ಅಂತರಾಷ್ಟ್ರೀಯ

ಅಮೆರಿಕದ ಕ್ಯಾನ್ಸಾಸ್‌ನಲ್ಲಿರುವ ರೆಸ್ಟೋರೆಂಟ್‌ವೊಂದರಲ್ಲಿ ಭಾರತೀಯ ಮೂಲದ ವಿದ್ಯಾರ್ಥಿಯನ್ನು ಗುಂಡಿಕ್ಕಿ ಹತ್ಯೆ

Pinterest LinkedIn Tumblr

ಕ್ಯಾನ್ಸಾಸ್: ಭಾರತೀಯ ಮೂಲದ ವಿದ್ಯಾರ್ಥಿಯೊಬ್ಬನನ್ನು ಅಮೆರಿಕದ ಕ್ಯಾನ್ಸಾಸ್‌ನಲ್ಲಿರುವ ರೆಸ್ಟೋರೆಂಟ್‌ವೊಂದರಲ್ಲಿ ಗುಂಡಿಕ್ಕಿ ಹತ್ಯೆ ಮಾಡಲಾಗಿದೆ.

ಕ್ಯಾನ್ಸಾಸ್‌ನ ಮಿಸ್ಸೌರಿ ವಿಶ್ವವಿದ್ಯಾಲಯದಲ್ಲಿ ವಿದ್ಯಾಬ್ಯಾಸ ಮಾಡುತ್ತಿದ್ದ 26 ವರ್ಷದ ತೆಲಂಗಾಣದ ವಿದ್ಯಾರ್ಥಿ ಶರತ್‌ ಕೊಪ್ಪು, ಕ್ಯಾನ್ಸಾಸ್‌ನ ರೆಸ್ಟೋರೆಂಟ್‌ನಲ್ಲಿ ಕೆಲಸ ಮಾಡುತ್ತಿದ್ದ. ಈ ವೇಳೆ ನನ್ನು ದುಷ್ಕರ್ಮಿಗಳು ಗುಂಡಿಕ್ಕಿ ಕೊಂದಿದ್ದಾರೆ. ಘಟನೆ ಬಳಿಕ ದುಷ್ಕರ್ಮಿಗಳು ಪರಾರಿಯಾಗಿದ್ದಾರೆ.

ಪ್ರಾಥಮಿಕ ಮಾಹಿತಿ ಪ್ರಕಾರ ಪೊಲೀಸರು, ದರೋಡೆ ಮಾಡುವ ಯತ್ನದಲ್ಲಿ ಕೊಲೆ ನಡೆದಿದೆ ಎಂದು ಶಂಕಿಸಿದ್ದು, ಆರೋಪಿಯ ಪತ್ತೆಗಾಗಿ ಶೋಧ ಕಾರ್ಯಕೈಗೊಂಡಿದ್ದಾರೆ.

ಪೊಲೀಸರು ತಿಳಿಸಿರುವಂತೆ, ಸ್ಥಳೀಯ ಕಾಲಮಾನ 7ಗಂಟೆ ವೇಳೆಗೆ ಶರತ್‌ ರೆಸ್ಟೋರೆಂಟ್‌ನಲ್ಲಿ ಕೆಲಸ ಮಾಡುತ್ತಿದ್ದಾಗ ರಕ್ತ ಸಿಕ್ತವಾಗಿ ಅಲ್ಲೇ ಇದ್ದ ಈಜುಕೊಳದಲ್ಲಿ ಬಿದ್ದಿದ್ದ. ಕೂಡಲೇ ಆತನನ್ನು ಆಸ್ಪತ್ರೆಗೆ ಸಾಗಿಸಲಾಯಿತಾದರೂ ಆವೇಳೆಗಾಗಲೇ ಆತ ಮೃತಪಟ್ಟಿದ್ದ.

ಶನಿವಾರ ಶಂಕಿತ ಹಂತಕನ ವಿಡಿಯೋವನ್ನು ಪೊಲೀಸರು ರಿಲೀಸ್‌ ಮಾಡಿದ್ದು, ಕಂದು ಮತ್ತು ಬಿಳಿ ಬಣ್ಣದ ಗೆರೆಯಿರುವ ಟೀಶರ್ಟ್‌ ಧರಿಸಿರುವ ಆತನ ಬಗ್ಗೆ ಸುಳಿವು ದೊರಕಿದಲ್ಲಿ ಮಾಹಿತಿ ನೀಡುವಂತೆ ಕೋರಿದ್ದಾರೆ. ಅಲ್ಲದೆ ಮಾಹಿತಿ ನೀಡಿದವರಿಗೆ 10 ಸಾವಿರ ಡಾಲರ್‌ ಬಹುಮಾನವನ್ನು ಘೋಷಿಸಿದ್ದಾರೆ.

Comments are closed.