ರಾಷ್ಟ್ರೀಯ

ವಿಡಿಯೋ ಮಾಡುತ್ತಾ ಮೂವರು ಬಾಲಕರಿಂದ 14ರ ಬಾಲಕಿ ಮೇಲೆ ಅತ್ಯಾಚಾರ!

Pinterest LinkedIn Tumblr


ಮುಜಫ‌ರನಗರ : ಮೂವರು ಕಾಮಾಂಧ ತರುಣರು ಇಲ್ಲಿನ ಗ್ರಾಮವೊಂದರಲ್ಲಿ 14ರ ಹರೆಯದ ಬಾಲಕಿಯ ಮೇಲೆ ಅತ್ಯಾಚಾರ ನಡೆಸಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

ತನ್ನ ಮನೆ ಸಮೀಪದ ಹ್ಯಾಂಡ್‌ ಪಂಪ್‌ನಿಂದ ನೀರು ತರಲೆಂದು ಬಾಲಕಿಯು ಹೋಗಿದ್ದಾಗ ಆಕೆಗೆ ಬಂದೂಕು ತೋರಿಸಿ ಪ್ರಾಣ ಬೆದರಿಕೆ ಒಡ್ಡಿ ಎಳೆದೊಯ್ದ ಮೂವರು ಕಾಮಾಂಧ ತರುಣರು ಆಕೆಯ ಮೇಲೆ ಸರದಿಯಲ್ಲಿ ಅತ್ಯಾಚಾರ ನಡೆಸಿದರು; ಅವರಲ್ಲಿ ಒಬ್ಟಾತ ಅತ್ಯಾಚಾರದ ವಿಡಿಯೋ ಮಾಡಿದ್ದಾನೆ ಎಂದು ಸರ್ಕಲ್‌ ಪೊಲೀಸ್‌ ಆಫೀಸರ್‌ ರಾಜೀವ್‌ ಕುಮಾರ್‌ ಸಿಂಗ್‌ ತಿಳಿಸಿದ್ದಾರೆ.

ಬಾಲಕಿಯ ತಂದೆ ಕೊಟ್ಟಿರುವ ದೂರಿನ ಪ್ರಕಾರ ಪೊಲೀಸರು ಕೇಸು ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. ಆರೋಪಿ ತರುಣರು ತಲೆಮರೆಸಿಕೊಂಡಿದ್ದು ಅವರಿಗಾಗಿ ಶೋಧ ಕಾರ್ಯ ನಡೆಯುತ್ತಿದೆ.

Comments are closed.