ಅಂತರಾಷ್ಟ್ರೀಯ

ಬರ್ಗರ್‌ ಪೊಟ್ಟಣದಲ್ಲಿ ಜೀವಂತ ಇಲಿ ಇರುವ ವಿಡಿಯೋ!

Pinterest LinkedIn Tumblr


ವಿದೇಶಿ ಜಂಕ್‌ಫ‌ುಡ್‌ ಮಳಿಗೆಗಳಲ್ಲಿ ಇಲಿ ಪತ್ತೆಯಾಗುವ ಸುದ್ದಿ ಮಾಮೂಲಿ. ಅಮೆರಿಕದ ಓಕ್ಲಾಹಾಮಾದ “ವೆಂಡಿಸ್‌’ ಫಾಸ್ಟ್‌ ಫ‌ುಡ್‌ ಮಳಿಗೆಯಲ್ಲಿ ಇಂಥದ್ದೇ ಪ್ರಕರಣ ನಡೆದಿದೆ.

ಬರ್ಗರ್‌ ಪೊಟ್ಟಣದಲ್ಲಿ ಜೀವಂತ ಇಲಿ ಇರುವ ವಿಡಿಯೋ ಈಗ ವೈರಲ್‌ ಆಗಿದೆ. ಇಲಿ ಕಾರಣಕ್ಕಿಂತಲೂ ಇದು ಹೆಚ್ಚು ಸುದ್ದಿಯಾಗಿರುವುದು ಈ ಫೋಟೊಗಳನ್ನು ಹರಿಬಿಟ್ಟಿರುವುದು ಅದೇ ಮಳಿಗೆಯಲ್ಲಿ ಕೆಲಸ ಮಾಡುವ ಸ್ಕೈ ಫ್ರೇಮ್‌ ಎಂಬ ಮಹಿಳೆ ಎಂಬ ಸುದ್ದಿ. ಈ ಕುರಿತು ಸ್ಕೈ ಹೇಳುವುದೇನೆಂದರೆ, ಇಲಿ ಮುಟ್ಟಿದ ಬನ್‌ ಅನ್ನು ಜನರಿಗೆ ನೀಡಲು ನನಗೆ ಮನಸ್ಸಾಗುವುದಿಲ್ಲ. ನನ್ನ ಸಂಬಂಧಿಕರೂ ಇಲ್ಲಿಗೆ ಬರುತ್ತಾರೆ. ಯಾರಿಗೂ ಮೋಸ ಮಾಡಲು ನನಗೆ ಮನಸ್ಸಿಲ್ಲ ಎಂದಿದ್ದಾರೆ. ಜೊತೆಗೆ ಆಹಾರ ತಯಾರಿಸುವ ಮೇಜಿನ ಮೇಲೆ ಸಿಗರೆಟ್‌ ಇರುವ ಫೋಟೊವನ್ನೂ ಅವರು ಅಪ್‌ಲೋಡ್‌ ಮಾಡಿದ್ದಾರೆ.

Comments are closed.