ಅಂತರಾಷ್ಟ್ರೀಯ

ಪಾಕ್ ನಲ್ಲಿ ಆತ್ಮಾಹುತಿ ಬಾಂಬ್​ ದಾಳಿಗೆ 70 ಸಾವು

Pinterest LinkedIn Tumblr


ಪಾಕಿಸ್ತಾನ: ಇತ್ತ ಪಾಕಿಸ್ತಾನದ ಮಾಜಿ ಪ್ರಧಾನಿ ನವಾಜ್​ ಷರೀಫ್​ ಅವರ ಬಂಧನವಾಗುತ್ತಿದ್ದಂತೆ ಬಲೂಚಿಸ್ತಾನದಲ್ಲಿ ಇಂದು ಸಂಜೆ ನಡೆಯುತ್ತಿದ್ದ ರ್ಯಾಲಿಯ ಮೇಲೆ ನವಾಜ್​ ಷರೀಫ್​ ಬೆಂಬಲಿಗರು ಆತ್ಮಾಹುತಿ ಬಾಂಬ್​ ದಾಳಿ ನಡೆಸಿದ್ದಾರೆ. ಈ ದಾಳಿಯಲ್ಲಿ 70 ಜನ ಸಾವನ್ನಪ್ಪಿದ್ದಾರೆ.

ನವಾಜ್ ಷರೀಫ್​ ಅವರ ಬಂಧನವನ್ನು ಖಂಡಿಸಿ ಗಲಭೆ ಸೃಷ್ಟಿಸಿದ್ದ ಅವರ ಬೆಂಬಲಿಗರು ದಾಳಿ ನಡೆಸಿರುವುದರಿಂದ 120 ಜನ ಗಾಯಗೊಂಡಿದ್ದಾರೆ. ಇವರಲ್ಲಿ ಕೆಲವರ ಸ್ಥಿತಿ ಗಂಭೀರವಾಗಿರುವುದರಿಂದ ಸಾವಿನ ಸಂಖ್ಯೆ ಹೆಚ್ಚಳವಾಗುವ ಸಾಧ್ಯತೆ ಇದೆ. ಈ ರ್ಯಾಲಿಯಲ್ಲಿ 1 ಸಾವಿರಕ್ಕೂ ಅಧಿಕ ಜನರು ಪಾಲ್ಗೊಂಡಿದ್ದರು.

ಜುಲೈ 25ರಂದು ನಡೆಯುವ ಚುನಾವಣೆಯ ಹಿನ್ನೆಲೆಯಲ್ಲಿ ಗಲಭೆ ಸೃಷ್ಟಿಸಲು ಈ ದಾಳಿ ನಡೆಸಲಾಗಿದೆ ಎನ್ನಲಾಗಿದೆ. ಆ ಚುನಾವಣೆಯ ಸ್ಪರ್ಧಿಯಾಗಿದ್ದ ಅವಾಮಿ ನ್ಯಾಷನಲ್​ ಪಾರ್ಟಿಯ ಮುಖಂಡರನ್ನು ಕಳೆದ ಸೋಮವಾರ ಆತ್ಮಾಹುತಿ ದಾಳಿಯಲ್ಲಿ ಹತ್ಯೆ ಮಾಡಲಾಗಿತ್ತು.

ಪಾಕಿಸ್ತಾನದ ಮಾಜಿ ಪ್ರಧಾನಿ ನವಾಜ್ ಷರೀಫ್‌ಗೆ ಸುಪ್ರೀಂಕೋರ್ಟ್ 10 ವರ್ಷ ಜೈಲು ಶಿಕ್ಷೆ ವಿಧಿಸಿದ್ದು, ಲಂಡನ್‌ನಿಂದ ಅವರು ಪಾಕಿಸ್ತಾನಕ್ಕೆ ಮರಳುತ್ತಿರುವ ಹಿನ್ನೆಲೆಯಲ್ಲಿ ಎಲ್ಲೆಡೆ ಬಿಗಿ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗಿತ್ತು. ಜತೆಗೆ ಷರೀಫ್ ಬೆಂಬಲಿಗರು ಪ್ರತಿಭಟನೆ ನಡೆಸುವ ಸಾಧ್ಯತೆಯಿರುವುದರಿಂದ ಹಲವರನ್ನು ಪೊಲೀಸರು ಬಂಧಿಸಿದ್ದರು. ಆದರೂ, ಈ ಕೃತ್ಯ ಘಟಿಸಿದೆ.

Comments are closed.