ಅಂತರಾಷ್ಟ್ರೀಯ

ಬ್ರಿಟನ್ ಪ್ರಧಾನಿ ಥೆರೇಸಾ ಮೇ ಭೇಟಿ ಮಾಡಿದ್ದ ಪ್ರಧಾನಿ ಮೋದಿ

Pinterest LinkedIn Tumblr

ಲಂಡನ್ : ಐದು ದಿನಗಳ ವಿದೇಶ ಪ್ರವಾಸದಲ್ಲಿರುವ ಪ್ರಧಾನಮಂತ್ರಿ ನರೇಂದ್ರಮೋದಿ ಇಂದು ಬೆಳಗ್ಗೆ ಲಂಡನ್ ನಲ್ಲಿ ಬ್ರಿಟನ್ ಪ್ರಧಾನಮಂತ್ರಿ ಥೆರೇಸಾ ಮೇ ಅವರನ್ನು ಭೇಟಿ ಮಾಡಿ ಗಡಿಯಲ್ಲಿ ಭಯೋತ್ಪಾದನೆ, ವೀಸಾ, ಮೊದಲಾದ ಹಲವು ವಿಷಯಗಳಿಗೆ ಸಂಬಂಧಿಸಿದಂತೆ ದ್ವಿಪಕ್ಷೀಯ ಮಾತುಕತೆ ನಡೆಸಿದರು.

2018ರ ಕಾಮನ್ ವೆಲ್ತ್ ರಾಷ್ಟ್ರಗಳ ಮುಖ್ಯಸ್ಥರ ಸಭೆಯಲ್ಲಿ ಪಾಲ್ಗೊಳ್ಳುವ ಸಲುವಾಗಿ ನಿನ್ನೆ ರಾತ್ರಿ ಲಂಡನ್ ಗೆ ಆಗಮಿಸಿದ ಪ್ರಧಾನಿ ನರೇಂದ್ರಮೋದಿ ಅವರನ್ನು ಬ್ರಿಟನ್ ನ ವಿದೇಶಾಂಗ ವ್ಯವಹಾರಗಳ ರಾಜ್ಯ ಕಾರ್ಯದರ್ಶಿ ಬೊರಿಸ್ ಜಾನ್ಸನ್ ಬರಮಾಡಿಕೊಂಡರು.

ನಂತರ 5 ಸಾವಿರ ವರ್ಷಗಳ ಇತಿಹಾಸ ವಿರುವ ವಿಜ್ಞಾನ ಮತ್ತು ಸಂಶೋಧನಾ ವಸ್ತುಪ್ರದರ್ಶನ ಕೇಂದ್ರಕ್ಕೆ ಭೇಟಿ ನೀಡಿದ್ದರು. ಮಧ್ಯಾಹ್ನ ಥೇಮ್ಸ್ ನದಿ ದಡದಲ್ಲಿ ನಿರ್ಮಿಸಲಾಗಿರುವ ವಿಶ್ವಮಾನವ ಬಸವೇಶ್ವರಿಗೆ ಬಸವ ಜಯಂತಿ ಅಂಗವಾಗಿ ನಮನ ಸಲ್ಲಿಸಿದರು.

ಸಂಶೋಧನಾ ಕೇಂದ್ರಕ್ಕೆ ಭೇಟಿ ನೀಡಿ, ಭಾರತ- ಇಂಗ್ಲೇಂಡ್ ಶೃಂಗಸಭೆಯಲ್ಲಿ ಪಾಲ್ಗೊಂಡರು. ಉಭಯ ದೇಶಗಳ ಸಹಯೋಗದಲ್ಲಿನ ಯೋಜನೆಗಳನ್ನು ವೀಕ್ಷಿಸಿದರು.

ಭಾರತೀಯ ಸಮುದಾಯದೊಂದಿಗೆ ಸಂವಾದ ನಡೆಸಲಿದ್ದು, ಥೆರೇಸಾ ಮೇ ಕಾಮನ್ ವೆಲ್ತ್ ಮುಖಂಡರಿಗೆ ಆಯೋಜಿಸಿರುವ ಔತಣಕೂಟದಲ್ಲಿ ನರೇಂದ್ರಮೋದಿ ಪಾಲ್ಗೊಳ್ಳಲಿದ್ದಾರೆ.

Comments are closed.