ಅಂತರಾಷ್ಟ್ರೀಯ

ಇಮೇಲ್‌ ಮೂಲಕ ನೀರವ್‌ ಮೋದಿಗೆ ಬಂಧನ ವಾರಂಟ್‌!

Pinterest LinkedIn Tumblr


ಲಂಡನ್‌/ಹೊಸದಿಲ್ಲಿ: ಬ್ಯಾಂಕ್‌ಗಳಿಗೆ ವಂಚಿಸಿ ಪರಾರಿಯಾಗಿರುವ ಉದ್ಯಮಿ ನೀರವ್‌ ಮೋದಿಗೆ ಕಂದಾಯ ಗುಪ್ತಚರ ಸಂಸ್ಥೆ DRI ರವಿವಾರ ಇಮೇಲ್‌ ಮೂಲಕ ಬಂಧನ ವಾರಂಟ್‌ ಜಾರಿ ಮಾಡಿದೆ. ಕಸ್ಟಮ್ಸ್‌ ತೆರಿಗೆ ತಪ್ಪಿಸಿಕೊಂಡ ಆರೋಪಕ್ಕೆ ಸಂಬಂಧಿಸಿ ಈ ಕ್ರಮ ಕೈಗೊಳ್ಳಲಾಗಿದೆ. ಪ್ರಕರಣ ಸಂಬಂಧ ಕೋರ್ಟ್‌ಗೆ ಹಾಜರಾಗದ ಹಿನ್ನೆಲೆಯಲ್ಲಿ ಸೂರತ್‌ ನಲ್ಲಿನ ಕೋರ್ಟ್‌ ಈ ವಾರಂಟ್‌ ಜಾರಿ ಮಾಡಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಆಮದು ಶುಲ್ಕ ತಪ್ಪಿಸಿಕೊಳ್ಳುವ ಸಲುವಾಗಿ, ನೀರವ್‌ ಕಳಪೆ ಗುಣಮಟ್ಟದ ವಜ್ರ ಹಾಗೂ ಹರಳುಗಳನ್ನು ರಫ್ತು ಮಾಡಿದ್ದಲ್ಲದೆ, ಅವುಗಳನ್ನು ಆಮದು ಮಾಡಿ, ಸಂಸ್ಕರಿಸಲಾಗಿತ್ತು ಎಂದು ಹೇಳಿ ವಂಚಿಸಿದ್ದರು. 890 ಕೋಟಿ ರೂ. ಮೌಲ್ಯದ ವಜ್ರಗ ಳಿಗೆ ಅವರು 52 ಕೋಟಿ ರೂ. ಕಸ್ಟಮ್ಸ್‌ ಶುಲ್ಕ ಪಾವತಿ ಸಬೇಕಾಗಿತ್ತು ಎಂದೂ ಅಧಿಕಾರಿಗಳು ಹೇಳಿದ್ದಾರೆ.

ಲಂಡನ್‌ನ ಫ್ಲ್ಯಾಟ್‌ನಲ್ಲಿ ನೀರವ್‌: ವಂಚಿಸಿ ಓಡಿಹೋಗಿರುವ ನೀರವ್‌ ಮೋದಿ ಲಂಡನ್‌ ನ ಮೇಫೇರ್‌ ಪ್ರದೇಶದಲ್ಲಿರುವ ತನ್ನ ಜುವೆಲ್ಲರಿ ಮಳಿಗೆಯ ಮೇಲಿನ ಮಹಡಿಯ ಫ್ಲ್ಯಾಟ್‌ನಲ್ಲೇ ವಾಸಿಸುತ್ತಿದ್ದರು ಎಂದು ಮಾಧ್ಯಮಗಳು ವರದಿ ಮಾಡಿವೆ. ಜತೆಗೆ, ಫೆಬ್ರವರಿಯಲ್ಲಿ ಅವರ ಪಾಸ್‌ಪೋರ್ಟ್‌ ರದ್ದಾದ ಬಳಿಕವೂ ಕನಿಷ್ಠ 4 ಬಾರಿ ಅವರು ಬ್ರಿಟನ್‌ನ ಒಳಗೂ ಹೊರಗೂ ಸಂಚರಿಸಿದ್ದಾರೆ ಎನ್ನಲಾಗಿದೆ.

Comments are closed.