ಅಂತರಾಷ್ಟ್ರೀಯ

ಅಮೆರಿಕಾದಲ್ಲಿ ನಾಪತ್ತೆಯಾಗಿದ್ದ ಭಾರತೀಯ ಕುಟುಂಬದ ಮೂವರ ಮೃತದೇಹ ನದಿಯಲ್ಲಿ ಪತ್ತೆ

Pinterest LinkedIn Tumblr

ವಾಷಿಂಗ್ಟನ್: ಅಮೆರಿಕದಲ್ಲಿ ನಾಲ್ವರು ಭಾರತೀಯರ ಕುಟುಂಬವೊಂದು ಕಳೆದ ವಾರ ನಾಪತ್ತೆಯಾಗಿದ್ದು, ತೀವ್ರ ಹುಡುಕಾಟದ ಬಳಿಕ ನದಿಯೊಂದರಲ್ಲಿ ಕಾರಿನಲ್ಲಿ ಮೂವರ ಶವಗಳು ಪತ್ತೆಯಾಗಿವೆ.

ಇಯೆಲ್‌ ನದಿಯಲ್ಲಿ ಇಬ್ಬರ ಶವ ಎಸ್ ಯುವಿ ಕಾರಿನಲ್ಲಿ ಪತ್ತೆಯಾಗಿದ್ದು, ತನಿಖೆ ವೇಳೆ ಶವಗಳು ಸಂದೀಪ್‌ ತೊಟ್ಟಿಪಿಲ್ಲಿ ಮತ್ತು ಅವರ 9 ವರ್ಷದ ಪುತ್ರಿ ಸಾಚಿ ಯದ್ದು ಎಂದು ವಾಷಿಂಗ್ಟನ್‌ ಪೋಸ್ಟ್‌ನ ವರದಿ ಮಾಡಿದೆ.

ಒರೆಗಾನ್‌ದಿಂದ ಕ್ಯಾಲಿಫೋರ್ನಿಯಾಕ್ಕೆ ಎಸ್ ಯುವಿ ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಸಂದೀಪ್‌ ತೊಟ್ಟಪಿಲ್ಲಿ ಕುಟುಂಬದ ನಾಲ್ವರು ನಾಪತ್ತೆಯಾಗಿದ್ದರು. ಸಂದೀಪ್‌ ಮತ್ತು ಪುತ್ರಿಯ ಶವ ಪತ್ತೆಯಾಗುವ 2 ದಿನ ಮುನ್ನ ಪತ್ನಿ ಸೌಮ್ಯ ಶವವೂ ಪೊಲೀಸರಿಗೆ ಸಿಕ್ಕಿತ್ತು,. ಆದರೆ ಪುತ್ರ ಸಿದ್ಧಾಂತ್‌ ಎಲ್ಲಿದ್ದಾನೆ ಎಂಬುದು ತಿಳಿದು ಬಂದಿಲ್ಲ.

ಸರಿಸುಮಾರಾಗಿ ಬೆಳ್ಳಿಗ್ಗೆ 11:30 ರಲ್ಲಿ ಬೋಟಿಂಗ್ ತಂಡದ ಸದಸ್ಯರು ವರದಿ ಮಾಡಿದ ಕ್ರ್ಯಾಶ್ ಸೈಟ್ (ಡೌನ್ಸ್ಟ್ರೀಮ್) ನ ಉತ್ತರದಲ್ಲಿ ಸುಮಾರು 1/2 ಮೈಲುಗಳಷ್ಟು ನೀರು ಹೊರಸೂಸುವ ಗ್ಯಾಸೋಲಿನ್ ವಾಸನೆಯನ್ನು ಗಮನಿಸಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಶೋಧಕರು ನದಿಯಲ್ಲಿ ತನಿಖೆ ಮಾಡಲು ಪ್ರಾರಂಭಿಸಿದಾಗ ನೀರಿನ ಕೆಳಗೆ ಸುಮಾರು 4-6 ಅಡಿಗಳಷ್ಟು ಮುಳುಗಿಹೋದ ವಾಹನವನ್ನು ಪತ್ತೆಯಾಗಿದೆ”ಎಂದು ಕ್ಯಾಲಿಫೋರ್ನಿಯಾದ ಮೆಂಡೋಸಿನೊ ಕೌಂಟಿ ಶೆರಿಫ್ಸ್ ಆಫೀಸ್ ಹೇಳಿಕೆಯಲ್ಲಿ ತಿಳಿಸಿದೆ.

ಸ್ಯಾನ್ ಜೋಸ್ ಆರಕ್ಷಕ ಇಲಾಖೆಯ ಪ್ರಕಾರ, ಏಪ್ರಿಲ್ 6 ರಂದು ಸ್ಯಾನ್ ಜೋಸ್ ಪ್ರದೇಶದಲ್ಲಿ ಸ್ನೇಹಿತರನ್ನು ಭೇಟಿ ಮಾಡಲು ತೋಟಪಲ್ಲಿ ಕುಟುಂಬವು ಆಗಮಿಸಬೇಕಾಗಿತ್ತು .

ಈ ಕುರಿತಾಗಿ ಪೊಲೀಸರು ಉನ್ನತ ಮಟ್ಟದ ತನಿಖೆ ನಡೆಸುತ್ತಿದ್ದು ಸಾವಿಗೆ ಕಾರಣವೇನೆಂದು ಇನ್ನಷ್ಟೇ ತಿಳಿದು ಬರಬೇಕಿದೆ. ಸಂದೀಪ್‌ ಗುಜರಾತ್‌ನ ಸೂರತ್‌ನಲ್ಲಿ ಹುಟ್ಟಿ ಬೆಳೆದವರಾಗಿದ್ದು, ಅಮೆರಿಕದಲ್ಲಿ 15 ವರ್ಷಗಳಿಂದ ನೆಲೆಸಿದ್ದರು.

Comments are closed.