ಅಂತರಾಷ್ಟ್ರೀಯ

ಮಕ್ಕಳ ಸೆಕ್ಸ್ ಚಿತ್ರ-ವೀಡಿಯೊ ಇಟ್ಟುಕೊಂಡಿದ್ದ ಭಾರತೀಯನಿಗೆ ಅಮೆರಿಕಾದಲ್ಲಿ ಜೈಲು

Pinterest LinkedIn Tumblr

ನ್ಯೂಯಾರ್ಕ್‌: ಸಾವಿರಕ್ಕೂ ಹೆಚ್ಚು ಮಕ್ಕಳ ಅಶ್ಲೀಲ ಚಿತ್ರಗಳು, 380 ಕ್ಕೂ ಹೆಚ್ಚು ನೀಲಿ ಚಿತ್ರಗಳನ್ನು ಹೊಂದಿದ್ದ ಕಾರಣಕ್ಕಾಗಿ ಭಾರತೀಯ ಯುವಕನೊಬ್ಬನಿಗೆ ಅಮೆರಿಕಾದಲ್ಲಿ ಜೈಲು ಶಿಕ್ಷೆ ವಿಧಿಸಲಾಗಿದೆ.

ಪಿಟ್ಸ್‌ಬರ್ಗ್‌ನಲ್ಲಿ ವಾಸವಿದ್ದ 28 ರ ಹರೆಯದ ಅಭಿಜಿತ್‌ ದಾಸ್‌ ಎಂಬಾತನಿಗೆ ಫೆಡರಲ್‌ ಕೋರ್ಟ್‌ 5 ವರ್ಷಗಳ ಜೈಲು ಮತ್ತು 10 ವರ್ಷಗಳ ಮೇಲ್ವಿಚಾರಣೆ ಬಿಡುಗಡೆ ಶಿಕ್ಷೆಯನ್ನು ವಿಧಿಸಿದೆ.

ಪೊಲೀಸರ ತನಿಖೆ ವೇಳೆ ಅಭಿಜಿತ್‌ ಕಂಪ್ಯೂಟರ್‌ನಲ್ಲಿ 380 ಕ್ಕೂ ಹೆಚ್ಚು ನೀಲಿ ಚಿತ್ರಗಳ ತುಣುಕುಗಳು ಮತ್ತು 1000ಕ್ಕೂ ಹೆಚ್ಚು ಮಕ್ಕಳ ಅಶ್ಲೀಲ ಫೋಟೋಗಳು ಪತ್ತೆಯಾಗಿದ್ದವು.

ಅಮೆರಿಕದಲ್ಲಿ 18 ವರ್ಷಗಳಿಗಿಂತ ಕೆಳಗಿನ ಪ್ರಾಯದವರನ್ನು ಲೈಂಗಿಕ ಚಿತ್ರಗಳಲ್ಲಿ ಬಳಸಿಕೊಳ್ಳುವುದು ಮತ್ತು ಆ ಚಿತ್ರಗಳನ್ನು ಇಟ್ಟುಕೊಳ್ಳುವುದು ಶಿಕ್ಷಾರ್ಹ ಅಪರಾಧವಾಗಿದೆ.

Comments are closed.