ಅಂತರಾಷ್ಟ್ರೀಯ

ಮೊದಲ ನೋಟಕ್ಕೇ ಪ್ರೀತಿಸಿ ಅಲೆದಾಡುತ್ತಿರುವ 42ರ ವ್ಯಕ್ತಿ

Pinterest LinkedIn Tumblr


ಹುಡುಗಿಯನ್ನು ನೋಡಿದ ಕೂಡಲೇ ಹುಡುಗನಿಗೆ ಪ್ರೀತಿ ಹುಟ್ಟಿ ಆಕೆಗಾಗಿ ಊರೆಲ್ಲಾ ಹುಡುಕಾಡುವ ಕಥೆ ಇರುವ ಸಿನಿಮಾಗಳು ಬಂದಿವೆ. ನಿಜಜೀವನದಲ್ಲೂ ಇಂಥ ಘಟನೆಗಳು ನಡೆಯುತ್ತವೆ. ಆದರೆ, ನಾಟಿಂಗ್‌ಹ್ಯಾಂನಲ್ಲಿ 42ರ ವ್ಯಕ್ತಿ ಯೊಬ್ಬರು ಇಂಥ ಅನುಭವಕ್ಕೆ ಸಿಕ್ಕಿ, ದೇವದಾಸ್‌ ಆಗಿ ಬಿಟ್ಟಿದ್ದಾರೆ. ಗ್ರೇಯ್‌ ಗೆಸ್ಟ್‌ ಎಂಬ ಇವರು ತಮ್ಮನ್ನು ಪೋರ್ಚು ಗಲ್‌ನ ಬಾರ್‌ ಒಂದರಲ್ಲಿ ಮೊದಲ ನೋಟದಲ್ಲೇ ಮನಸೂರೆ ಮಾಡಿದ ಮಹಿಳೆಗಾಗಿ ಹುಚ್ಚನಂತೆ ಹುಡುಕಾಡುತ್ತಿದ್ದಾರಂತೆ. ಬಾರ್‌ನಲ್ಲಿ ಗ್ರೇಯ್‌ ತನ್ನ ಸ್ನೇಹಿತರ ಜೊತೆ ಮದ್ಯ ಸೇವಿಸುತ್ತಾ ಕುಳಿತಿದ್ದಾಗ, ಅಲ್ಲಿಗೆ ಮೇರಿ ಎಂಬ ಸುಂದರಿ ಬರುತ್ತಾರೆ.

ನೋಡುತ್ತಲೇ ಗ್ರೇಯ್‌ಗೆ ಬ್ರಿಟನ್‌ ಖ್ಯಾತ ಟೀವಿ ತಾರೆ ವಿಕಿ ಪ್ಯಾಟಿಸನ್‌ ಕಣ್ಣೆದುರು ಬಂದಂತೆ ಭಾಸವಾಗುತ್ತದೆ. ವೇಯರ್‌ ಅನ್ನು ಕರೆದು, ಆಕೆಗಾಗಿ ನಾನು ಡ್ರಿಂಕ್ಸ್‌ ಕೊಡಿಸುತ್ತೇನೆ ಎನ್ನುತ್ತಾರೆ ಗ್ರೇಯ್‌. ಅದಕ್ಕೆ ಮೇರಿಯೂ ಒಪ್ಪುತ್ತಾರೆ. ಮದ್ಯ ಸೇವಿಸಿದ ಬಳಿಕ ಅವರು ಗ್ರೇಯ್‌ ಬಳಿ ಬಂದು ಕೆನ್ನೆ ಸವರಿ ಧನ್ಯವಾದ ಹೇಳಿ ಹೊರಟು ಹೋಗುತ್ತಾರೆ. ಆ ಕ್ಷಣದಲ್ಲಿ ರೋಮಾಂಚನಗೊಳ್ಳುವ ಗ್ರೇಯ್‌, ಆಕೆಯ ಫೋನ್‌
ನಂಬರ್‌ ಪಡೆಯುವುದನ್ನೇ ಮರೆಯುತ್ತಾರೆ. ಹೀಗಾಗಿ, ಅವರು ಈಗ ಮೇರಿಗಾಗಿ ಹುಡುಕಾಡದ ಜಾಗವೇ ಇಲ್ವಂತೆ.

Comments are closed.