ಅಂತರಾಷ್ಟ್ರೀಯ

ಲಾಹೋರ್ ಏರ್ ಪೋರ್ಟ್ ನಲ್ಲಿ ನವಾಝ್ ಶರೀಫ್ ಬಂಧನ

Pinterest LinkedIn Tumblr


ಇಸ್ಲಮಾಬಾದ್: ಪನಾಮ ಪೇಪರ್ಸ್ ಹಗರಣದಲ್ಲಿ ದೋಷಿಯಾಗಿ ಶಿಕ್ಷೆಗೆ ಒಳಗಾಗಿರುವ ಪಾಕಿಸ್ತಾನ ಮಾಜಿ ಪ್ರಧಾನಿ ನವಾಝ್ ಶರೀಫ್‍‍ರನ್ನು, ಲಂಡನ್‍‍ನಿಂದ ಪಾಕಿಸ್ತಾನಕ್ಕೆ ಹಿಂದಿರಿಗುವ ವೇಳೆ ಲಾಹೋರ್ ಅಂತಾರಾಷ್ಟ್ರ ವಿಮಾನ ನಿಲ್ದಾಣದಲ್ಲಿ ಬಂಧಿಸಲಾಗಿದೆ.

ಲಂಡನ್‍‍ನಿಂದ ಅಬುದಾಬಿಗೆ ಬಂದ ಶರೀಫ್ ಬಳಿಕ ಅಲ್ಲಿಂದ ಲಾಹೋರ್‍‍ಗೆ ಬಂದಿದ್ದರು. ಲಾಹೋರ್ ಏರ್‍‍ಪೋರ್ಟ್ ನಲ್ಲಿ ನವಾಝ್ ಶರೀಫ್ ಹಾಗೂ ಅವರ ಪುತ್ರಿ ಮರಿಯಂ ನವಾಝ್ ರನ್ನೂ ಬಂಧಿಸಲಾಗಿದೆ ಎಂದು ಪಾಕ್ ಮಾಧ್ಯಮಗಳು ತಿಳಿಸಿವೆ. ಲಾಹೋರ್‍‍ನಲ್ಲಿ ಇಂಟರ್‍‍ನೆಟ್ ಸೇವೆಗಳನ್ನು ಸ್ಥಗಿತಗೊಳಿಸಲಾಗಿದ್ದು, ಶರೀಫ್ ತಾಯಿ ಬೇಗಂ ಶಮೀಮ್ ಅಖ್ತರ್ ಹಾಗೂ ಶೆಬಾಝ್ ಶರೀಫ್‍ಗೆ ಏರ್ಪೋರ್ಟ್ ಗೆ ಒಳಗೆ ಹೋಗಲು ಅನುಮತಿ ನೀಡಲಾಗಿದೆ. ಏರ್ ಪೋರ್ಟ್ ಹೊರಗಡೆ ಸಾವಿರಾರು ಅಭಿಮಾನಿಗಳು ಜಮಾಯಿಸಿದ್ದು ಶರೀಫ್ ಪರ ಘೋಷಣೆ ಕೂಗುತ್ತಿದ್ದಾರೆ. ಏರ್ಪೋರ್ಟ್ ಸುತ್ತಲೂ ಬಿಗಿ ಬಂದೋ ಬಸ್ತ್ ಕಲ್ಪಿಸಲಾಗಿದೆ.

ಪನಾಮ ಪೇಪರ್ಸ್ ಹಗರಣದಲ್ಲಿ ದೋಷಿ ಎಂದು ಸಾಬೀತಾಗಿ ನವಾಝ್ ಶರೀಫ್‍‍ಗೆ 10 ವರ್ಷ ಹಾಗೂ ಹಾಗೂ ಪುತ್ರಿ ಮರಿಯಂಗೆ 7 ವರ್ಷ ಜೈಲು ಶಿಕ್ಷೆ ವಿಧಿಸಿ ಪಾಕ್ ಸುಪ್ರಿಂ ಕೋರ್ಟ್ ತೀರ್ಪು ನೀಡಿತ್ತು.

Comments are closed.