ಅಂತರಾಷ್ಟ್ರೀಯ

ಸಿರಿಯಾ: ಅಮೆರಿಕ ಮಿತ್ರಪಡೆಗಳಿಂದ 100ಕ್ಕೂ ಅಧಿಕ ಕ್ಷಿಪಣಿ ದಾಳಿ

Pinterest LinkedIn Tumblr
A photo

ಮಾಸ್ಕೋ: ಸಿರಿಯಾದ ಮೇಲೆ ಅಮೆರಿಕ ಮತ್ತು ಮಿತ್ರಪಡೆಗಳು 100ಕ್ಕೂ ಅಧಿಕ ಕ್ಷಿಪಣಿಗಳ ದಾಳಿ ನಡೆಸಿವೆ ಎಂದು ರಷ್ಯಾದ ರಕ್ಷಣಾ ಸಚಿವಾಲಯ ಮೂಲಗಳು ಹೇಳಿವೆ.

‘ಅಮೆರಿಕ, ಬ್ರಿಟನ್‌ ಮತ್ತು ಫ್ರಾನ್ಸ್‌ ಪಡೆಗಳು ಒಟ್ಟಾಗಿ ನೆಲ ಮತ್ತು ಸಾಗರದಿಂದ 100ಕ್ಕೂ ಅಧಿಕ ಕ್ರೂಯಿಸ್ ಕ್ಷಿಪಣಿಗಳನ್ನು ಸಿರಿಯಾದ ಮಿಲಿಟರಿ ಮತ್ತು ನಾಗರಿಕ ನೆಲೆಗಳ ಮೇಲೆ ಉಡಾಯಿಸಿವೆ’ ಎಂದು ರಕ್ಷಣಾ ಸಚಿವಾಲಯದ ಮೂಲಗಳನ್ನು ಉಲ್ಲೇಖಿಸಿ ರಿಯಾ ನೊವೊಸ್ತಿ ಸುದ್ದಿಸಂಸ್ಥೆ ವರದಿ ಮಾಡಿದೆ. ಈ ಕ್ಷಿಪಣಿಗಳ ಪೈಕಿ ಹೆಚ್ಚಿನವುಗಳನ್ನೂ ಸಿರಿಯಾ ವೈಮಾನಿಕ ರಕ್ಷಣಾ ವ್ಯವಸ್ಥೆ ಹೊಡೆದುರುಳಿಸಿದೆ ಎಂದೂ ಸುದ್ದಿಸಂಸ್ಥೆ ತಿಳಿಸಿದೆ.

ಸಿರಿಯಾದ ಬಶರ್-ಅಲ್‌ ಅಸಾದ್‌ ಆಡಳಿತ ನಡೆಸಿದ ರಾಸಾಯನಿಕ ದಾಳಿಗೆ ಪ್ರತೀಕಾರವಾಗಿ ಅಮೆರಿಕ ಮಿತ್ರಕೂಟ ಈ ದಾಳಿ ನಡೆಸಿದ್ದು, ನ್ಯಾಟೋ ಇದನ್ನು ಬೆಂಬಲಿಸಿದೆ.

ಜಾಗತಿಕ ಶಾಂತಿಗೆ ಸಿರಿಯಾ ಬೆದರಿಕೆ: ಜಾಗತಿಕ ಶಾಂತಿಗೆ ಸಿರಿಯಾ ಅತಿದೊಡ್ಡ ಬೆದರಿಕೆಯಾಗಿದೆ ಎಂದು ವಿಶ್ವಸಂಸ್ಥೆ ಮುಖ್ಯಸ್ಥ ಆಂಟೋನಿಯೋ ಗುಟೆರಸ್‌ ಹೇಳಿದ್ದಾರೆ.

Comments are closed.