ರಾಷ್ಟ್ರೀಯ

ದೂರು ದಾಖಲಿಸಲು ಪಿಜ್ಜಾ, ಚಿಲ್ಲಿ ಚಿಕನ್ ಕೇಳಿದ ಮಹಿಳಾ ಪೊಲೀಸ್ ಅಧಿಕಾರಿ ಸಸ್ಪೆಂಡ್

Pinterest LinkedIn Tumblr


ಲಖನೌ: ಕೆಲವು ಭ್ರಷ್ಟ ಅಧಿಕಾರಿಗಳು ಲಂಚದ ರೂಪದಲ್ಲಿ ಹೆಣ್ಣು ಹೊನ್ನು ಮಣ್ಣು ಪಡೆದು ಅಮಾನತಾಗಿರುವ ಸಂಗತಿ ಸರ್ವೆ ಸಾಮಾನ್ಯ. ಆದರೆ, ಇಲ್ಲೊಬ್ಬ ಮಹಿಳಾ ಪೊಲೀಸ್ ಅಧಿಕಾರಿ ಲಂಚದ ರೂಪದಲ್ಲಿ ಪಿಜ್ಜಾ ಹಾಗೂ ಚಿಲ್ಲಿ ಚಿಕನ್ ಕೇಳಿ ಸೇವೆಯಿಂದ ವಜಾಗೊಂಡಿದ್ದಾರೆ.

ಉತ್ತರ ಪ್ರದೇಶದ ಹಜರತ್‌ಗಂಜ್ ಠಾಣೆಯ ಸಬ್ ಇನ್ಸ್‌ಪೆಕ್ಟರ್ ಸುಮಿತ್ರಾ ದೇವಿ ಸೇವೆಯಿಂದ ಅಮಾನತಾದ ಮಹಿಳಾ ಪೊಲೀಸ್ ಅಧಿಕಾರಿ.

ವಂಚನೆ ಎಸಗಿದ ವ್ಯಕ್ತಿಯೊಬ್ಬನ ವಿರುದ್ಧ ದೂರು ನೀಡಲು ರೆಸ್ಟೋರೆಂಟ್ ಮಾಲೀಕ ರೋಹಿತ್ ಬೇರಿ ಎಂಬುವವರು ಪೊಲೀಸ್ ಠಾಣೆಗೆ ಆಗಮಿಸಿದ್ದರು. ಈ ವೇಳೆ ರೆಸ್ಟೋರೆಂಟ್ ಮಾಲೀಕನ ಸಮಸ್ಯೆ ಆಲಿಸಿದ ಮಹಿಳಾ ಪೊಲೀಸ್ ಅಧಿಕಾರಿ ಸುಮಿತ್ರಾ ದೇವಿ ಎಂಬುವವರು ದೂರು ದಾಖಲಿಸಿಕೊಳ್ಳಲು ಲಂಚದ ರೂಪದಲ್ಲಿ ಪಿಜ್ಜಾ ಹಾಗೂ ಚಿಲ್ಲಿ ಚಿಕನ್ ತಂದು ಕೊಡುವಂತೆ ಕೇಳಿದ್ದರು ಎಂಬ ಆರೋಪ ಕೇಳಿಬಂದಿದೆ.

ಘಟನೆ ಸಂಬಂಧ ಮಹಿಳಾ ಪೊಲೀಸ್ ಅಧಿಕಾರಿಯ ವೀಡಿಯೋ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಘಟನೆ ಸಂಬಂಧ ಮಹಿಳಾ ಪೊಲೀಸ್ ಅಧಿಕಾರಿ ಸುಮಿತ್ರಾ ದೇವಿ ಅವರನ್ನು ಸೇವೆಯಿಂದ ಅಮಾನತುಗೊಳಿಸಿ ಆದೇಶ ಹೊರಡಿಸಲಾಗಿದೆ ಎಂದು ಪೊಲೀಸ್ ವಕ್ತಾರ ಎಕೆ ಸಿಂಗ್ ತಿಳಿಸಿದ್ದಾರೆ.

Comments are closed.