ಅಂತರಾಷ್ಟ್ರೀಯ

ಗಂಡನೊಂದಿಗೆ ಪ್ರಿಯತಮೆ: ಆಡಿ ಕಾರನ್ನು ಗುದ್ದಿ ಹಾಳು ಮಾಡಿದ ಹೆಂಡತಿ

Pinterest LinkedIn Tumblr


ಬೀಜಿಂಗ್‌ : ಪತಿಯ ಅತ್ಯಂತ ದುಬಾರಿ ಆಡಿ ಎ8 ಕಾರಿನೊಳಗೆ ಆತನ ಪ್ರಿಯತಮೆ ಇದ್ದುದನ್ನು ಕಂಡು ಸಿಟ್ಟಿಗೆದ್ದ ಪತ್ನಿ ಕೋಪಾವೇಶದ ಪರಾಕಾಷ್ಠೆಯಲ್ಲಿ ನಡು ರಸ್ತೆಯಲ್ಲೇ ಕಾರಿನ ಬಾನೆಟ್‌ ಏರಿ ಸುತ್ತಿಗೆಯಿಂದ ಕಾರಿನ ಗಾಜನ್ನು ಗುದ್ದಿ ಪುಡಿ ಮಾಡಿದ್ದಲ್ಲದೆ, ಕಾರು ತುಂಬ ಸುತ್ತಿಗೆ ಪೆಟ್ಟು ನೀಡಿ ಹಾನಿಗೈದ ಘಟನೆ ಚೀನದಲ್ಲಿ ನಡೆದಿದೆ.

ಈ ಘಟನೆಯ ವಿಡಿಯೋ ಚಿತ್ರಿಕೆ ಚೀನದ ಸಾಮಾಜಿಕ ಮಾಧ್ಯಮ ತಾಣಗಳಲ್ಲಿ ವೈರಲ್‌ ಆಗಿದೆ.

ಪತ್ನಿ ಕಾರಿನ ಬಾನೆಟ್‌ ಮೇಲೆ ಕುಳಿತು ಕಾರಿನ ವಿಂಡ್‌ ಶೀಲ್ಡ್‌ ಗುದ್ದುತ್ತಿದ್ದಂತೆಯೇ ಕಾರಿನೊಳಗೆ ಪ್ರಿಯತಮೆಯ ಜತೆಗೆ ಇದ್ದ ಪತಿಯು ಕಾರನ್ನು ನಿಧಾನವಾಗಿ ರಸ್ತೆ ಬದಿಗೆ ತಂದಿರಿಸಿದಾಗ ಈ ಪ್ರಹಸನವನ್ನು ಕಾಣುತ್ತಿದ್ದ ದಾರಿಹೋಕರು ಸ್ಥಳದಲ್ಲಿ ಗುಂಪಾಗಿ ನೆರದರು.

ಆಗ ಕೋಪೋದ್ರಿಕ್ತ ಪತ್ನಿಯು ಕಾರಿನ ಬಾಗಿಲೆಳೆದು ಪತಿಯನ್ನು ಮತ್ತು ಆತನ ಪ್ರಿಯತಮೆಯನ್ನು ಹೊರಗೆಳೆದು ಜಗಳಕ್ಕೇ ನಿಂತಳು. ಪ್ರಿಯತಮೆಯ ತಲೆ ಕೂದಲನ್ನು ಕೈಯಲ್ಲಿ ಗಟ್ಟಿಯಾಗಿ ಹಿಡಿದು ಆಕೆಯನ್ನು ಎಲ್ಲರ ಮುಂದೆ ಎಳೆದಾಡಿದಳು.

ಪ್ರಹಸನ ತಾರಕಕ್ಕೇರುತ್ತಿದ್ದಂತೆಯೇ ಪೊಲೀಸರು ಈ ಮೂವರನ್ನೂ ಠಾಣೆಗೆ ಕರೆದೊಯ್ದುರು. ಅಲ್ಲಿ ಪೊಲೀಸರು ಅದೇನೋ ಸಂಧಾನ, ಮನಒಲಿಕೆ, ತೇಪೆಗಾರಿಕೆಯನ್ನು ಯಶಸ್ವಿಯಾಗಿ ನಡೆಸಿದರು. ಪ್ರಿಯತಮೆಯನ್ನು ಬೇರ್ಪಡಿಸಿದ ಬಳಿಕ ಪತಿ ಪತ್ನಿ ವಿರೂಪಗೊಂಡ ಆಡಿ ಕಾರಿನಲ್ಲೇ ಮನೆಗೆ ಮರಳಿದರು.

Comments are closed.