ಅಂತರಾಷ್ಟ್ರೀಯ

ಫೇಸ್‌ಬುಕ್‌ ಮಾಹಿತಿ ಸೋರಿಕೆ: 40 ಶತಕೋಟಿ ಡಾಲರ್‌ ನಷ್ಟ

Pinterest LinkedIn Tumblr


ವಾಷಿಂಗ್ಟನ್‌: 5 ಕೋಟಿ ಫೇಸ್‌ಬುಕ್‌ ಬಳಕೆದಾರರ ವೈಯಕ್ತಿಕ ಮಾಹಿತಿಯು ರಾಜಕೀಯ ಕಾರಣಗಳಿಗಾಗಿ ಸೋರಿಕೆಯಾಗಿದೆ ಎನ್ನುವ ಆರೋಪ ಕೇಳಿ ಬಂದಿದ್ದು, ಒಂದೇ ದಿನದಲ್ಲಿ ಫೇಸ್‌ಬುಕ್‌ನ ಷೇರುಗಳು ಶೇ.7ರಷ್ಟು ಕುಸಿದಿದ್ದು, ಮಾರುಕಟ್ಟೆ ಮೌಲ್ಯದಲ್ಲಿ 40 ಶತಕೋಟಿ ಡಾಲರ್‌ನಷ್ಟು ನಷ್ಟ ಸಂಭವಿಸಿದೆ.

ವಿಶ್ವದ ಬೃಹತ್‌ ಸಾಮಾಜಿಕ ಜಾಲತಾಣವಾದ ಫೇಸ್‌ಬುಕ್‌ನಲ್ಲಿನ ಬಳಕೆದಾರರ ಮಾಹಿತಿಯು ಸೋರಿಕೆಯಾಗಿದೆ. 2016ರಲ್ಲಿ ನಡೆದಿದ್ದ ಅಧ್ಯಕ್ಷೀಯ ಚುನಾವಣೆ ಪ್ರಚಾರದ ಸಂದರ್ಭದಲ್ಲಿ ಈ ಸೋರಿಕೆಯಾಗಿದೆ.

ಚುನಾವಣೆಯಲ್ಲಿ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ಗೆ ಅನುಕೂಲವಾಗುವಂತೆ ಫೇಸ್‌ಬುಕ್‌ ಬಳಕೆದಾರರ ವೈಯಕ್ತಿಕ ಮಾಹಿತಿಯನ್ನು ಡೇಟಾ ವಿಶ್ಲೇಷಣೆ ಸಂಸ್ಥೆ ಕೇಂಬ್ರಿಡ್ಜ್‌ ಅನಾಲಿಟಿಕಾ ಬಳಸಿಕೊಂಡಿದೆ ಎಂದು ಸುದ್ದಿ ಸಂಸ್ಥೆಗಳು ವರದಿ ಮಾಡಿದ್ದವು. ಫೇಸ್‌ಬುಕ್‌ ಡೇಟಾದ ದುರ್ಬಳಕೆಯನ್ನು ಕೇಂಬ್ರಿಡ್ಜ್‌ ಅನಾಲಿಟಿಕಾ ತಳ್ಳಿ ಹಾಕಿದೆ.

ಬ್ರಿಟನ್‌ ವರದಿ:

ಡೇಟಾ ಸೋರಿಕೆ ಪ್ರಕರಣ ಸಂಬಂಧ ಫೇಸ್‌ಬುಕ್‌ ಮುಖ್ಯಸ್ಥ ಮಾರ್ಕ್‌ ಜುಕರ್‌ಬರ್ಗ್‌ ಅವರು ವಿವರಣೆ ನೀಡಬೇಕು. ಈ ಸಂಬಂಧ ಬ್ರಿಟನ್‌ನ ಸಂಸದೀಯ ಮಂಡಳಿಗೆ ಬರಬೇಕು ಎಂದು ಬ್ರಿಟನ್‌ ಸಂಸದರು ಹೇಳಿದ್ದಾರೆ. ಈ ಬಗ್ಗೆ ಹೌಸ್‌ ಆಫ್‌ ಕಾಮನ್ಸ್‌ನ ಮುಖ್ಯಸ್ಥ ಡಮಿಯನ್‌ ಕೊಲಿನ್ಸ್‌ ಅವರು ಜುಕರ್‌ಬರ್ಕ್‌ಗೆ ಪತ್ರ ಬರೆದಿದ್ದಾರೆ.

Comments are closed.