ಅಂತರಾಷ್ಟ್ರೀಯ

ಬೀಜಿಂಗ್ ನಿಂದ ಹೊರಗೆ ಅಧ್ಯಕ್ಷರಿಂದ ಸ್ವಾಗತ ಪಡೆದ ಮೊದಲ ಭಾರತೀಯ ಪ್ರಧಾನಿ ನಾನು: ಕ್ಸೀ ಜಿನ್ಪಿಂಗ್ ಗೆ ಮೋದಿ

Pinterest LinkedIn Tumblr

ವುಹಾನ್: ಡೊಕ್ಲಾಮ್ ವಿವಾದದ ನಂತರ ಭಾರತ- ಚೀನಾ ದ್ವಿಪಕ್ಷೀಯ ಸಂಬಂಧದಲ್ಲಿ ಉಂಟಾಗಿರುವ ವಿಶ್ವಾಸಾರ್ಹತೆಯ ಬಿರುಕನ್ನು ಪುನರ್ನಿರ್ಮಿಸುವುದಕ್ಕೆ ಸಜ್ಜುಗೊಂಡಿರುವ ವೇದಿಕೆ ಎಂದೇ ವಿಶ್ಲೇಷಿಸಲಾಗುತ್ತಿರುವ ವುಹಾನ್ ಶೃಂಗಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಹಾಗೂ ಕ್ಸೀ ಜಿನ್ಪಿಂಗ್ ದ್ವಿಪಕ್ಷೀಯ ಮಾತುಕತೆ ನಡೆಸಿದ್ದಾರೆ.

ಚೀನಾದ ಆದರದ ಸ್ವಾಗತಕ್ಕೆ ಧನ್ಯವಾದ ತಿಳಿಸಿರುವ ಪ್ರಧಾನಿ ನರೇಂದ್ರ ಮೋದಿ, ಬೀಜಿಂಗ್ ನಿಂದ ಹೊರಬಂದ ಚೀನಾ ಅಧ್ಯಕ್ಷರಿಂದ ಎರಡು ಬಾರಿ ಸ್ವಾಗತ ಪಡೆದಿರುವ ಭಾರತದ ಪ್ರಧಾನಿ ನಾನು, ಈ ಬಗ್ಗೆ ಭಾರತದ ಜನತೆ ಹೆಮ್ಮೆ ಪಡುತ್ತಾರೆ ಎಂದು ಮೋದಿ ಹೇಳಿದ್ದಾರೆ. ಸರ್ಕಾರಿ ಗೌರವಗಳೊಂದಿಗೆ ಸ್ವಾಗತ ಪಡೆದ ನಂತರ ನಡೆದ ಪತ್ರಿಕಾಗೋಷ್ಠಿಯಲ್ಲಿ ಪ್ರಧಾನಿ ನರೇಂದ್ರ ಮಾತನಾಡಿದ್ದು, ಚೀನಾ ಅಧ್ಯಕ್ಷರನ್ನು ಭಾರತಕ್ಕೆ ಆಹ್ವಾನಿಸಿದ್ದಾರೆ. ವಿಶ್ವದ ಶೇ.40 ರಷ್ಟು ಜನಸಂಖ್ಯೆಗಾಗಿ ಕೆಲಸ ಮಾಡುವ ಹೊಣೆಗಾರಿಕೆ ಭಾರತ-ಚೀನಾ ನಡುವೆ ಇದ್ದು, ಉಭಯ ದೇಶಗಳೂ ಒಟ್ಟಿಗೆ ಕಾರ್ಯನಿರ್ವಹಿಸುವುದು ಅತಿ ಮುಖ್ಯವಾಗಿದೆ ಎಂದು ಮೋದಿ ಹೇಳಿದ್ದಾರೆ. ಚೀನಾ-ಭಾರತ ಒಟ್ಟಾಗಿ ಕಾರ್ಯನಿರ್ವಹಿಸುವುದರ ಬಗ್ಗೆ ಮೋದಿ ಹೇಳಿಕೆಯನ್ನು ಬೆಂಬಲಿಸಿರುವ ಕ್ಸೀ ಜಿನ್ಪಿಂಗ್, ವಿಶ್ವದ ಶಾಂತಿ ಹಾಗೂ ಅಭಿವೃದ್ಧಿಗೆ ಭಾರತ ಚೀನಾ ದೊಡ್ಡ ಕೊಡುಗೆ ನೀಡಬೇಕಿದೆ ಎಂದು ಹೇಳಿದ್ದಾರೆ.

ಚೀನಾ- ಭಾರತ ವಿಶ್ವದ ಶಾಂತಿ ಹಾಗೂ ಅಭಿವೃದ್ಧಿಗೆ ಜೊತೆಯಾಗಿ ಕಾರ್ಯ ನಿರ್ವಹಿಸುವುದಕ್ಕೆ ಶೃಂಗಸಭೆ ಉತ್ತಮ ಸಕಾರಾತ್ಮಕ ವಾತಾವರಣ ನಿರ್ಮಾಣವಾಗಿದೆ. ಅಷ್ಟೇ ಅಲ್ಲದೇ ಈ ವಾತಾವರಣ ನಿರ್ಮಾಣವಾಗಲು ಕ್ಸೀ ಜಿನ್ಪಿಂಗ್ ಅವರ ಕೊಡುಗೆಯೂ ಇದ್ದು, ಭಾರತದ ಬಗ್ಗೆ ನಿಮಗೆ ಇರುವ ವಿಶ್ವಾಸವನ್ನು ತೋರುತ್ತದೆ. ಚೀನಾದ ರಾಜಧಾನಿ ಬೀಜಿಂಗ್ ನಿಂದ ಹೊರಬಂದು ನೀವು ಎರಡು ಬಾರಿ ನನ್ನನ್ನು ಸ್ವಾಗತಿಸಿದ್ದೀರಿ, ಈ ಬಗ್ಗೆ ಭಾರತದ ಜನತೆ ಹೆಮ್ಮೆ ಪಡುತ್ತಾರೆ ಎಂದು ಕ್ಸೀ ಜಿನ್ಪಿಂಗ್ ಗೆ ಪ್ರಧಾನಿ ಮೋದಿ ಹೇಳಿದ್ದಾರೆ.

Comments are closed.