
ಅತಿ ಎತ್ತರ, ವಿಪರೀತ ವೇಗ, ಅನೇಕ ಏರಿಳಿತ…ಗಟ್ಟಿ ಮನಸ್ಸು ಮಾಡಿ ರೋಲರ್ ಕೋಸ್ಟರ್ನಲ್ಲಿ ಕೂತರೆ ಹೊಸ ಅನುಭವ ಸಿಗುವುದರಲ್ಲಿ ಸಂಶಯವೇ ಇಲ್ಲ. ಇಂತಹ ಅನುಭವವನ್ನು ಮತ್ತಷ್ಟು ಮೈನವರೇಳಿಸುವಂತೆ ಮಾಡಲು ಕೆನೆಡಾದಲ್ಲಿ ವಿಶ್ವದ ಅತಿ ಉದ್ದದ ಡೈವ್ ಕೋಸ್ಟರ್ ಅಥವಾ ರೋಲರ್ ಕೋಸ್ಟರ್ನ್ನು ಸ್ಥಾಪಿಸಲಾಗಿದೆ. ಈ ಥೀಮ್ ಪಾರ್ಕ್ ಮುಂದಿನ ವರ್ಷದಿಂದ ಪ್ರವಾಸಿಗರಿಗೆ ಮುಕ್ತವಾಗಲಿದೆ.
ಟೊರಾಂಟೊ ನಗರದ ವಂಡರ್ಲ್ಯಾಂಡ್ನಲ್ಲಿ ಯುಕಾನ್ ಸ್ಟ್ರೈಕರ್ ಸಂಸ್ಥೆ ಈ ರೋಲರ್ ಕೋಸ್ಟರ್ನ್ನು ನಿರ್ಮಿಸಿದೆ. ಸುಮಾರು 130 ಕಿ.ಮೀ ವೇಗದಲ್ಲಿ ಚಲಿಸುವ ಈ ರೋಲರ್ 3,625 (1 .1ಕಿ.ಮೀ) ಅಡಿ ಉದ್ದವನ್ನು ಹೊಂದಿದೆ.
ಈ ಸಾಹಸಮಯ ಪಯಣದ ನಡುವೆ ಮಧ್ಯ ಭಾಗದಲ್ಲಿ ಮೂರು ಸೆಕೆಂಡ್ಗಳ ಕಾಲ ನಿಲ್ಲಿಸಲಾಗುತ್ತದೆ. 90 ಡಿಗ್ರಿ ಡ್ರಾಪ್ನಿಂದ ಈ ಡೈವ್ ನೇರವಾಗಿ ಅಂಡರ್ವಾಟರ್ ಸುರಂಗದ ಮೂಲಕ ಚಲಿಸಲಿದೆ. ನಾಲ್ಕು ವಿವಿಧ ರೀತಿಯ ಏರಿಳಿತಗಳಲ್ಲಿ ಚಲಿಸಲಿರುವ ಡೈವ್ ಕೋಸ್ಟರ್ನ್ನು 360 ಡಿಗ್ರಿಯಲ್ಲಿ ನಿರ್ಮಿಸಲಾಗಿದೆ.
ಗೋಲ್ಡ್ ರಶ್ ಥೀಮ್ನ ಯುಕಾನ್ ಸ್ಟ್ರೈಕರ್ ಕೆನಡಾದ ವಂಡರ್ಲ್ಯಾಂಡ್ನಲ್ಲಿ 2019ರಲ್ಲಿ ತೆರೆದುಕೊಳ್ಳಲಿದೆ. ಸದ್ಯ ವಿಶ್ವದ ಅತಿ ಎತ್ತರದ ರೋಲರ್ ಕೋಸ್ಟರ್ ಅಮೆರಿಕದ ಒಹಿಯೊ ರಾಜ್ಯದಲ್ಲಿದಲ್ಲಿದೆ. 120 ಕಿ.ಮೀ ವೇಗದಲ್ಲಿ ಚಲಿಸುವ ಈ ಡೈವ್ ಕೋಸ್ಟರ್ 223 ಅಡಿ ಎತ್ತರದಲ್ಲಿದ್ದು, 3,415 ಉದ್ದವನ್ನು ಹೊಂದಿದೆ. ಆದರೆ ಮುಂದಿನ ವರ್ಷದಿಂದ ಕೆನಡಾದ ಯುಕಾನ್ ಸ್ಟ್ರೈಕರ್ನ ಈ ಡೈವ್ ಅಥವಾ ರೋಲರ್ ಕೋಸ್ಟರ್ ವಿಶ್ವದ ಅತ್ಯಂತ ಉದ್ದದ ಡೈವ್ ಕೋಸ್ಟರ್ ಎಂಬ ಹೆಗ್ಗಳಿಕೆ ಪಾತ್ರವಾಗಲಿದೆ.
Comments are closed.