ಅಂತರಾಷ್ಟ್ರೀಯ

ಭಾರತದ ವಿರುದ್ಧ ಮತ್ತೆ ಆಕ್ರೋಶ ವ್ಯಕ್ತಪಡಿಸಿದ ಟ್ರಂಪ್ ಹೇಳಿದ್ದೇನು…?

Pinterest LinkedIn Tumblr

ವಾಷಿಂಗ್ ಟನ್: ಭಾರತ ಸರ್ಕಾರ ಅಮೆರಿಕ ಉತ್ಪನ್ನಗಳ ಬಗ್ಗೆ ಹೆಚ್ಚು ಸುಂಕ ವಿಧಿಸುತ್ತಿರುವ ಬಗ್ಗೆ ಮತ್ತೊಮ್ಮೆ ಡೊನಾಲ್ಡ್ ಟ್ರಂಪ್ ಅಳಲು ತೋಡಿಕೊಂಡಿದ್ದಾರೆ.

ಅ.01 ರಂದು ಶ್ವೇತ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿರುವ ಟ್ರಂಪ್ ಮತ್ತೆ ಭಾರತ ಸೇರಿದಂತೆ ಹಲವು ರಾಷ್ಟ್ರಗಳು ಅಮೆರಿಕ ಉತ್ಪನ್ನಗಳ ಬಗ್ಗೆ ಹೆಚ್ಚು ಸುಂಕ ವಿಧಿಸುತ್ತಿರುವುದರ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಈ ಬಾರಿ ಭಾರತವನ್ನು ಸುಂಕಗಳ ರಾಜ ಎಂದು ಕರೆದಿರುವ ಟ್ರಂಪ್, “ಸುಂಕಗಳ ರಾಜ ಭಾರತ ಕೇವಲ ನನ್ನನ್ನು ಸಂತೋಷಪಡಿಸಲಷ್ಟೇ ಅಮೆರಿಕದೊಂದಿಗೆ ವ್ಯಾಪಾರ ಒಪ್ಪಂದ ಬಯಸುತ್ತಿದೆ” ಎಂದು ಹೇಳಿದ್ದಾರೆ
.
ಮೆಕ್ಸಿಕೋ ಹಾಗೂ ಕೆನಡಾದೊಂದಿಗಿನ ವ್ಯಾಪಾರ ಒಪ್ಪಂದವನ್ನು ಘೋಷಿಸಿದ ವೇಳೆ ಟ್ರಂಪ್ ಭಾರತ, ಜಪಾನ್, ಯುರೋಪಿಯನ್ ಯೂನಿಯನ್, ಚೀನಾದೊಂದಿಗಿನ ವ್ಯಾಪಾರ ಒಪ್ಪಂದಗಳ ಬಗ್ಗೆಯೂ ಮಾಹಿತಿ ನೀಡಿದ್ದಾರೆ. ಅಮೆರಿಕ ಉತ್ಪನ್ನಗಳ ಮೇಲೆ ಹೆಚ್ಚು ಸುಂಕ ವಿಧಿಸುತ್ತಿರುವ ಭಾರತದ ನಡೆಯನ್ನು ಖಂಡಿಸಿರುವ ಟ್ರಂಪ್, ಭಾರತೀಯ ಉತ್ಪನ್ನಗಳ ಮೇಲೂ ಹೆಚ್ಚಿನ ಸುಂಕ ವಿಧಿಸುವ ಎಚ್ಚರಿಕೆ ನೀಡಿದ್ದಾರೆ.

ಅಮೆರಿಕ ವ್ಯಾಪಾರ ಪ್ರತಿನಿಧಿಗಳು ಹೆಚ್ಚಿನ ಸುಂಕ ವಿಧಿಸುತ್ತಿರುವುದರ ಬಗ್ಗೆ ಮಾತುಕತೆ ನಡೆಸುತ್ತಿದ್ದಾರೆ. “ಅಮೆರಿಕ ಉತ್ಪನ್ನಗಳಿಗೆ ಏಕೆ ಹೆಚ್ಚಿನ ಸುಂಕ ವಿಧಿಸುತ್ತಿದ್ದೀರಿ ಎಂದು ಅಮೆರಿಕ ಅಧಿಕಾರಿಗಳು ಕೇಳಿದ ಪ್ರಶ್ನೆಗೆ “ಅಮೆರಿಕ ಅಧ್ಯಕ್ಷರನ್ನು ಸಂತೋಷಪಡಿಸಲಷ್ಟೇ” ಎಂದು ಭಾರತದ ಅಧಿಕಾರಿಗಳು ಹೇಳಿದ್ದಾಗಿ ಟ್ರಂಪ್ ಹೇಳಿದ್ದಾರೆ.

Comments are closed.