ಅಂತರಾಷ್ಟ್ರೀಯ

ನೀವು ಒಂದು ವಾರದಲ್ಲಿ ದಿನದ ಎಷ್ಟು ಸಮಯವನ್ನು ಫೇಸ್​ಬುಕ್​ನೊಂದಿಗೆ ಕಳೆದಿದ್ದೀರಿ ಎಂದು ತಿಳಿಯಬೇಕೇ?

Pinterest LinkedIn Tumblr


ಸಾಮಾಜಿಕ ಜಾಲತಾಣ ಪ್ರಿಯರ ಫೇವರಿಟ್​ ಆಗಿರುವ ಫೇಸ್ಬುಕ್​ನಲ್ಲಿ ದಿನಕ್ಕೊಂದು ಅಪ್​ಡೇಟ್​ ಇದ್ದೇ ಇರುತ್ತದೆ. ಇದೀಗ ‘ಫೇಸ್​ಬುಕ್​ನಲ್ಲಿ ನಿಮ್ಮ ಸಮಯ’ ಎಂಬ ಫೀಚರ್​ ಅನ್ನು ಪರಿಚಯಿಸಲಿದ್ದು, ನೀವು ಒಂದು ವಾರದಲ್ಲಿ ದಿನದ ಎಷ್ಟು ಸಮಯವನ್ನು ಫೇಸ್​ಬುಕ್​ನೊಂದಿಗೆ ಕಳೆದಿದ್ದೀರಿ ಎಂಬ ಮಾಹಿತಿಯನ್ನು ಸರಾಸರಿ ಅಂಕಿ-ಅಂಶದೊಂದಿಗೆ ಇದು ನೀಡುತ್ತದೆ.

ಈ ಹೊಸ ಫೀಚರ್​ನಲ್ಲಿ ಫೇಸ್​ಬುಕ್​ ಬಳಕೆದಾರರು ತಮಗೆ ಬೇಕಾದಷ್ಟು ಕಾಲಾವಧಿಯನ್ನು ನಿಗದಿಮಾಡಿಕೊಳ್ಳಬಹುದು ಎಂದು ಟೆಕ್​ ಕ್ರಂಚ್​ ವರದಿಯಲ್ಲಿ ತಿಳಿಸಿದೆ.

ನಾವು ಪ್ರತಿಬಾರಿಯೂ ನಾವು ಜನರಿಗೆ ಅನುಕೂಲವಾಗುವ ಹಾಗೂ ಫೇಸ್​ಬುಕ್​ನೊಂದಿಗೆ ಕಳೆದ ಸಮಯವನ್ನು ನೆನಪುಳಿಯುವಂತೆ ಮಾಡುವ ಬಗ್ಗೆಯೇ ಯೋಚಿಸುತ್ತೇವೆ. ಆ ನಿಟ್ಟಿನಲ್ಲಿ ಈ ಪ್ರಯತ್ನ ಮಾಡಿದ್ದೇವೆ ಎಂದು ಫೇಸ್​ಬುಕ್​ನ ವಕ್ತಾರರು ತಿಳಿಸಿದ್ದಾರೆ.

ಫೇಸ್​ಬುಕ್ ಬಳಕೆದಾರರ ಸ್ವಯಂ ನಿಯಂತ್ರಣಕ್ಕೆ ಈ ಫೀಚರ್​ ಬಹಳ ಮುಖ್ಯವಾಗಿದೆ. ಇದರಿಂದಾಗಿ ನೀವು ಫೇಸ್​ಬುಕ್​ಗೆ ಎಷ್ಟು ಅಡಿಕ್ಟ್​ ಅಗಿದ್ದೀರಿ ಎಂಬುದರ ವಿವರ ನಿಮ್ಮ ಮೊಬೈಲ್​ನಲ್ಲೇ ಸಿಗಲಿದೆ. ಸದ್ಯಕ್ಕೆ ಈ ಫೀಚರ್​ ಅನ್ನು ಅಭಿವೃದ್ಧಿಪಡಿಸುವ ಕೆಲಸ ನಡೆಯುತ್ತಿದ್ದು, ಬಿಡುಗಡೆಯಾಗುವ ದಿನಾಂಕ ಇನ್ನೂ ಖಚಿತವಾಗಿಲ್ಲ.

Comments are closed.