ಅಂತರಾಷ್ಟ್ರೀಯ

ಥೈಲ್ಯಾಂಡ್​ ಗುಹೆಯೊಳಗಿದ್ದ 13 ಜನರ ರಕ್ಷಿಸಿದ ಸಾಹಸೀ ತಂಡ

Pinterest LinkedIn Tumblr


ಥೈಲ್ಯಾಂಡ್​: ಥೈಲ್ಯಾಂಡ್​ ಗುಹೆಯಲ್ಲಿ ಸಿಲುಕಿದ್ದ 12 ಬಾಲಕರು ಹಾಗೂ ಕೋಚ್​ನ್ನು ರಕ್ಷಿಸುವಲ್ಲಿ ರಕ್ಷಣಾ ತಂಡ ಯಶಸ್ವಿಯಾಗಿದೆ.

ಅಬ್ಬರದ ಮಳೆಯ ನಡುವೆಯೂ ಸಾಹಸೀ ತಂಡ ರಕ್ಷಣಾ ಕಾರ್ಯಾಚರಣೆ ನಡೆಸಿ ಆಪರೇಷನ್​ ಯಶಸ್ವಿಯಾಗುವಂತೆ ನೋಡಿಕೊಂಡಿದ್ದಾರೆ. ಮೂರನೇ ದಿನ ನಡೆಯುತ್ತಿರುವ ರಕ್ಷಣಾ ಕಾರ್ಯಾಚರಣೆಯಲ್ಲಿ ಗುಹೆಯಲ್ಲಿ ಉಳಿದಿದ್ದ ಎಲ್ಲರನ್ನು ರಕ್ಷಿಸಲಾಗಿದೆ. ಭಾನುವಾರ ನಡೆದ ಕಾರ್ಯಾಚರಣೆಯಲ್ಲಿ ನಾಲ್ಕು ಹುಡುಗರು, ಸೋಮವಾರ 4 ಮತ್ತು ಇಂದಿನ ಕಾರ್ಯಾಚರಣೆಯಲ್ಲಿ ಉಳಿದ 5 ಜನರನ್ನು ಮೇಲೆತ್ತಲಾಗಿದೆ.

ಥೈಲ್ಯಾಂಡ್​ನ ಚಿಯಾಂಗ್​ ರಾಯ್​ ಬಳಿಯ ಗುಹೆಯಲ್ಲಿ ಸಾವು ಬದುಕಿನ ಹೋರಾಟ ಶುಭಾಂತ್ಯಗೊಂಡಿದೆ. ಜೀವದ ಹಂಗನ್ನೂ ತೊರೆದು ಡೈವರ್​ಗಳ ತಂಡ ಜ್ಯೂನಿಯರ್​ ಫುಟ್​ಬಾಲ್​ ತಂಡವನ್ನು ರಕ್ಷಿಸಲು ನಿರಂತರ ಕಾರ್ಯಾಚರಣೆ ಮಾಡಿದ್ದು, ಇಡೀ ವಿಶ್ವಕ್ಕೇ ಹೆಮ್ಮೆ ತಂದುಕೊಟ್ಟಿದೆ. ಇಡೀ ವಿಶ್ವವೇ ರಕ್ಷಣಾ ಕಾರ್ಯಾಚರಣೆಯನ್ನು ಕುತೂಹಲದಿಂದ ನೋಡುತ್ತಿದ್ದರು. ಜತೆಗೆ ಎಲ್ಲರೂ ಸುರಕ್ಷಿತವಾಗಿ ಆಚೆ ಬರಲಿ ಎಂದು ಹಾರೈಸುತ್ತಿದ್ದರು. ಈಗ ಎಲ್ಲರ ಹಾರೈಕೆ ಈಡೇರಿದೆ. ಜತೆಗೆ ರಕ್ಷಣಾ ಕಾರ್ಯಾಚರಣೆ ಮಾಡಿದ ತಂಡಕ್ಕೆ ಭೇಷ್​ ಎನ್ನಲೇಬೇಕು.

ಕಾರ್ಯಾಚರಣೆಯ ಟೈಮ್​ಲೈನ್​:

ಜೂ 23: ಬಾಲಕರು ನಾಪತ್ತೆಯಾದ ಕುರಿತು ಸುದ್ದಿ
ಜೂ 24: ಗುಹೆಯಲ್ಲಿ ಬಾಲಕರು ಪತ್ತೆ
ಜೂ 25: ನೆವಿ ಸೀಲ್​ ಮುಳುಗು ತಜ್ಞರು ಗುಹೆ ಬಳಿ ಆಗಮನ
ಜೂ 26: ಗುಹೆಯ ಟಿ ಬ್ಲಾಕ್​ ವರೆಗೂ ಒಳಗೆ ಹೋದ ಮುಳುಗು ತಜ್ಞರು ಮಳೆಯಿಂದಾಗಿ ವಾಪಸ್​
ಜೂ 27: ಥಾಯ್​ ಸೀಲ್​ ಕಾರ್ಯಾಚಾರಣೆಗೆ ಕೈ ಜೋಡಿಸಿದ ಅಮೆರಿಕ ಸೇನೆ ಮತ್ತು ಮುಳುಗು ತಜ್ಞರು
ಜೂ 28: ಮಳೆಯಿಂದಾಗಿ ರಕ್ಷಣಾ ಕಾರ್ಯಾಚರಣೆ ಸ್ಥಗಿತ
ಜು 01: ಮತ್ತೆ ರಕ್ಷಣಾ ಕಾರ್ಯ ಆರಂಭಿಸಿದ ತಂಡ
ಜು 02: ಗುಹೆಯಲ್ಲಿ ಜೀವಂತವಾಗಿದ್ದ ಬಾಲಕರು ಪತ್ತೆ
ಜು 03: ಕೋಚ್​ ಮತ್ತು ಬಾಲಕರ ರಕ್ಷಣೆಗೆ ಮುಂದಾದ ತಂಡ
ಜು 04: ಗುಹೆಯಲ್ಲಿ ಶೇಖರಣೆಯಾಗಿದ್ದ ನೀರನ್ನು ಹೊರತೆಗೆಯಲಾಯಿತು
ಅಲ್ಲದೇ ಯುವಕರಿಗೆ ಡೈವ್​ ಮಾಡುವ ಬಗ್ಗೆ ತರಬೇತಿ ನೀಡಲಾಯಿತು
ಜು 06: ಆಮ್ಲಜನಕದ ಕೊರತೆಯಿಂದಾಗಿ ಥಾಯ್​ ಮುಳುಗು ತಜ್ಞ ಸಾವು
ಜು 08: ಡಿ-ಡೇಯಾಗಿದ್ದ ದಿನದಂದು ನಾಲ್ಕು ಬಾಲಕರ ರಕ್ಷಣೆ ಮಾಡಿದ ತಂಡ
ಜು 09: ಐದನೇ ಬಾಲಕನ ರಕ್ಷಿಸಿದ ತಂಡ ಮತ್ತು ಆರನೇ ಬಾಲಕ ತಂಡಕ್ಕೆ ಕೈಗೆಕುವಷ್ಟು ಹತ್ತಿರದಲ್ಲಿದ್ದಾನೆ.
ಜು 10: ಬೆಳಗ್ಗೆ 10.08 ನಿಮಿಷಕ್ಕೆ ಕಾರ್ಯಾಚರಣೆ ಆರಂಭ (ಥೈಲ್ಯಾಂಡ್​ ಸ್ಥಳೀಯ ಸಮಯ).
ಜು 10: ಕಾರ್ಯಾಚರಣೆಗೆ ಮಳೆಯ ಅಡ್ಡಿ, ತಾತ್ಕಾಲಿಕ ಸ್ಥಗಿತ.
ಜು 10: ಭಾರತದ ಸಮಯ 3 ಗಂಟೆ, ಥೈಲ್ಯಾಂಡ್​ ಸಮಯ ಸಂಜೆ 4.30ಕ್ಕೆ 9ನೇ ಹುಡುಗನ ರಕ್ಷಣೆ.
ಜು 10: 3.15 (ಭಾರತದ ಸಮಯ), 4.45 (ಥೈಲ್ಯಾಂಡ್​ ಸಮಯ) 10ನೇ ಬಾಲಕನ ರಕ್ಷಣೆ.
ಜು 10: 4.15 (ಭಾರತದ ಸಮಯ), 5.45 (ಥೈಲ್ಯಾಂಡ್ ಸಮಯ) 11ನೇ ಹುಡುನ ರಕ್ಷಣೆ.
ಜು 10: 5.20 (ಭಾರತದ ಸಮಯ), 6.45 (ಥೈಲ್ಯಾಂಡ್ ಸಮಯ) 12ನೇ ಹುಡುನ ರಕ್ಷಣೆ.
ಜು 10: 5.30 (ಭಾರತದ ಸಮಯ), 7 (ಥೈಲ್ಯಾಂಡ್​ ಸಮಯ) ಕೋಚ್​ ರಕ್ಷಣೆ.

Comments are closed.