
ಪ್ಯಾರಿಸ್: ನಾಲ್ಕನೇ ಫ್ಲೋರ್ನಲ್ಲಿ ನೇತಾಡುತ್ತಿರುವ ನಾಲ್ಕು ವರ್ಷ ಮಗು, ಆ ಮಗುವನ್ನು ರಕ್ಷಣೆ ಮಾಡುವುದು ಹೇಗೆ ಎಂದು ದಿಕ್ಕು ತೋಚದೆ ನಿಂತಿದ್ದ ಜನರ ಮಧ್ಯದಿಂದ ಓಡಿಬಂದ ಯುವಕನೊಬ್ಬ ಕ್ಷಣಾರ್ಧದಲ್ಲಿ ಸ್ಪೈಡರ್ ಮ್ಯಾನ್ನಂತೆ ಹತ್ತಿ ಮಗುವನ್ನು ರಕ್ಷಿಸಿರುವ ವೀಡಿಯೋ ಇದೀಗ ವೈರಲ್ ಆಗಿದೆ.
ಇದುವರೆಗೆ ಚಿತ್ರಗಳಲ್ಲಿ ರಕ್ಷಣೆಗೆ ಬರುತ್ತಿದ್ದ ಸ್ಪೈಡರ್ ಮ್ಯಾನ್ ನೋಡಿ ಖುಷಿ ಪಡುತ್ತಿದ್ದವರು, ನಿಜ ಜೀವನದ ಈ ಸ್ಪೈಡರ್ ಮ್ಯಾನ್ನ ಸಾಹಸಕ್ಕೆ ಬೆರಗಾಗಿ ಪುಳುಕಿತರಾಗಿದ್ದಾರೆ.
ಪ್ಯಾರಿಸ್ನಲ್ಲಿ ಶನಿವಾರ 8 ಗಂಟೆಗೆ ಈ ಘಟನೆ ನಡೆದಿದೆ. ಆಯತಪ್ಪಿ ನಾಲ್ಕನೇ ಫ್ಲೋರ್ನಿಂದ ಕೆಳಕ್ಕೆ ಬೀಳಲಿದ್ದ ಮಗು ಕೈಗೆ ಸಿಕ್ಕಿದ ರಾಡ್ ಅನ್ನು ಬಿಗಿಯಾಗಿ ಹಿಡಿದು ನೇತಾಡಲಾರಂಭಿಸಿತು. ಮಗುವಿನ ಸ್ಥಿತಿ ನೋಡಿದವರಿಗೆ ಜಂಘಾಬಲವೇ ಹುದುಗಿ ಹೋಗಿತ್ತು, ಅಗ್ನಿ ಶಾಮಕದವರು ಬಂದು ಮಗುವನ್ನು ರಕ್ಷಣೆ ಮಾಡಲು ಸ್ವಲ್ಪ ಸಮಯಬೇಕು, ಅಷ್ಟು ಹೊತ್ತು ಮಗು ಆ ರಾಡ್ ಹಿಡ್ಕೊಂಡು ಇರಲು ಸಾಧ್ಯವಿಲ್ಲ, ಮುಂದೇನು ಎಂದು ತಿಳಿಯದೆ ಕಿರುಚಲಾರಂಭಿಸಿದರೆ. ಜನರು ನೋಡು-ನೋಡುತ್ತಿದ್ದಂತೆ ಕ್ಷಣಾರ್ಧದಲ್ಲಿ ಮಮೌದು ಗಸ್ಸಾಮ ಎಂಬ 22 ಯುವಕ ಚಕ-ಚಕನೆ ಕಟ್ಟವನ್ನು ಏರಲಾರಂಭಿಸುತ್ತಾನೆ. ಬರಿಗೈಯಲ್ಲಿ ಕಟ್ಟಡ ಏರಿದ ಹುಡುಗ ತನ್ನ ಸುರಕ್ಷತೆಗೆ ಗಮನ ಕೊಡದೆ ಮಗುವನ್ನು ಉಳಿಸಲು ತನ್ನ ಪ್ರಾಣ ಪಣವಿಟ್ಟು ಏರಿ ಮಗುವನ್ನು ರಕ್ಷಣೆ ಮಾಡಿದ್ದಾನೆ.
ಇದೀಗ ರಿಯಲ್ ಲೈಫ್ನ ಸ್ಪೈಡರ್ ಹೀರೋನ ಎಲ್ಲರೂ ಕೊಂಡಾಡುತ್ತಿದ್ದಾರೆ.
Comments are closed.