ಅಂತರಾಷ್ಟ್ರೀಯ

ಗ್ರೀಸ್‌ ಬೆಂಕಿ ಅವಘಡದ ಮೃತರ ಸಂಖ್ಯೆ 50!

Pinterest LinkedIn Tumblr


ಅಥೆನ್ಸ್‌ : ಗ್ರೀಸ್‌ ಆದ್ಯಂತ ಹೊತ್ತಿ ಉರಿಯುತ್ತಿರುವ ಬೆಂಕಿಗೆ ಬಲಿಯಾಗಿರುವವರ ಸಂಖ್ಯೆ ಇಂದು ಮಂಗಳವಾರ 50ಕ್ಕೇರಿದೆ.

ರೆಡ್‌ ಕ್ರಾಸ್‌ ಅಧಿಕಾರಿಗಳು ಸಮುದ್ರ ಬದಿಯ ರೆಸಾರ್ಟ್‌ ನಲ್ಲಿ ತಾವು ಇನ್ನೂ 26 ಕಳೇಬರಗಳನ್ನು ಪತ್ತೆ ಹಚ್ಚಿರುವುದಾಗಿ ಹೇಳಿದ್ದಾರೆ.

ಅಧಿಕಾರಿಗಳು ಈ ಮೊದಲು ಸಾವಿನ ಸಂಖ್ಯೆ 24 ಎಂದೂ ಅಥೆನ್ಸ್‌ ಪ್ರದೇಶದ ಮ್ಯಾಟಿ ಕರಾವಳಿ ಪಟ್ಟಣದಲ್ಲಿ ಕಾಳ್‌ಗಿಚ್ಚಿಗೆ ಸಿಲುಕಿ ಗಾಯಗೊಂಡವರ ಸಂಖ್ಯೆ 150ಕ್ಕೂ ಹೆಚ್ಚು ಎಂದು ಹೇಳಿದ್ದರು.

ರೆಡ್‌ ಕ್ರಾಸ್‌ ಕಾರ್ಯಕರ್ತರು ಇಂದು ತಾವು ಇನ್ನೂ 26 ಮೃತ ದೇಹಗಳನ್ನು ಪತ್ತೆ ಹಚ್ಚಿರುವುದನ್ನು ವರದಿ ಮಾಡಿರುವುದರಿಂದ ಮೃತರ ಸಂಖ್ಯೆ 50ಕ್ಕೇರಿರುವುದಾಗಿ ತಿಳಿಸಲಾಗಿದೆ.

Comments are closed.