ಅಂತರಾಷ್ಟ್ರೀಯ

ಅಮೆರಿಕದಲ್ಲಿ ಹುಟ್ಟುವ ವಲಸಿಗರ ಮಕ್ಕಳಿಗೆ ಪೌರತ್ವ ನೀಡದಿರಲು ಟ್ರಂಪ್​ ಚಿಂತನೆ

Pinterest LinkedIn Tumblr


ವಾಷಿಂಗ್ಟನ್: ಅಮೆರಿಕದಲ್ಲಿ ಹುಟ್ಟಿದ ಮಕ್ಕಳಿಗೆ ಇದುವರೆಗೂ ಅಲ್ಲಿನ ಪೌರತ್ವ ಸಿಗುತ್ತಿತ್ತು. ಆದರೆ, ಇದೀಗ ಆ ದೇಶದಲ್ಲೇ ಹುಟ್ಟಿದ ಮಗುವಿಗೂ ಅಲ್ಲಿನ ಪೌರತ್ವ ನೀಡದಿರಲು ಅಮೆರಿಕ ಅಧ್ಯಕ್ಷ ಡೊನಾಲ್ಡ್​ ಟ್ರಂಪ್​ ನಿರ್ಧರಿಸಿದ್ದಾರೆ.

ಬೇರೆ ದೇಶದಿಂದ ಬಂದು ಅಮೆರಿಕದಲ್ಲಿ ನೆಲೆಸಿರುವವರಿಗೆ ಅಮೆರಿಕದಲ್ಲೇ ಮಗು ಹುಟ್ಟಿದರೆ ಅದು ಜನ್ಮಸಿದ್ಧ ಹಕ್ಕಾಗಿ ಅಲ್ಲಿನ ಪೌರತ್ವ ಪಡೆಯುತ್ತಿತ್ತು. ಆದರೆ, ಸಂದರ್ಶನವೊಂದರಲ್ಲಿ ಈ ಬಗ್ಗೆ ಮಾತನಾಡಿರುವ ಟ್ರಂಪ್​, ಅಮೆರಿಕಕ್ಕೆ ವಲಸೆ ಬರುವವರ ಸಂಖ್ಯೆ ಹೆಚ್ಚುತ್ತಿದೆ. ವಲಸೆ ಬರುವವರಿಗೆ ಕಾನೂನನ್ನು ಬಿಗಿಗೊಳಿಸಲು ಯೋಚಿಸುತ್ತಿದ್ದೇವೆ. ಹಾಗಾಗಿ, ಅಮೆರಿಕದಲ್ಲಿ ಹುಟ್ಟಿದ ವಲಸಿಗರ ಮಕ್ಕಳಿಗೆ ಪೌರತ್ವ ರದ್ದುಪಡಿಸಲು ಕಾನೂನು ತರುವ ಯೋಚನೆ ಮಾಡಿದ್ದೇವೆ. ಬೇರೆ ದೇಶದಿಂದ ಬಂದ ದಂಪತಿ ಬೇಕೆಂದೇ ಅಮೆರಿಕದಲ್ಲೇ ಹೆರಿಗೆ ಮಾಡಿಸಿಕೊಳ್ಳುತ್ತಾರೆ. ಆಗ ಆ ಮಗುವಿಗೆ ಇಲ್ಲಿನ ಪೌರತ್ವ ಸುಲಭವಾಗಿ ಸಿಗುತ್ತದೆ. ಇಂತಹ ಪ್ರಕರಣಗಳು ಹೆಚ್ಚುತ್ತಿರುವುದರಿಂದ ಸದ್ಯದಲ್ಲೇ ಈ ಬಗ್ಗೆ ಕಾನೂನು ರೂಪಿಸಲಾಗುವುದು ಎಂದಿದ್ದಾರೆ.

ವಿಶ್ವದ ಯಾವ ದೇಶದಲ್ಲೂ ಬೇರೆ ದೇಶದ ವಲಸಿಗರಿಗೆ ಆ ದೇಶದಲ್ಲಿ ಮಗುವಾದರೆ ಅಲ್ಲಿನ ಪೌರತ್ವ ನೀಡುವುದಿಲ್ಲ. ಅಮೆರಿಕವೊಂದರಲ್ಲೇ ಈ ರೀತಿಯ ವ್ಯವಸ್ಥೆ ಇದೆ. ಇಲ್ಲಿ ಹುಟ್ಟಿದ ಮಗು 85 ವರ್ಷಗಳ ಕಾಲ ನಮ್ಮ ದೇಶದ ಪ್ರಜೆಯಾಗಿರಲು ಅರ್ಹವಾಗಿರುತ್ತದೆ ಮತ್ತು ದೇಶದ ಪ್ರಜೆಗಳಿಗೆ ಸಿಗುವ ಎಲ್ಲ ಸೌಲಭ್ಯಗಳನ್ನೂ ಪಡೆದುಕೊಳ್ಳುತ್ತದೆ. ಇದಕ್ಕೆ ಮುಕ್ತಾಯ ಹಾಡಬೇಕೆಂದು ನಿರ್ಧರಿಸಿದ್ದೇವೆ ಎಂದು ಟ್ರಂಪ್​ ಸಂದರ್ಶನದಲ್ಲಿ ಹೇಳಿದ್ದರು.

Comments are closed.