕೊಂಡು ಕಾರಾಗೃಹದಲ್ಲಿ ಆಳ್ವಿಕೆ ನಡೆಸುತ್ತಾರೆ. 1994 ರಲ್ಲಿ ನಡೆದ ಒಂದು ಗ್ಯಾಂಗ್ ವಾರ್ನಲ್ಲಿ ಲಾ ಸಬನೆಟಾ ಜೈಲಿನಲ್ಲಿ 100 ಕ್ಕೂ ಹೆಚ್ಚಿನ ಖೈದಿಗಳು ಸಾವನ್ನಪ್ಪಿದ್ದರು ಎಂದರೆ ಇಲ್ಲಿನ ಭೀಕರತೆ ಊಹಿಸಬಹುದು.
ಟಡ್ಮೋರ್ ಜೈಲು, ಸಿರಿಯಾ: ಸಿರಿಯಾದಲ್ಲಿ ಅತಿ ಹೆಚ್ಚು ಜನರು ಸಾಯುವುದು ಟಡ್ಮೋರೆ ಸೆರೆಮನೆಯಲ್ಲಿ ಎಂದರೆ ಖೈದಿಗಳ ಅವಸ್ಥೆಯನ್ನು ಊಹಿಸಿಕೊಳ್ಳಬಹುದು. ಇಲ್ಲಿ ಖೈದಿಗಳ ಸಿರಯಾದ ಆಹಾರಗಳನ್ನು ನೀಡಲಾಗುವುದಿಲ್ಲ. ಚಿತ್ರಹಿಂಸೆಯ ಮೂಲಕ ಖೈದಿಗಳನ್ನು ಸಾಯುವಂತೆ ಮಾಡುತ್ತಿರುವುದರಿಂದ ಇದನ್ನು ಡೆತ್ ವಾರೆಂಟ್ ಎಂದೂ ಕೂಡ ಕರೆಯುತ್ತಾರೆ. ಟಡ್ಮೋರ್ ಜೈಲು, ಸಿರಿಯಾ: ಸಿರಿಯಾದಲ್ಲಿ ಅತಿ ಹೆಚ್ಚು ಜನರು ಸಾಯುವುದು ಟಡ್ಮೋರೆ ಸೆರೆಮನೆಯಲ್ಲಿ ಎಂದರೆ ಖೈದಿಗಳ ಅವಸ್ಥೆಯನ್ನು ಊಹಿಸಿಕೊಳ್ಳಬಹುದು. ಇಲ್ಲಿ ಖೈದಿಗಳ ಸಿರಯಾದ ಆಹಾರಗಳನ್ನು ನೀಡಲಾಗುವುದಿಲ್ಲ. ಚಿತ್ರಹಿಂಸೆಯ ಮೂಲಕ ಖೈದಿಗಳನ್ನು ಸಾಯುವಂತೆ ಮಾಡುತ್ತಿರುವುದರಿಂದ ಇದನ್ನು ಡೆತ್ ವಾರೆಂಟ್ ಎಂದೂ ಕೂಡ ಕರೆಯುತ್ತಾರೆ.
Comments are closed.