ಮುನ್‌ಸ್ಟರ್: ಜರ್ಮನಿಯ ಮುನ್‌ಸ್ಟರ್ ನಗರದಲ್ಲಿ ಶನಿವಾರ ಕಾರೊಂದು ಜನಸಂದಣಿಯ ಮೇಲೆ ನುಗ್ಗಿ ಹಲವು ಮಂದಿ ಮೃತಪಟ್ಟಿದ್ದಾರೆ.
ಅಪಘಾತ ನಡೆದು ಕೆಲವೇ ನಿಮಿಷಗಳಲ್ಲಿ ಕಾರು ಚಾಲಕ ಮೃತಪಟ್ಟಿದ್ದು, 30ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ ಎಂದು ಜರ್ಮನ್ ಪೊಲೀಸರು ಖಚಿತಪಡಿಸಿರುವುದಾಗಿ ಸುದ್ದಿಸಂಸ್ಥೆ ಎಪಿ ವರದಿ ಮಾಡಿದೆ.
ರಸ್ತೆ ಬದಿಯಲ್ಲಿ ನಿಂತಿದ್ದ ಜನರ ಮೇಲೆ ಕಾರು ಹರಿದಿದೆ. ತಕ್ಷಣಕ್ಕೆ ಏನಾಯಿತೆಂದು ಮಾಹಿತಿ ನೀಡಲು ಪೊಲೀಸಲು ನಿರಾಕರಿಸಿದ್ದು, ಘಟನೆ ಬಗ್ಗೆ ‘ವದಂತಿ’ ಹರಡದಂತೆ ಜನತೆಗೆ ಸೂಚಿಸಿದ್ದಾರೆ.
ನಗರದ ಐತಿಹಾಸಿಕ ಕೀಪೆನ್‌ಕೆರಿ ಪ್ರದೇಶದಲ್ಲಿ ಕೀಪೆನ್‌ಕೆರಿ ಪಬ್ ಮುಂಭಾಗದ ಈ ಘಟನೆ ನಡೆದಿದೆ. ಭಾರೀ ಸಂಖ್ಯೆಯ ಪೊಲೀಸರು ಸ್ಥಳದಲ್ಲಿ ಜಮಾಯಿಸಿದ್ದು ರಕ್ಷಣಾ ಕಾರ್ಯಾಚರಣೆ ನಡೆಸಿದ್ದಾರೆ.
ಇದೊಂದು ಭಯೋತ್ಪಾದಕ ದಾಳಿಯೇ ಎಂಬುದು ತಕ್ಷಣಕ್ಕೆ ಖಚಿತವಾಗಿಲ್ಲ. ಸ್ಥಳದಲ್ಲಿನ ಸನ್ನಿವೇಶ ಗಮನಿಸಿದರೆ ಭಯೋತ್ಪಾದಕ ದಾಳಿ ಸಾಧ್ಯತೆಯನ್ನು ತಳ್ಳಿಹಾಕುವಂತಿಲ್ಲ ಎಂದು ಭದ್ರತಾ ಮೂಲಗಳು ಹೇಳಿವೆ.
2016ರ ಡಿಸೆಂಬರ್‌ನಲ್ಲಿ ಬರ್ಲಿನ್‌ನಲ್ಲಿ ನಡೆದ ಟ್ರಕ್ ಬಾಂಬ್ ದಾಳಿಯನ್ನು ಈ ಘಟನೆ ನೆನಪಿಸುವಂತಿದೆ.
Comments are closed.