ಅಂತರಾಷ್ಟ್ರೀಯ

5,300 ವರ್ಷಗಳ ಹಿಂದೆ ಸತ್ತ ವ್ಯಕ್ತಿ ಏನು ತಿಂದಿದ್ದ ಎಂದು 27 ವರ್ಷಗಳ ಸಂಶೋಧನೆಯಿಂದ ಬಯಲು!

Pinterest LinkedIn Tumblr


ಇಟಲಿ: ಇದು ಬರೋಬ್ಬರಿ 5,300 ವರ್ಷಗಳ ಹಿಂದಿನ ಕಥೆ.. ಅಂದು ಹಿಮದ ರಾಶಿಯಲ್ಲಿ ಮೃತಪಟ್ಟಿದ್ದ ಮನುಷ್ಯ ಸಾಯೋ ಮುನ್ನ ಏನು ತಿಂದಿದ್ದ ಅಂತಾ ಈಗ ಗೊತ್ತಾಗಿದೆ. ಆತ ಏನ್ ತಿಂದಿದ್ದ ಅಂತಾ ಕಂಡು ಹಿಡಿಯೋಕೆ 27 ವರ್ಷ ಹಿಡಿದಿದೆ. ಅರೆ ಇದೇನಪ್ಪಾ ಅಂತೀರಾ? ಇಲ್ಲಿದೆ ವಿವರ

ಉತ್ತರ ಇಟಲಿಯ ಹಿಮದ ರಾಶಿಯಲ್ಲಿ 1991ರಲ್ಲಿ ಅಂದ್ರೆ 27 ವರ್ಷಗಳ ಹಿಂದೆ ಒಂದು ಶವ ಅಂದ್ರೆ ಮಮ್ಮಿ ಸಿಕ್ಕಿತ್ತು. ಜರ್ಮನಿಯ ಇಬ್ಬರು ಸಂಶೋಧಕರಿಗೆ ಸಮುದ್ರ ಮಟ್ಟದಿಂದ 10, 500 ಮೀಟರ್ ಎತ್ತರದಲ್ಲಿ ಈ ಮಮ್ಮಿ ಶವ ಸಿಕ್ಕಿತ್ತು.. ಈತ ಸತ್ತಾಗ 45 ವರ್ಷ ಆಗಿತ್ತು ಎಂದು ಸಂಶೋಧಕರು ಹೇಳಿದ್ದಾರೆ.

ಶವ ಸಿಕ್ಕ ದಿನದಿಂದಲೇ ಪರೀಕ್ಷೆ ನಡೆಯುತ್ತಲೇ ಇತ್ತು. ಈಗ ಆತ ಏನ್ ತಿಂದಿದ್ದ ಅಂತಾ ಸಂಶೋಧಕರು ಪತ್ತೆ ಮಾಡಿದ್ದಾರೆ. ಸಾಯುವ ಮೊದಲು ಆ ಮನುಷ್ಯ ಕಾಡು ಮೇಕೆ ಹಾಗೂ ಕೆಂಪು ಜಿಂಕೆಯ ಮಾಂಸ ತಿಂದಿದ್ದ ಅಂತಾ ಗೊತ್ತಾಗಿದೆ. ಆತನ ದೇಹದಲ್ಲಿ ಮೇಕೆ ಹಾಗೂ ಜಿಂಕೆ ಕೊಬ್ಬಿನ ಅಂಶ ಪತ್ತೆಯಾಗಿದೆ.

ಇಟಲಿಯ ಬಲಜಾನೋ ಎಂಬ ಮಮ್ಮಿ ಸಂಶೋಧಕರ ತಂಡ ಈ ಐಸ್​ಮ್ಯಾನ್​ ಪರೀಕ್ಷೆ ಮಾಡಿ ಇಷ್ಟೆಲ್ಲಾ ಮಾಹಿತಿ ಕಲೆ ಹಾಕಿದೆ. ಈ ಮಮ್ಮಿಗೆ ಸಂಶೋಧಕರು 9 ವರ್ಷಗಳ ಹಿಂದೆ ಸಿಟಿ ಸ್ಕ್ಯಾನ್ ಕೂಡಾ ಮಾಡಿದ್ದರು.

ಅದೇನೆ ಇದ್ದರೂ ಸಾವಿರಾರು ವರ್ಷಗಳ ಮನುಷ್ಯ ಮೇಕೆ, ಜಿಂಕೆ ಮಾಂಸ ತಿಂದಿದ್ದು ಈಗ ಗೊತ್ತಾಗಿದೆ ಅನ್ನೋದೇ ಅಚ್ಚರಿ ವಿಷಯ

Comments are closed.