ರಾಷ್ಟ್ರೀಯ

ಹಿಂದು ಯುವತಿ ಮದುವೆಯಾಗಲು ಹೋಗಿದ್ದ ಮುಸ್ಲಿಂ ವ್ಯಕ್ತಿ ಮೇಲೆ ಗುಂಪು ಥಳಿತ

Pinterest LinkedIn Tumblr


ನವದೆಹಲಿ: ಗುಂಪು ಹಲ್ಲೆ ಬಗ್ಗೆ ದೇಶಾದ್ಯಂತ ಚರ್ಚೆ ತೀವ್ರವಾಗಿರುವ ಬೆನ್ನಲ್ಲೇ ಮತ್ತೊಂದು ಘಟನೆ ಬೆಳಕಿಗೆ ಬಂದಿದೆ. ಹಿಂದು ಯುವತಿಯನ್ನು ಮದುವೆಯಾಗಲು ಹೋಗಿದ್ದ ಮುಸ್ಲಿಂ ವ್ಯಕ್ತಿಯನ್ನು ಒಂದು ಗುಂಪಿನ ಜನರು ಮನಬಂದಂತೆ ಥಳಿಸಿರುವ ಘಟನೆ ಘಾಜಿಯಾಬಾದ್​ನ ನ್ಯಾಯಾಲಯದ ಮುಂದೆ ನಡೆದಿದೆ. ಈ ಸಂಬಂಧ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ.

ಭೂಪಾಲ್​ ನಿವಾಸಿಯಾದ ಸಾಹೇಲ್ ಸೋಮವಾರ ಮಧ್ಯಾಹ್ನ ಹಿಂದು ಯುವತಿಯನ್ನು ರಿಜಿಸ್ಟರ್​ ಮದುವೆಯಾಗಲು ನ್ಯಾಯಾಲಯಕ್ಕೆ ಹೋಗಿದ್ದ. ಈ ವೇಳೆ ಮದುವೆ ವಿಧಾನದ ಬಗ್ಗೆ ಚರ್ಚಿಸುತ್ತಿರುವಾಗಲೇ ಗುಂಪೊಂದು ಏಕಾಏಕಿ ದಾಳಿ ಮಾಡಿದೆ. ಅಂತರ್ಜಾತಿ ವಿವಾಹ ಎಂಬುದರ ಮಾಹಿತಿ ತಿಳಿದು ದಾಳಿ ನಡೆಸಲಾಗಿದೆ. ಇದನ್ನು ನೋಡಿದ ಪೊಲೀಸರು ದಾಳಿಕೋರರಿಂದ ವ್ಯಕ್ತಿಯನ್ನು ರಕ್ಷಿಸಿದ್ದಾರೆ.

ಈ ಸಂಬಂಧ ಘಾಜಿಯಬಾದ್​ ಪೊಲೀಸರು ಸ್ವಯಂಪ್ರೇರಿತ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಇಬ್ಬರು ವ್ಯಕ್ತಿಗಳ ಮೇಲೆ ಎಫ್​ಐಆರ್​ ದಾಖಲಿಸಲಾಗಿದೆ. ವಿನೋದ್​ ಹಾಗೂ ನವನೀತ್​ ಮತ್ತು ಅನೇಕ ಅಪರಿಚಿತರು ಪ್ರಕರಣದಲ್ಲಿ ಭಾಗಿಯಾಗಿದ್ದಾರೆ. ಇದುವರೆಗೂ ಯಾರನ್ನು ಬಂಧಿಸಿಲ್ಲ ಎಂದು ಸಿಹಾನಿ ಗೇಟ್​ ಪೊಲೀಸ್​ ಠಾಣೆಯ ಅಧಿಕಾರಿ ಸಂಜಯ್​ ಪಾಂಡೆ ತಿಳಿಸಿದ್ದಾರೆ.

ಮದುವೆಯಾಗಲು ಹೊರಟಿದ್ದ ಜೋಡಿಗಳು ನೋಯ್ಡಾದಲ್ಲಿ ಕೆಲಸದಲ್ಲಿದ್ದಾರೆ. ಇಬ್ಬರ ನಡುವೆ ಪ್ರೇಮಾಂಕುರವಾಗಿ ಮದುವೆಯಾಗಲು ನಿರ್ಧರಿಸಿದ್ದರು. ಘಟನೆಯಿಂದ ಸಾಹೇಲ್​ಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಘಟನೆ ಸಂಭವಿಸುತ್ತಿದ್ದಂತೆ ಭಯಗೊಂಡ ಯುವತಿ ಅಲ್ಲಿಂದ ಪರಾರಿಯಾಗಿದ್ದಾಳೆ.

ಗುಂಪು ಹತ್ಯೆ ಬಗ್ಗೆ ಹೊಸ ಕಾನೂನು ರಚಿಸಲು ಕೇಂದ್ರ ಸರ್ಕಾರ ಸಚಿವ ಸಮಿತಿ ರಚಿಸಿದ ಎರಡೇ ದಿನದಲ್ಲಿ ಇಂಥಹ ಘಟನೆ ಮತ್ತೆ ಮರುಕಳಿಸಿದೆ. (

Comments are closed.