ಅಂತರಾಷ್ಟ್ರೀಯ

ಉ.ಕೊರಿಯದಿಂದ ಅಣು ಪರೀಕ್ಷೆ ಅಮಾನತು: ಟ್ರಂಪ್‌ ಸ್ವಾಗತ

Pinterest LinkedIn Tumblr


ಹೊಸದಿಲ್ಲಿ : ಉತ್ತರ ಕೊರಿಯ ತನ್ನ ಅಣು ಪರೀಕ್ಷಾ ತಾಣಗಳನ್ನು ಮುಚ್ಚಲಿದೆ. ದೂರ ವ್ಯಾಪ್ತಿಯ ಕ್ಷಿಪಣಿ ಪರೀಕ್ಷೆಗಳನ್ನು ಮತ್ತು ಅಣು ಪರೀಕ್ಷೆಗಳನ್ನು ಅಮಾನತು ಮಾಡಲಿದೆ ಎಂದು ಕಿಮ್‌ ಜಾಂಗ್‌ ಉನ್‌ ಘೋಷಿಸಿದ್ದಾರೆ.

ಇದನ್ನು ಅನುಸರಿಸಿ ಟ್ವೀಟ್‌ ಮಾಡಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರು “ಇದೊಂದು ಒಳ್ಳೆಯ ಸುದ್ದಿ, ಒಳ್ಳೆಯ ಬೆಳವಣಿಗೆ – ಉತ್ತರ ಕೊರಿಯಕ್ಕೂ, ಇಡಿಯ ಜಗತ್ತಿಗೂ. ನಮ್ಮೊಳಗಿನ ಶೃಂಗವನ್ನು ನಾನೀಗ ಎದುರು ನೋಡುತ್ತಿದ್ದೇನೆ’ ಎಂದು ಹೇಳಿದ್ದಾರೆ. ಆದರೆ ಉತ್ತರ ಕೊರಿಯದ ಈ ನಡೆಯಿಂದ ತೃಪ್ತವಾಗದ ಜಪಾನ್‌ ನಿರಾಶೆ ವ್ಯಕ್ತಪಡಿಸಿದೆ.

ಇದೇ ವೇಳೆ ದಕ್ಷಿಣ ಕೊರಿಯ ಯೋನಾಪ್‌ ಸುದ್ದಿ ಸಂಸ್ಥೆ, “ಅಮೆರಿಕ ಮತ್ತು ದಕ್ಷಿಣ ಕೊರಿಯ ಜತೆಗೆ ಚರ್ಚೆ ನಡೆಸುವ ಮುನ್ನ ಉತ್ತರ ಕೊರಿಯ ತನ್ನ ಪರಮಾಣು ಪರೀಕ್ಷಾ ತಾಣಗಳನ್ನು ಎಪ್ರಿಲ್‌ 21ರಿಂದಲೇ ಮುಚ್ಚುವುದಾಗಿ ಹಾರೈಸುತ್ತೇವೆ’ ಎಂದು ವರದಿಮಾಡಿದೆ.

ಕಿಮ್‌ ಜಾಂಗ್‌ ಉನ್‌ ಅವರು ದಕ್ಷಿಣ ಕೊರಿಯ ಅಧ್ಯಕ್ಷ ಮೂನ್‌ ಜೇ ಅವರೊಂದಿಗೆ ಮುಂದಿನ ಶುಕ್ರವಾರ ಶೃಂಗ ಸಭೆ ನಡೆಸಲಿದ್ದಾರೆ. ಅಂತೆಯೇ ಈ ಮೂವರ ನಡುವಿನ ಶೃಂಗ ಸಭೆಯು ಮೇ ಕೊನೆಯಲ್ಲಿ ಅಥವಾ ಜೂನ್‌ ಆದಿಯಲ್ಲಿ ನಡೆಯುವ ಸಾಧ್ಯತೆ ಇದೆ.

-ಉದಯವಾಣಿ

Comments are closed.