ಅಂತರಾಷ್ಟ್ರೀಯ

13 ವರ್ಷದ ಬಾಲಕ ಕಾರು ಕದ್ದು ಓಡಿಸಿದ

Pinterest LinkedIn Tumblr


ನ್ಯೂಜಿಲೆಂಡ್‌ನ‌ ಪೊಲೀಸರಿಗೆ ಮಹಿಳೆಯೊಬ್ಬರಿಂದ ತಮ್ಮ ಸುಜುಕಿ ಸ್ವಿಫ್ಟ್ ಕಾರು ಕಾಣೆಯಾಗಿರುವದರ ಕುರಿತು ಬುಧವಾರ ರಾತ್ರಿ ಕರೆ ಬಂದಿತು. ನನ್ನ ಮನೆಯಿಂದಲೇ ಕಾರು ಕಳುವಾಗಿದೆ. ನನ್ನ ಸಂಬಂಧಿಗಳೇ ಅದನ್ನು ಕದ್ದಿರಬಹುದು ಎಂದು ಅವರು ಆರೋಪಿಸಿದರು. ಇದಾದ ಒಂದು ಗಂಟೆ ಬಳಿಕ ಪೊಲೀಸರು ಈ ಕಾರನ್ನು ಪತ್ತೆ ಮಾಡಿ, ಅದನ್ನು ಹಿಂಬಾಲಿಸಲು ಪ್ರಯತ್ನಿಸಿದಾಗ ಕಾರಿನ ವೇಗ ಅಚ್ಚರಿಯ ರೀತಿಯಲ್ಲಿ ಹೆಚ್ಚಾಯಿತು. ಬಳಿಕ ಹರಸಾಹಸ ಪಟ್ಟು ಹೇಗೋ ಕಾರನ್ನು ತಡೆದು ನಿಲ್ಲಿಸಿ, ಕಾರಿನ ಒಳಗೆ ನೋಡಿದಾಗ ಪೊಲೀಸರು ಮೂರ್ಚೆ ಹೋಗುವುದೊಂದೇ ಬಾಕಿ. 13 ವರ್ಷ ವಯಸ್ಸಿನ ಬಾಲಕ ಕಾರು ಚಾಲನೆ ಮಾಡುತ್ತಿದ್ದಾನೆ.

ಜೊತೆಗೆ 7 ಕುಟುಂಬಗಳಿಗೆ ಸೇರಿದ 8 ಮಕ್ಕಳೂ ಅದರೊಳಗೆ ಇದ್ದಾರೆ. ಇವರೆಲ್ಲರೂ 10ರಿಂದ 17 ವಯಸ್ಸಿನವರು. ಈ ಕುಟುಂಬಗಳಿಗೆ ತಮ್ಮ ಮಕ್ಕಳು ಕಾಣೆಯಾಗಿರುವುದೇ ತಿಳಿದಿಲ್ಲ. 13ರ ಬಾಲಕ ಕಾರು ಕದ್ದು ಜಾಲಿ ರೈಡ್‌ ಮಾಡುವ ನಿರ್ಧಾರ ಮಾಡಿದ್ದೇ ಆತಂಕ ಉಂಟುಮಾಡುವ ವಿಷಯ ಎಂದು ಪೊಲೀಸರು ಹೇಳಿದ್ದಾರೆ.

-ಉದಯವಾಣಿ

Comments are closed.