ಅಂತರಾಷ್ಟ್ರೀಯ

ಜಪಾನ್ ರಾಜಕುಮಾರಿಯಿಂದ ಸಾಮಾನ್ಯ ಉದ್ಯೋಗಿಯ ಮದುವೆ!

Pinterest LinkedIn Tumblr


ಟೊಕಿಯೋ: ಜಪಾನ್ ರಾಜಮನೆತನದ ರಾಜಕುಮಾರಿ 27 ವಷರ್ಷದ ಅಯೋಕೊ ತಮ್ಮ ಪ್ರಿಯಕರನನ್ನು ಮದುವೆಯಾಗಲು ರಾಯಲ್ ಟೈಟಲ್‌ನ್ನು ಬಿಟ್ಟು ಕೊಟ್ಟಿದ್ದಾರೆ. ಅಯೋಕೊ ಪ್ರಿಯಕರ ಜಪಾನ್‌ನ ಹಡುಗು ಸಂಸ್ಥೆಯಲ್ಲಿ ಸಾಮಾನ್ಯ ಉದ್ಯೋಗಿಯಾಗಿದ್ದು, ಆತನಿಗಾಗಿ ಅಯೋಕೊ ರಾಜಮನೆತನವನ್ನು ಬಿಟ್ಟು ಹೊರಬರಲು ಸಿದ್ದವಾಗಿದ್ದಾರೆ.

ಅಯೋಕೊ ಮತ್ತು ಪ್ರಿಯಕರ ಕೀ-ಮೊರಿಯಾ ಪರಸ್ಪರ ಪ್ರೀತಿಸಿದ್ದು, ಇವರ ಮದುವೆಗೆ ರಾಜಮನೆತನದ ಒಪ್ಪಿಗೆಯೂ ಇದೆ. ಆದರೆ ಕೀ-ಮೊರಿಯೋ ರಾಜಮನೆತನಕ್ಕೆ ಸೇರದ ವ್ಯಕ್ತಿಯಾಗಿದ್ದರಿಂದ ಅಯೋಕೊ ಕೀ ಅವರನ್ನು ಮದುವೆಯಾಗಲು ತಮ್ಮ ರಾಯಲ್ ಶಿರ್ಷಿಕೆಯನ್ನು ತ್ಯಜಿಸಬೇಕಾಗುತ್ತದೆ.

ಜಪಾನ್ ಕಾನೂನಿನ ಪ್ರಕಾರ ರಾಜಮನೆತನಕ್ಕೆ ಸೇರಿದ ವ್ಯಕ್ತಿ ಸಾಮಾನ್ಯ ವ್ಯಕ್ತಿಯನ್ನು ಮದುವೆಯಾಗಲು ಬಯಸುವುದಾದರೆ ಆತ ಅಥವಾ ಆಕೆ ತಮ್ಮ ರಾಜವಂಶದ ಶಿರ್ಷಿಕೆಯನ್ನು ತ್ಯಜಿಸಬೇಕಾಗುತ್ತದೆ. ಕಳೆದ ವರ್ಷ ಜಪಾನ್ ರಾಜಮನೆತನದ ರಾಜಕುಮಾರಿ ಮಾಕೋ ಕೂಡ ತಮ್ಮ ರಾಯಲ್ ಟೈಟಲ್ ತ್ಯಜಿಸಿ ಸಾಮಾನ್ಯ ವ್ಯಕ್ತಿಯೊಬ್ಬರನ್ನು ಮದುವೆಯಾಗಿದ್ದರು.

Comments are closed.