ನವದೆಹಲಿ: ವಿಶ್ವದ ಪ್ರಖ್ಯಾತ ಮತ್ತು ಬಹು ದೊಡ್ಡ ವಿಡಿಯೋ ಜಾಲ ಯ್ಯೂಟ್ಯೂಬ್ನಲ್ಲಿ ಜಗತ್ತಿನಾದ್ಯಂತ ಮಂಗಳವಾರ ರಾತ್ರಿಯಿಂದೀಚೆಗೆ ಸಮಸ್ಯೆ ಕಾಣಿಸಿಕೊಂಡಿತ್ತು. ಹೀಗಾಗಿ ವಿಡಿಯೋ ಪ್ಲೇ ಮಾಡಲು ಮತ್ತು ಅಪ್ಲೋಡ್ ಮಾಡಲು ಬಳಕೆದಾರರಿಗೆ ತೊಡಕುಂಟಾಗಿತ್ತು. ಆದರೆ, ಸತತ ಪ್ರಯತ್ನಗಳ ನಂತರ ಯ್ಯೂಟ್ಯೂಬ್ ಸಮಸ್ಯೆಯನ್ನು ಬುಧವಾರ ಬೆಳಗ್ಗೆ 8 ಗಂಟೆ ಹೊತ್ತಿಗೆ ಸರಿಪಡಿಸಿದ್ದಾರೆ.
ಯ್ಯೂಟ್ಯೂಬ್ ತೆರೆದುಕೊಳ್ಳಲು ಸಮಸ್ಯೆಯಾಗುತ್ತಿದ್ದ ಹಿನ್ನೆಲೆಯಲ್ಲಿ ಮತ್ತು ಎರರ್ ಕೋಡ್ ಕಾಣಿಸಿಕೊಳ್ಳುತ್ತಿದ್ದರಿಂದ ಜಗತ್ತಿನಾದ್ಯಂತ ಅಸಂಖ್ಯ ಬಳಕೆದಾರರು ಈ ಬಗ್ಗೆ ಯ್ಯೂಟ್ಯೂಬ್ಗೆ ವರದಿ ಮಾಡಿದ್ದರು. ಹೀಗಾಗಿ ಸಮಸ್ಯೆ ಸರಿಪಡಿಸಲು ಸಂಸ್ಥೆ ಹರಸಾಹಸ ಪಟ್ಟಿತ್ತು.
ಸಮಸ್ಯೆಯ ಕುರಿತು ಬಳಕೆದಾರರಿಂದ ವರದಿ ಪಡೆದುಕೊಂಡ ಯ್ಯೂಟ್ಯೂಬ್ ಈ ಕುರಿತು ತನ್ನ ಅಧಿಕೃತ ಖಾತೆಯಲ್ಲಿ ಸ್ಪಷ್ಟನೆಯನ್ನೂ ನೀಡಿತ್ತು. ಸಮಸ್ಯೆ ಸರಿಪಡಿಸಲು ಶ್ರಮಿಸುತ್ತಿರುವುದಾಗಿ ಹೇಳಿತ್ತಿತು.
” ಯ್ಯೂಟ್ಯೂಬ್ನಲ್ಲಿ ಕಾಣಿಸಿಕೊಂಡಿರುವ ಸಮಸ್ಯೆಯ ಕುರಿತು ವರದಿ ಮಾಡಿರುವುದಕ್ಕೆ ಬಳಕೆದಾರರಿಗೆ ಧನ್ಯವಾದಗಳು. ಇದನ್ನು ಸರಿಪಡಿಸುವ ನಿಟ್ಟಿನಲ್ಲಿ ನಾವು ಕೆಲಸ ಮಾಡುತ್ತಿದ್ದೇವೆ. ಸಮಸ್ಯೆ ಸರಿಯಾದ ಕೂಡಲೇ ನಾವು ನಿಮಗೆ ತಿಳಿಸುತ್ತೇವೆ. ನಮ್ಮಿಂದಾದ ತೊಂದರೆಗೆ ಕ್ಷಮೆ ಕೋರುತ್ತೇವೆ,” ಎಂದು ಹೇಳಿಕೊಂಡಿದೆ.
ಅಂತಿಮವಾಗಿ ಬುಧವಾರ ಬೆಳಗ್ಗೆ 8 ಗಂಟೆ ಹೊತ್ತಿಗೆ ಸಮಸ್ಯೆ ಸರಿಪಡಿಸುವಲ್ಲಿ ಯ್ಯೂಟ್ಯೂಬ್ ಯಶಸ್ವಿಯಾಯಿತು. ಅಲ್ಲಿಂದೀಚೆಗೆ ವಿಡಿಯೋಗಳು ಪ್ಲೇ ಆಗಲಾರಂಭಿಸಿದವು.
Comments are closed.