ಅಂತರಾಷ್ಟ್ರೀಯ

ನ್ಯಾಯಾಲಯದಲ್ಲಿ ಹಾಡು ಕೇಳಿಸಿ ಶಿಕ್ಷೆ ಕಡಿಮೆ ಮಾಡಿಸಿಕೊಂಡ ರ‍್ಯಾಪರ್‌

Pinterest LinkedIn Tumblr

ಅಮೆರಿಕದ ಹಾಡುಗಾರ ಡಿಎಂಎಕ್ಸ್‌ ತನಗೆ ನೀಡಲಾಗುತ್ತಿದ್ದ 5 ವರ್ಷಗಳ ಜೈಲು ಶಿಕ್ಷೆಯಲ್ಲಿ ರಿಯಾಯಿತಿ ಪಡೆದು ಶಿಕ್ಷೆಯನ್ನು 1 ವರ್ಷಕ್ಕೆ ಇಳಿಸಿಕೊಂಡಿದ್ದಾನೆ. ನ್ಯಾಯಾಧೀಶರು ಶಿಕ್ಷೆ ಕಡಿಮೆ ಮಾಡುವಂತೆ ಮಾಡಲು ಆತ ತಾನು ಹಾಡಿದ್ದ ಹಾಡೊಂದನ್ನೇ ನ್ಯಾಯಾಲಯದಲ್ಲಿ ಕೇಳಿಸಿದ್ದಾನೆ. ನ್ಯಾಯಾಧೀಶರು ಹಾಡಿಗೆ ಕರಗಿ 5 ವರ್ಷಗಳ ಜೈಲು ಶಿಕ್ಷೆಯನ್ನು 1 ವರ್ಷಕ್ಕೆ ಇಳಿಸಿದ್ದಾರೆ.

ಈ ಘಟನೆ ನಡೆದಿರುವುದು ಅಮೆರಿಕದ ಮ್ಯಾನ್‌ಹಟನ್‌ ಕೋರ್ಟ್‌ನಲ್ಲಿ. ಡಿಎಂಎಕ್ಸ್‌ ಎಂದೇ ಖ್ಯಾತರಾಗಿರುವ ರ್ಯಾಪರ್‌ ಎರ್ಲ್ ಸೈಮನ್ಸ್‌ 1.7 ಮಿಲಿಯನ್‌ ಡಾಲರ್‌ ತೆರಿಗೆ ವಂಚಿಸಿದ್ದಕ್ಕಾಗಿ ಕೋರ್ಟ್‌ನಲ್ಲಿ ವಿಚಾರಣೆಗೆ ಹಾಜರಾಗಿದ್ದರು. ಡಿಎಂಎಕ್ಸ್‌ ಪರ ವಕೀಲರು ಅವರ ಜೀವನದ ಹಿನ್ನೆಲೆ, ಪಟ್ಟ ಕಷ್ಟಗಳನ್ನು ಹೇಳುವ, ಅವರೇ ಹಾಡಿರುವ ಹಾಡನ್ನು ಕೋರ್ಟ್‌ನಲ್ಲಿ ಎಲ್ಲರಿಗೂ ಕೇಳಿಸಿದರು. ಬಳಿಕ, ಆತ ತುಂಬಾ ಕಷ್ಟದಿಂದ ಬಂದು ಖ್ಯಾತಿಯ ಉತ್ತುಂಗ ಏರಿದವನು. ಹೀಗೆ ಒಮ್ಮೆಲೆ ಬಂದ ಖ್ಯಾತಿ ಮತ್ತು ಹಣವನ್ನು ಆತನಿಗೆ ಹೇಗೆ ನಿರ್ವಹಣೆ ಮಾಡಬೇಕೆಂದು ತಿಳಿಯುವುದಿಲ್ಲ ಎಂದರು. ಇದರಿಂದ ನ್ಯಾಯಾಧೀಶರ ಮನಸ್ಸು ಕರಗಿ ಶಿಕ್ಷೆ ಕಡಿಮೆ ಮಾಡಿದರು.

Comments are closed.