ಕಾಬೂಲ್: ಪವಿತ್ರ ರಮ್ಜಾನ್ ತಿಂಗಳ ಪ್ರಯುಕ್ತ ಅಫಘಾನಿಸ್ತಾನದ ಪೂರ್ವ ನಂಗರ್‌ಹಾರ್‌ನ ಮೈದಾನದಲ್ಲಿ ಶುಕ್ರವಾರ ರಾತ್ರಿ ಆಯೋಜಿಸಿದ್ದ ಕ್ರಿಕೆಟ್ ಪಂದ್ಯಾವಳಿ ವೇಳೆ ಸರಣಿ ಬಾಂಬ್ ಸ್ಪೋಟಿಸಿದ್ದು, ಘಟನೆಯಲ್ಲಿ ಕನಿಷ್ಠ 8 ಜನ ಮೃತಪಟ್ಟಿದ್ದಾರೆಂದು ಅಫ್ಘಾನ್ ಅಧಿಕಾರಿಗಳು ತಿಳಿಸಿದ್ದಾರೆ.
ಸರಣಿ ಬಾಂಬ್ ಸ್ಪೋಟದಲ್ಲಿ ಸುಮಾರು 45ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆಂದು ನಂಗರ್‌ಹಾರ್ ಪ್ರಾಂತೀಯ ರಾಜ್ಯಪಾಲರ ವಕ್ತಾರ ಅತ್ತಹುಲ್ಲಾ ಖೋಗ್ಯಾನಿ ಮಾಹಿತಿ ನೀಡಿದ್ದಾರೆ.
ಇಲ್ಲಿಯವರೆಗೂ ಯಾವುದೇ ಉಗ್ರ ಸಂಘಟನೆ ಬಾಂಬ್ ಸ್ಪೋಟದ ಹೊಣೆಯನ್ನು ಹೊತ್ತುಕೊಂಡಿಲ್ಲ. ಆದರೆ, ಪೂರ್ವ ಅಫ್ಘಾನಿಸ್ಥಾನದ ಈ ಭಾಗದಲ್ಲಿ ತಾಲಿಬಾನ್ ಹಾಗೂ ಐಸಿಸ್ ಭಯೋತ್ವಾದಕರು ಸಕ್ರಿಯರಾಗಿದ್ದು, ಅವರೇ ಈ ಅಮಾನವೀಯ ಕೃತ್ಯ ಎಸಗಿದ್ದಾರೆ ಎಂದು ಅಂದಾಜಿಸಲಾಗಿದೆ. ಘಟನೆ ಸಂಬಂಧ ತನಿಖೆ ನಡೆಯುತ್ತಿದೆ ಎಂದು ಖೋಗ್ಯಾನಿ ತಿಳಿಸಿದ್ದಾರೆ.
Comments are closed.